ETV Bharat / entertainment

ಗಡಿ ವಿಚಾರ: 'ರಾಜಕಾರಣಿಗಳು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿಪಡಿಸಬೇಕು'- ಶಿವಣ್ಣ - Shiva rajkumar on Karnataka border dispute

ಇಂದು ಕುಂದಾನಗರಿಯಲ್ಲಿ ವೇದ ಪ್ರಚಾರ ಕಾರ್ಯ - ​ ಕರ್ನಾಟಕ ಗಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಟ ಶಿವ ರಾಜ್​ಕುಮಾರ್ - ವ್ಯವಸ್ಥೆ ಸರಿಪಡಿಸಲು ರಾಜಕಾರಣಿಗಳಿಗೆ ಕರೆ

veda movie promotion
ವೇದ ಪ್ರಚಾರ ಕಾರ್ಯ
author img

By

Published : Jan 6, 2023, 7:12 PM IST

ಗಡಿ ವಿಚಾರ: 'ರಾಜಕಾರಣಿಗಳು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿಪಡಿಸಬೇಕು'- ಶಿವಣ್ಣ

ಬೆಳಗಾವಿ: 'ವೇದ' ಕರುನಾಡ ಚಕ್ರವರ್ತಿಯ 125ನೇ ಚಿತ್ರ. ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅಭಿನಯದ ಈ ವೇದ ಸಿನಿಮಾ ಡಿಸೆಂಬರ್​ 30 ರಂದು ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿನಿ ಪ್ರಿಯರು ಭೇಷ್​ ಎಂದಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ರಿಲೀಸ್​ ಆಗಿರುವ ಈ ಸಿನಿಮಾ ಚಿತ್ರ ಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.

ವೇದ ಸಿನಿಮಾದ ಭರ್ಜರಿ ಯಶಸ್ವಿಗೆ ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಚಿತ್ರತಂಡ ಪ್ರತಿ ಜಿಲ್ಲೆಗೂ ಭೇಟಿ ನೀಟಿ ಸಿನಿಮಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ನಟ ಶಿವ ರಾಜ್​ಕುಮಾರ್​ ಅವರಿಗೆ ಪತ್ನಿ, ಈ ಚಿತ್ರದ ನಿರ್ಮಾಪಕಿಯೂ ಆಗಿರುವ ಗೀತಾ ಶಿವ ರಾಜ್​ಕುಮಾರ್​ ಸಾಥ್ ನೀಡಿದ್ದಾರೆ. ಇಂದು ಬೆಳಗಾವಿಗೆ ಭೇಟಿ ಕೊಟ್ಟಿದ್ದು, ಕರ್ನಾಟಕ ಗಡಿ ವಿಚಾರವಾಗಿ ಶಿವಣ್ಣ ಮಾತನಾಡಿದ್ದಾರೆ.

ಮೊದಲು ನಾವು ಭಾರತಿಯರು: ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಶಿವ ರಾಜ್​ಕುಮಾರ್​, ಮಹಾರಾಷ್ಟ್ರ - ಕರ್ನಾಟಕ ಗಡಿ ವಿಚಾರದಲ್ಲಿ ನಮ್ಮ ರಾಜಕೀಯ ನಾಯಕರು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿ ಪಡಿಸಬೇಕು. ಗಡಿ ವಿಚಾರ ಏನೇ ಇದ್ದರೂ ಮೊದಲು ನಾವು ಭಾರತಿಯರು, ನಾವೆಲ್ಲರೂ ಒಂದೇ ಎಂದು ಭಾವಿಸಬೇಕು. ಯಾರ ಮೆಲೂ ದ್ವೇಷವಿಲ್ಲ, ಎಲ್ಲರೂ ಚೆನ್ನಾಗಿರಲಿ, ನಾವು ಮೊದಲು ಎಲ್ಲಿ ಬಾಳುತ್ತಿದ್ದೇವೆ ಎಂಬುದು ಮುಖ್ಯ. ಮೊದಲು ಕನ್ನಡಕ್ಕೆ ಗೌರವ ಕೊಡಬೇಕು ಎಂದರು.

