ETV Bharat / entertainment

'ಸಲಾರ್​'ನಲ್ಲಿ ಪ್ರಭಾಸ್​ಗೆ ಧ್ವನಿಯಾದ ಕಂಚಿನ ಕಂಠದ ವಸಿಷ್ಠ ಸಿಂಹ - ಈಟಿವಿ ಭಾರತ ಕನ್ನಡ

'ಸಲಾರ್​' ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪ್ರಭಾಸ್​ ಪಾತ್ರಕ್ಕೆ ಸ್ಯಾಂಡಲ್​ವುಡ್​ ನಟ ವಸಿಷ್ಠ ಸಿಂಹ ಡಬ್ಬಿಂಗ್​ ಮಾಡಿದ್ದಾರೆ.

Actor Vasishta Simha Dubbing for Prabhas starrer Salaar movie
ಪ್ರಭಾಸ್​ 'ಸಲಾರ್​'ಗೆ ಧ್ವನಿಯಾದ ಕಂಚಿನ ಕಂಠದ ವಸಿಷ್ಠ ಸಿಂಹ
author img

By ETV Bharat Karnataka Team

Published : Nov 2, 2023, 6:04 PM IST

ಇಡೀ ಭಾರತೀಯ ಚಿತ್ರರಂಗವೇ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಕಾತರದಿಂದ ಕಾಯುತ್ತಿರುವ ಚಿತ್ರ 'ಸಲಾರ್​'. 'ಕೆಜಿಎಫ್​' ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟನೆಯ ಈ ಸಿನಿಮಾ ಇದೇ ವರುಷ ಡಿಸೆಂಬರ್​ 22ರಂದು ತೆರೆ ಕಾಣಲಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಸಿನಿಮಾದ ಸಾಕಷ್ಟು ವಿಚಾರಗಳು ಟ್ರೆಂಡ್​ ಆಗುತ್ತಿದ್ದು, ಇದೀಗ 'ಸಲಾರ್​'ನ ಮತ್ತೊಂದು ಅಪ್​ಡೇಟ್​ ಹೊರಬಿದ್ದಿದೆ.

ಬಿಗ್​ ಬಜೆಟ್​ನಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಅದ್ಧೂರಿ ಪ್ರಾಜೆಕ್ಟ್​ಗೆ ಸಂಬಂಧಿಸಿದಂತೆ ನಟ ಪ್ರಭಾಸ್​ ಡಬ್ಬಿಂಗ್​​ ವಿಚಾರದಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​ ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ. 'ಸಲಾರ್​' ಈಗಾಗಲೇ ಹಿಂದಿ ಭಾಷೆಗೆ ಡಬ್ಬಿಂಗ್​ ಮುಗಿಸಿದೆ. 'ಬಾಹುಬಲಿ' ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಪಾತ್ರಕ್ಕೆ ಡಬ್​ ಮಾಡಿದ್ದ ಖ್ಯಾತ ನಟ ಶರದ್​ ಕೇಳ್ಕರ್​ ಅವರು 'ಸಲಾರ್​'ನ ಹಿಂದಿ ಆವೃತ್ತಿಯಲ್ಲಿ ಪ್ರಭಾಸ್​ಗೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ: ಡಂಕಿ vs ಸಲಾರ್​: ಶಾರುಖ್​ ಸಿನಿಮಾ ಟೀಸರ್​​ ರಿಲೀಸ್​ ಬೆನ್ನಲ್ಲೇ ಫ್ಯಾನ್ಸ್ ವಾರ್​ ಶುರು - ಟ್ವೀಟ್​​ಗಳನ್ನೇನಿದೆ?

