ETV Bharat / entertainment

ಶ್ರೇಯಸ್ ತಲ್ಪಾಡೆ ಹೆಲ್ತ್ ಅಪ್ಡೇಟ್: ಹೃದಯಾಘಾತಕ್ಕೊಳಗಾಗಿದ್ದ ನಟನ ಆರೋಗ್ಯದಲ್ಲಿ ಚೇತರಿಕೆ - Shreyas Talpade heart attck

Shreyas Talpade: ಹೃದಯಾಘಾತಕ್ಕೊಳಗಾಗಿದ್ದ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರ ಆರೋಗ್ಯ ಸುಧಾರಿಸಿದೆ.

Shreyas Talpade
ಶ್ರೇಯಸ್ ತಲ್ಪಾಡೆ
author img

By ETV Bharat Karnataka Team

Published : Dec 17, 2023, 7:38 AM IST

Updated : Dec 17, 2023, 9:46 AM IST

ಗೋಲ್​ಮಾಲ್​ 3, ಗೋಲ್​ಮಾಲ್​​ ರಿಟರ್ನ್ಸ್ ಸೇರಿದಂತೆ ಹಲವು ಕಾಮಿಡಿ ಸಿನಿಮಾಗಳ ಮೂಲಕ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಜನಪ್ರಿಯ ನಟನ ಹೃದಯಾಘಾತದ ಸುದ್ದಿಯಿಂದ ಅಭಿಮಾನಿಗಳೂ ಸೇರಿದಂತೆ ಬಾಲಿವುಡ್ ಬೆಚ್ಚಿಬಿದ್ದಿದೆ. ಅದಾಗ್ಯೂ ಕಠಿಣ ಕ್ಷಣಗಳ ವಿರುದ್ಧ ಹೋರಾಡಿ ಚೇತರಿಸಿಕೊಳ್ಳುವಲ್ಲಿ ಬಾಲಿವುಡ್​ ತಾರೆ ಯಶಸ್ವಿಯಾಗಿದ್ದಾರೆ. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ನಟ ಶ್ರೇಯಸ್ ತಲ್ಪಾಡೆ ಸ್ಥಿತಿ ಸ್ಥಿರವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 14 ರಂದು (ಗುರುವಾರ) ಮುಂಬೈನಲ್ಲಿ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ವೆಲ್ಕಮ್ ಟು ದಿ ಜಂಗಲ್ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದರು. ಸಂಜೆ ವೇಳೆ ನಟನಿಗೆ ಅಸ್ವಸ್ಥತೆ ಉಂಟಾಗಿ, ಹೃದಯಾಘಾತವಾಯಿತು ಎಂದು ವರದಿಯಾಗಿದೆ. ಸದ್ಯ ನಟನ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆ ತಮ್ಮ ಕುಟುಂಬಸ್ಥರೊಂದಿಗೆ ಕೆಲ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ.

ಶ್ರೇಯಸ್ ತಲ್ಪಾಡೆ ಅವರು ಅಪ್ನಾ ಸಪ್ನಾ ಮನಿ ಮನಿ, ಡೋರ್, ಓಂ ಶಾಂತಿ ಓಂ, ಗೋಲ್​ಮಾಲ್​​ ರಿಟರ್ನ್ಸ್ ಮತ್ತು ವೆಲ್ಕಮ್​​ ಟು ಸಜ್ಜನ್‌ಪುರದಂತಹ ಹಲವು ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಮರಾಠಿ ಮನರಂಜನಾ ವಲಯದಲ್ಲಿಯೂ ಮನ್ನಣೆ ಗಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಉತ್ತಮ ಅಭಿನಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ತಲ್ಪಾಡೆ ಆರೋಗ್ಯ ಸ್ಥಿರ: ಪತ್ನಿ ದೀಪ್ತಿ ಕೊಟ್ರು ಮಾಹಿತಿ

ಕಂಗನಾ ರಣಾವತ್​​ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗಪ್ಪಳಿಸಲಿದೆ. ಜೊತೆಗೆ, ಬಾಲಿವುಡ್​ ಕಿಲಾಡಿ ಸೇರಿದಂತೆ ಬಹುತಾರಾಗಣದ ವೆಲ್ಕಮ್ ಟು ದಿ ಜಂಗಲ್ ಸಿನಿಮಾದ ಭಾಗವಾಗಿದ್ದಾರೆ. ಈ ಸಿನಿಮಾ ಪ್ರೇಕ್ಷಕರನ್ನು ನಕ್ಕುನಲಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್, ಅಕ್ಷಯ್ ಕುಮಾರ್, ಸಂಜಯ್ ದತ್ ಸೇರಿದಂತೆ ಬಾಲಿವುಡ್​ನ ಹಲವು ತಾರೆಯರು ಈ ಚಿತ್ರದಲ್ಲಿದ್ದಾರೆ. ಇದೇ ಚಿತ್ರದ ಶೂಟಿಂಗ್​ ಸಂದರ್ಭ ನಟನಿಗೆ ಹೃದಯಾಘಾತವಾಗಿತ್ತು.

ಇದನ್ನೂ ಓದಿ: 'ಟಾಪ್ 50 ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿ'ಯಲ್ಲಿ ಶಾರುಖ್​ ಖಾನ್​ ನಂಬರ್ ಒನ್​

ಗುರುವಾರ ನಟನಿಗೆ ಹೃದಯಾಘಾತ ಆಗಿದ್ದು, ಶುಕ್ರವಾರ ಪತ್ನಿ ದೀಪ್ತಿ ಶ್ರೇಯಸ್ ತಲ್ಪಾಡೆ ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ ಅಭಿಮಾನಿಗಳಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದರು. ಶ್ರೇಯಸ್ ಅವರ ಆರೋಗ್ಯ ಚೇತರಿಕೆಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಶೀಘ್ರದಲ್ಲೇ ಡಿಸ್ಚಾರ್ಜ್​ ಆಗಲಿದ್ದಾರೆ. ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿಸಿದ್ದರು.

Last Updated : Dec 17, 2023, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.