ETV Bharat / entertainment

ಕನಕದಾಸರು, ಶಿಶುನಾಳರು ಹುಟ್ಟಿದ ಸ್ಥಳದಿಂದ ಪ್ರಚಾರ ಶುರು ಮಾಡಿದ್ದು ಹೆಮ್ಮೆ: ಕಿಚ್ಚ ಸುದೀಪ್​​ - Sudeep tweet about campaign for bjp

ವಿಧಾನಸಭೆ ಚುನಾವಣಾ ಪ್ರಚಾರ ಮಾಡಿದ್ದರ ಬಗ್ಗೆ ಕಿಚ್ಚ ಸುದೀಪ್​​ ಟ್ವೀಟ್ ಮಾಡಿದ್ದಾರೆ.

Sudeep tweet about campaign
ಕಿಚ್ಚ ಸುದೀಪ್​​
author img

By

Published : Apr 19, 2023, 8:13 PM IST

ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಬಲಿಷ್ಠ ನಾಯಕರು ನಾಮಪತ್ರ ಸಲ್ಲಿಸಿ ರಾಜಕೀಯ ಅಖಾಡಕ್ಕೆ ಧುಮುಕುತ್ತಿದ್ದಾರೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ನಾಮಿನೇಶನ್​ ಸಲ್ಲಿಸಿದ್ದಾರೆ. ಚಿತ್ರನಟ ಸುದೀಪ್ ಅವರು ಸಿಎಂ ಬೊಮ್ಮಾಯಿಗೆ ಈ ಮೊದಲೇ ತಿಳಿಸಿದಂತೆ ಸಾಥ್ ನೀಡಿದರು.

ಕಿಚ್ಚ ಸುದೀಪ್​​ ಟ್ವೀಟ್: ಇಂದು ಸಿಎಂ ಜೊತೆ ಸೇರಿ ರೋಡ್​ ಶೋ ನಡೆಸಿದ್ದರ ಬಗ್ಗೆ ಮತ್ತು ಬಿಜೆಪಿ ಪರವಾಗಿ ಪ್ರಚಾರ ಮಾಡಿರುವುದರ ಬಗ್ಗೆ ಸುದೀಪ್​​ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ'' ಎಂದು ಬರೆದುಕೊಂಡಿದ್ದಾರೆ.

  • 🙏🏼
    ನಮಸ್ಕಾರ
    ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೆ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ.
    ಎಲ್ಲರಿಗೂ ಶುಭವಾಗಲಿ... pic.twitter.com/u5Ed0UlZNK

    — Kichcha Sudeepa (@KicchaSudeep) April 19, 2023 " class="align-text-top noRightClick twitterSection" data=" ">

''ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಾಲ್ಗೊಂಡ ಜನಸಾಗರ ಕರುನಾಡಿನ ಭವ್ಯ ಭವಿಷ್ಯಕ್ಕೆ ಬಿಜೆಪಿಯೇ ಭರವಸೆ ಎಂದು ಸಾರಿ ಹೇಳುತ್ತಿದ್ದಾರೆ'' ಎಂದು ಬಿಜೆಪಿ ಟ್ವೀಟ್​ ಮಾಡಿಕೊಂಡು ಹಲವು ಫೋಟೋಗಳನ್ನು ಹಂಚಿಕೊಂಡಿದೆ.

ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್​ ಶೋ: ನಟ ಸುದೀಪ್​, ನಡ್ಡಾ ಜತೆಗೆ ಬಂದು ನಾಮಪತ್ರ ಸಲ್ಲಿಕೆ​.. ಕಾಂಗ್ರೆಸ್​​ ಅಂದರೆ ಭ್ರಷ್ಟಾಚಾರ ಎಂದು ನಡ್ಡಾ ವಾಗ್ದಾಳಿ

ರಾಜಕೀಯ ಪಕ್ಷಗಳು ಕಲಾವಿದರನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕಿಳಿಯುವುದು ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸುದೀಪ್​ ರಾಜಕೀಯಕ್ಕೆ ಸೇರುತ್ತಾರೆಂದು ಊಹಿಸಲಾಗಿತ್ತು. ಆದ್ರೆ ಕೆಲವು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಮತ್ತು ಸುದೀಪ್​ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಬಿಜೆಪಿ ಸೇರಲ್ಲ ಆದ್ರೆ ಸಿಎಂ ಬೊಮ್ಮಾಯಿ ಪ್ರಚಾರ ಮಾಡುತ್ತೇನೆಂದು ಸ್ವತಃ ಸುದೀಪ್​ ತಿಳಿಸಿದ್ದರು. ಇಂದು ಮೊದಲ ಚುನಾವಣಾ ಪ್ರಚಾರದಲ್ಲಿ ನಟ ಭಾಗಿಯಾಗಿ ಬಿಜೆಪಿ, ಪಿಎಂ ಮೋದಿ, ಮತ್ತು ಸಿಎಂ ಬೊಮ್ಮಾಯಿ ಪರ ಮಾತನಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​​ ರಾಯಲ್​ ಫ್ಯಾಮಿಲಿಯ ಸುಂದರ ಫೋಟೋಗಳಿವು.. ನೀವೂ ಒಮ್ಮೆ ನೋಡಿ ಬಿಡಿ!

ಸುದೀಪ್​ ಬಿಜೆಪಿ ಪರ ಪ್ರಚಾರಕ್ಕಿಳಿದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.