ಕಂಚಿನ ಕಂಠದಿಂದ ಕನ್ನಡ ಡಬ್ಬಿಂಗ್​: ಇದೀಗ 'ಸಲಾರ್​' ಚಿತ್ರದ ಕನ್ನಡ ಅವತರಣಿಕೆಯ ಡಬ್ಬಿಂಗ್​ ಕೂಡ ಮುಕ್ತಾಯಗೊಂಡಿದೆ ಎಂದು ವರದಿಯಾಗಿದೆ. ಇದರಲ್ಲಿ ಪ್ರಭಾಸ್​ ಪಾತ್ರಕ್ಕೆ ಸ್ಯಾಂಡಲ್​ವುಡ್​ ಖ್ಯಾತ ಖಳನಟ, ಕಂಚಿನ ಕಂಠದ ವಸಿಷ್ಠ ಸಿಂಹ ಧ್ವನಿ ನೀಡಿದ್ದಾರೆ. ಬ್ಲಾಕ್​ಬಸ್ಟರ್​ 'ಕೆಜಿಎಫ್​' ಚಿತ್ರದಲ್ಲಿ ವಿಲನ್​ ಆಗಿ ಮಿಂಚಿದ್ದ ವಸಿಷ್ಠ ಇದೀಗ ಪ್ರಶಾಂತ್​ ನೀಲ್​ ಅವರ 'ಸಲಾರ್​'ಗೂ ಸಾಥ್​ ನೀಡಿದ್ದಾರೆ. ಕೆಜಿಎಫ್​ನಲ್ಲಿ ಬಾಸ್​ ವಾಯ್ಸ್​ಗೆ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು. ಇದೀಗ ಇವರಿಂದಲೇ 'ಸಲಾರ್​' ಕನ್ನಡ ಭಾಷೆಯ ಡಬ್ಬಿಂಗ್​ ಆಗಿದ್ದು, ಸಿನಿಮಾಗೆ ಪ್ಲಸ್​ ಪಾಯಿಂಟ್​ ಎಂದೇ ಹೇಳಬಹುದು. ನಾಯಕನ ಪಾತ್ರದ ಬಗ್ಗೆ ವಿಶೇಷ ಮುನ್ನೆಚ್ಚರಿಕೆ ವಹಿಸುತ್ತಿರುವ ಪ್ರಶಾಂತ್​ ನೀಲ್​, ಚಿತ್ರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ತಯಾರಿಲ್ಲ ಎಂದು ಸ್ಪಷ್ಟವಾಗಿದೆ.

'ಸಲಾರ್​' ಚಿತ್ರದಲ್ಲಿ ಹೀರೋ ಪಾತ್ರಕ್ಕೆ ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ನಟರು ಡಬ್ಬಿಂಗ್​ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಪ್ರಭಾಸ್​ ಅವರೇ ಮಾಡಿದ್ದಾರೆ. ಆದರೆ, ನಾಯಕಿಯಾಗಿ ನಟಿಸಿರುವ ಶ್ರುತಿ ಹಾಸನ್​ ಅವರು ತಮ್ಮ ಪಾತ್ರಕ್ಕೆ ತಾವೇ ಧ್ವನಿಯಾಗಿದ್ದಾರೆ. 'ಸಲಾರ್​' ಸಿನಿಮಾದ ಐದು ಭಾಷೆಗಳಿಗೂ ಶ್ರುತಿ ಅವರೇ ಡಬ್ಬಿಂಗ್​ ಮಾಡುತ್ತಿದ್ದಾರೆ.

ಮತ್ತೊಂದೆಡೆ, ಪ್ರಭಾಸ್​ ಸದ್ಯ ವಿದೇಶದಲ್ಲಿದ್ದಾರೆ. ಸದ್ಯದಲ್ಲೇ ಅವರು ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಅವರು ಬಂದ ತಕ್ಷಣ 'ಸಲಾರ್​' ಚಿತ್ರದ ಪ್ರಚಾರವೂ ಶುರುವಾಗಲಿದೆ. ಇನ್ನೊಂದೆಡೆ, ದೀಪಾವಳಿ ಹಬ್ಬದ ಉಡುಗೊರೆಯಾಗಿ 'ಸಲಾರ್​' ಟ್ರೇಲರ್​ ಕೂಡ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಸಲಾರ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಸಿನಿಮಾದಲ್ಲಿ 750ಕ್ಕೂ ಹೆಚ್ಚು ವಾಹನಗಳ ಬಳಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.