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ: ನಾನು ಮುಂಬರುವ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಆಚರಣೆ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು. ಇನ್ನು ವೇದ ಚಿತ್ರ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಚಿತ್ರ ವೀಕ್ಷಣೆ ಮಾಡುತ್ತಿರುವುದು ನಮಗೆ ಸಂತಸ ಕೊಟ್ಟಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಣ್ಣನಿಗೆ ಅದ್ಧೂರಿ ಸ್ವಾಗತ: ನಗರಕ್ಕೆ ಬಂದ ಶಿವ ರಾಜ್​​ಕುಮಾರ್ ಮತ್ತು ಚಿತ್ರ ತಂಡವನ್ನು ಕುಂದಾನಗರಿ ಜನತೆ ಅದ್ಧೂರಿಯಾಗಿ ಬರಮಾಡಿಕೊಂಡರು. ಮಾರ್ಗದ ಉದ್ದಕ್ಕೂ ದಿ. ಪುನೀತ್ ರಾಜ್​​ಕುಮಾರ್ ಹಾಗೂ ಶಿವ ರಾಜ್​ಕುಮಾರ್​​ ಜಯಘೋಷ ಮೊಳಗಿದವು. ತೆರೆದ ವಾಹನದಲ್ಲಿ ಶಿವ ರಾಜ್​ಕುಮಾರ್​ ದಂಪತಿ ಚೆನ್ನಮ್ಮ ವೃತ್ತದಿಂದ ಚಿತ್ರಾ ಚಿತ್ರಮಂದಿರಕ್ಕೆ ಆಗಮಿಸಿದರು. ಈ ವೇಳೆ, ಅಭಿಮಾನಿಗಳ ವ್ಯಕ್ತಪಡಿಸಿದ ಪ್ರೀತಿಗೆ ಶಿವಣ್ಣ ಫಿದಾ ಆದರು. ಪುನೀತ್ ರಾಜ್​​​​ಕುಮಾರ್​ ಅವರ ಹಾಡಿಗೆ ಮತ್ತು ವೇದ ಚಿತ್ರದ ಹಾಡಿಗೆ ಹ್ಯಾಟ್ರಿಕ್ ಹೀರೋ ಹೆಜ್ಜೆ ಹಾಕಿದರು. ಬಳಿಕ ಮಾರ್ಗ ಮಧ್ಯ ಶಿವಣ್ಣ ಮಿರ್ಚಿ ಬಜ್ಜಿ ಸವಿದರು. ನಂತರ ಧಾರವಾಡದ ಕಡೆ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ: ಗದಗಕ್ಕೆ ನಟ ಶಿವಣ್ಣ ಭೇಟಿ: ಏಣಿ ಹತ್ತುವಾಗ ಜಾರಿದ ಕಾಲು!

ಫ್ಯಾನ್ಸ್ ವಾರ್​ ಬೇಡ: ನಿನ್ನೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವೇದ ಪ್ರಚಾರ ವೇಳೆ ಫ್ಯಾನ್ಸ್ ವಾರ್ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದರು. ಅಭಿಮಾನಿಗಳು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್ ನಡೆಸುತ್ತಿರುವ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಈ ಫ್ಯಾನ್ಸ್ ವಾರ್ ಬೇಡ ಅಂತ‌ ಈಗಾಗಲೇ ಹಲವು ಬಾರಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಚೆನ್ನಾಗಿರೋಣ ಎಂಬುದೇ‌ ನನ್ನ ಆಸೆ. ನನಗೆ ಎಲ್ಲರ ಬಗ್ಗೆಯೂ ಪ್ರೀತಿ ಇದೆ. ನನ್ನ ಹೃದಯ ತೆರದು ನೋಡಿದ್ರೆ ಕೇವಲ ಪ್ರೀತಿಯೇ ಸಿಗುತ್ತೆ ಎಂದು ನಟ ಶಿವ ರಾಜ್​ಕುಮಾರ್​ ತಿಳಿಸಿದ್ದರು.

ಇದನ್ನೂ ಓದಿ: ಎಲ್ರೂ ಚೆನ್ನಾಗಿರೋಣ ಎಂಬುದೇ ನನ್ನ ಆಸೆ: ಫ್ಯಾನ್ಸ್ ವಾರ್​ಗೆ ಶಿವ ರಾಜ್​ಕುಮಾರ್ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.