ETV Bharat / entertainment

'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು - kabzaa movie

ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾವಾದ ಕಬ್ಜ ಟ್ರೇಲರ್​ ನಾಳೆ ಬಿಡುಗಡೆ ಆಗಲಿದ್ದು, 'ಕಬ್ಜ'ಕ್ಕೆ ಶಿವಣ್ಣನ ಎಂಟ್ರಿ ವಿಚಾರವನ್ನು ಇಂದು ಬಹಿರಂಗಪಡಿಸಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ ಚಿತ್ರತಂಡ.

shiva rajkumar entry to kabzaa
'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ
author img

By

Published : Mar 3, 2023, 3:32 PM IST

ಅದ್ಧೂರಿ ಮೇಕಿಂಗ್ ಹಾಗೂ 80ರ ದಶಕದ ಅಂಡರ್ ವರ್ಲ್ಡ್‌ ಕಥೆಯನ್ನಾಧರಿಸಿರುವ 'ಕಬ್ಜ' ಭಾರತೀಯ ಸಿನಿಮಾ ರಂಗದಲ್ಲಿ ಬೇಜಾನ್ ಸೌಂಡ್ ಮಾಡುತ್ತಿರುವ ಚಿತ್ರ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯ ಭೂಮಿಕೆಯಲ್ಲಿರುವ, ನಿರ್ದೇಶಕ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳಿರುವ ಕಬ್ಜ ಚಿತ್ರದ ಟ್ರೇಲರ್ ಬಿಡುಗಡೆಗೆ ಒಂದು ದಿನ ಬಾಕಿ ಇದೆ. ಅಷ್ಟರಲ್ಲೇ ನಿರ್ದೇಶಕ ಆರ್ ಚಂದ್ರು ಸಿನಿ ರಸಿಕರಿಗೆ ಮತ್ತೊಂದು ಸರ್​ಪ್ರೈಸ್​ ಕೊಟ್ಟಿದ್ದಾರೆ.

ಸಖತ್​​ ಸುದ್ದಿಯಲ್ಲಿರುವ ಈ ಕಬ್ಜ ಚಿತ್ರದಲ್ಲಿ ರಿಯಲ್​​ ಸ್ಟಾರ್​ ಉಪೇಂದ್ರ ಜೊತೆ ಸುದೀಪ್ ಸ್ಕ್ರೀನ್ ಶೇರ್ ಮಾಡಿರೋದು ಮಾತ್ರವಲ್ಲ, ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್ ಸಹ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಆದರೆ, ನಿರ್ದೇಶಕ ಆರ್ ಚಂದ್ರು ಈ ಬಗ್ಗೆ ಸುಳಿವು ನೀಡದೇ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಇದೀಗ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹೊತ್ತಿನಲ್ಲಿ ಪ್ರೇಕ್ಷಕರಿಗೆ ದೊಡ್ಡ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಕಬ್ಜ ಪೋಸ್ಟರ್​: ಹೌದು, ಶಿವ ರಾಜ್​ಕುಮಾರ್ ಗನ್​​ ಹಿಡಿದಿರುವ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇಂದು ಉತ್ತರ ಕೊಟ್ಟಿದೆ ಚಿತ್ರತಂಡ. ದೊಡ್ಮನೆ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿರೋ ದೊಡ್ಡ ಸುದ್ದಿ ಇದು. ಉಪೇಂದ್ರ ಹಾಗೂ ಸುದೀಪ್ ಮಾತ್ರವಲ್ಲ, ಶಿವಣ್ಣ ಕೂಡ ಕಬ್ಜದಲ್ಲಿ ಗನ್​ ಹಿಡಿದು ಕಮಾಲ್ ಮಾಡಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಮೂವರು ಸೂಪರ್ ಸ್ಟಾರ್​ಗಳಿಗೆ ನಿರ್ದೇಶಕ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಬಹುನಿರೀಕ್ಷಿತ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಹಾಗೂ ಸುದೀಪ್ ಜೊತೆ ಶಿವ ರಾಜ್​​ಕುಮಾರ್ ಆಗಮನ ಆಗಿದ್ದು, ಈ ಚಿತ್ರದ ಮೇಲೆ ಬೆಟ್ಟದಷ್ಟಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಇದರೊಂದಿಗೆ ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಹೀಗೆ ದೊಡ್ಡ ತಾರಬಳಗ ಮೂಲಕ ಗಮನ ಸೆಳೆದಿರುವ ಕಬ್ಜ ಚಿತ್ರದ ಟ್ರೇಲರ್ ನಾಳೆ ಅನಾವರಣಗೊಳ್ಳಲಿದೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಭೋಜ್‌ಪುರಿ, ಒಡಿಯಾ ಸೇರಿದಂತೆ ಏಳು ಭಾಷೆಗಳಲ್ಲಿ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ಹುಟ್ಟು ಹಬ್ಬದಂದು ವರ್ಲ್ಡ್ ವೈಡ್ ತೆರೆ ಕಾಣುತ್ತಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ನಿರ್ದೇಶನದ ಜೊತೆಗೆ ಬಹು ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅದ್ಧೂರಿ ಮೇಕಿಂಗ್ ಇರುವ ಕಬ್ಜ ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಇದೆ.

ಇದನ್ನೂ ಓದಿ: ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಬಹುನಿರೀಕ್ಷಿತ ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆ ಮುಹೂರ್ತ ಫಿಕ್ಸ್

ಹೀಗೆ ಬಹು ವಿಶೇಷತೆ ಇರುವ ಕನ್ನಡದ ಹೆಮ್ಮೆಯ ಕಬ್ಜ ಸಿನಿಮಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಹವಾ ಕ್ರಿಯೇಟ್ ಮಾಡುತ್ತಿದೆ. ಬಿಡುಗಡೆಗೂ ಮುನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ನಿರ್ದೇಶಕ ಹಾಗು ನಿರ್ಮಾಪಕ ಆರ್ ಚಂದ್ರು ಅವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಟೀಸರ್​​ನಿಂದಲೇ ಭಾರತೀಯ ಚಿತ್ರರಂಗದಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ಕಬ್ಜ ಚಿತ್ರದ ಟ್ರೇಲರ್​ ಹೇಗಿರುತ್ತೆ ಅನ್ನೋ ಕೌತುಕ ಕನ್ನಡದ ಮೂವರು ಸೂಪರ್ ಸ್ಟಾರ್​ಗಳ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ಆಸ್ಕರ್ ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ: ಹೆಮ್ಮೆ ವ್ಯಕ್ತಪಡಿಸಿದ ಪತಿ ರಣ್​​ವೀರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.