ETV Bharat / entertainment

ತಮಿಳು ನಿರ್ಮಾಪಕರ ಜೊತೆ ಸುದೀಪ್ ಹೊಸ ಸಿನಿಮಾ? - sudeep upcoming movies

ನಟ ಕಿಚ್ಚ ಸುದೀಪ್ ತಮ್ಮ ಹೊಸ ಸಿನಿಮಾವನ್ನು ಕಾಲಿವುಡ್(ತಮಿಳು) ​ನಿರ್ಮಾಪಕರ ಜೊತೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

actor sudeep ready to pan india movie
ಪ್ಯಾನ್​ ಇಂಡಿಯಾ ಸಿನಿಮಾಗೆ ಸುದೀಪ್​ ಸಜ್ಜು
author img

By

Published : Dec 6, 2022, 7:20 PM IST

Updated : Dec 6, 2022, 7:26 PM IST

'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟ ಸುದೀಪ್ ಅವರು ಪೊಲೀಸ್ ಆಫೀಸರ್ ಆಗಿ ಮನೋಜ್ಞವಾಗಿ ಅಭಿನಯಿಸಿದ್ದರು. ದೇಶಾದ್ಯಂತ ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 210 ಕೋಟಿ ರೂ ಸಂಗ್ರಹಿಸಿದೆ ಅನ್ನೋದು ಗಾಂಧಿನಗರದ ಮಂದಿಯ ಮಾತು. ಈ ಸಿನಿಮಾ ಯಶಸ್ಸಿನ ನಂತರ ಸಂಪೂರ್ಣ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ನಿರತರಾಗಿರುವ ಸುದೀಪ್‌ ಅವರ ಮುಂದಿನ ಸಿನಿಮಾ ಯಾವುದು?, ಯಾವ ನಿರ್ಮಾಪಕರ ಜೊತೆ? ಎನ್ನುವುದೆಲ್ಲ ಇದೀಗ ಸಿನಿಪ್ರೇಮಿಗಳು ಕೇಳುತ್ತಿರುವ ಪ್ರಶ್ನೆಗಳಾಗಿವೆ.

ತಮ್ಮ ಹೊಸ ಸಿನಿಮಾವನ್ನು ಕಾಲಿವುಡ್ ​ನಿರ್ಮಾಪಕರ ಜೊತೆ ಮಾಡುವ ಬಗ್ಗೆ ಚರ್ಚೆ ನಡೆದಿದೆಯಂತೆ. ಈ ಸಿನಿಮಾ ಕೂಡಾ ದೇಶಾದ್ಯಂತ ತೆರೆ ಕಾಣಲಿದೆ ಎಂದು ಸುದೀಪ್ ಆಪ್ತ ಮೂಲಗಳಿಂದ ಗೊತ್ತಾಗಿದೆ.

ತಮಿಳು ಚಿತ್ರರಂಗದಲ್ಲಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬಹುಕೋಟಿ ರೂಪಾಯಿ ಬಂಡವಾಳ ಸುರಿದು ಹಲವು ಭಾಷೆಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿವೆ. ಈ ಮಧ್ಯೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯ ಜೊತೆ ಕಿಚ್ಚನೊಂದಿಗೆ ಚಿತ್ರ ಮಾಡೋದು ಬಹುತೇಕ ಪಕ್ಕಾ ಆಗಿದೆಯಂತೆ. ಇತ್ತೀಚೆಗೆ ಇವರ ಪೊನ್ನಿಯಿನ್​ ಸೆಲ್ವನ್​ ಚಿತ್ರ ದೇಶಾದ್ಯಂತ ರಿಲೀಸ್ ಆಗಿತ್ತು.

ಇದನ್ನೂ ಓದಿ: ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲಕ್ಕೆ ನಟ ಸುದೀಪ್ ದಂಪತಿ ಭೇಟಿ, ಪೂಜೆ ಸಲ್ಲಿಕೆ

ತಮಿಳು ಚಿತ್ರರಂಗದಲ್ಲಿ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಸಾಕಷ್ಟು ಪ್ರಖ್ಯಾತಿ ಹೊಂದಿದೆ. ರಜನಿಕಾಂತ್​ ನಟನೆಯ 2.0, ದಳಪತಿ ವಿಜಯ್​ ನಟನೆಯ ಕತ್ತಿ, ಈಗ ತಲ ಅಜಿತ್, ಕಮಲ್​ ಹಾಸನ್​ ನಟನೆಯ ಇಂಡಿಯನ್​ 2 ಎಂಬಿತ್ಯಾದಿ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ. ಈಗಾಗಲೇ ಕೆಲವು ತೆಲುಗು ಚಿತ್ರಗಳನ್ನೂ ಮಾಡಿರುವ ಸಂಸ್ಥೆಯು ಈಗ ಕನ್ನಡವನ್ನೂ ಪ್ರವೇಶಿಸಿದೆ.

ಇದನ್ನೂ ಓದಿ: ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್​ಗಳಲ್ಲಿ 'ಕಾಂತಾರ ಶೆಟ್ರು' ಬ್ಯುಸಿ

2023ರ ಜನವರಿಯಲ್ಲಿ ಸುದೀಪ್‌ ನಟನೆಯ ಹೊಸ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ.​ ಬಿಗ್​ ಬಾಸ್​ ಶೋ ಜನವರಿಗೆ ಮುಕ್ತಾಯವಾಗಲಿದೆ.

Last Updated : Dec 6, 2022, 7:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.