ETV Bharat / entertainment

ಬಾಲಿವುಡ್​ ಹಿರಿಯ ನಟ ಸಮೀರ್​ ಖಾಖರ್ ಇನ್ನಿಲ್ಲ! - ಸಮೀರ್​ ಖಾಖರ್ ಲೇಟೆಸ್ಟ್ ನ್ಯೂಸ್

ಹಿಂದಿ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ಗುರುತಿಸಿಕೊಂಡಿದ್ದ ನಟ ಸಮೀರ್​ ಖಾಖರ್ ತಮ್ಮ 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

Sameer Khakhar death
ನಟ ಸಮೀರ್​ ಖಾಖರ್ ನಿಧನ
author img

By

Published : Mar 15, 2023, 3:44 PM IST

ಹಿಂದಿ ಚಿತ್ರರಂಗದ ಹಿರಿಯ ನಟ ಸಮೀರ್ ಖಾಖರ್ (Sameer Khakhar) ನಿಧನರಾಗಿದ್ದಾರೆ. 71ರ ಹರೆಯದ ನಟನ ನಿಧನದ ಸುದ್ದಿಯನ್ನು ಅವರ ಸಹೋದರ ಗಣೇಶ್ ಖಚಿತಪಡಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಸಮೀರ್ ಮೃತಪಟ್ಟಿದ್ದಾರೆ ಎಂದು ಇಂದು ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಉಸಿರಾಟದ ಸಮಸ್ಯೆ ಹಿನ್ನೆಲೆ ಅವರನ್ನು ಮುಂಬೈನ ಬೊರಿವಲಿಯಲ್ಲಿರುವ ಎಂಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

  • For some reason I was nicknamed Khopdi in college after his iconic character in Nukkad. My closest friends from the time still call me Khopdi. But I guess it’s time to say goodbye to the OG. Goodbye Sameer Khakhar. Thank you for the memories. pic.twitter.com/WCpL1Iizbj

    — Hansal Mehta (@mehtahansal) March 15, 2023 " class="align-text-top noRightClick twitterSection" data=" ">

ಸಹೋದರ ಗಣೇಶ್ ಮಾಹಿತಿ.. "ನಿನ್ನೆ ಬೆಳಗ್ಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ನಾವು ವೈದ್ಯರನ್ನು ಮನೆಗೆ ಕರೆಸಿದ್ದೆವು. ಅವರನ್ನು ದಾಖಲಿಸುವಂತೆ ವೈದ್ಯರು ಸೂಚಿಸಿದರು. ಈ ಹಿನ್ನೆಲೆ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದೆವು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಯಿತು. ಅವರಿಗೆ ಬಹು ಅಂಗಾಂಗ ವೈಫಲ್ಯವಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ 4.30ಕ್ಕೆ ಅವರು ನಿಧನರಾಗಿದ್ದಾರೆ" ಎಂದು ನಟ ಸಮೀರ್​ ಖಾಖರ್ ಸಹೋದರ ಗಣೇಶ್ ಮಾಹಿತಿ ನೀಡಿದರು.

ನಟನ ನಿಧನಕ್ಕೆ ಸಂತಾಪ: ಈ ಆಘಾತಕಾರಿ ಸುದ್ದಿ ತಿಳಿದ ನಂತರ ಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. "ಕೆಲವು ಕಾರಣಗಳಿಂದಾಗಿ ನುಕ್ಕಡ್‌ನಲ್ಲಿನ ಅವರ ಅಪ್ರತಿಮ ಪಾತ್ರದ ನಂತರ ನನಗೆ ಕಾಲೇಜಿನಲ್ಲಿ ಖೋಪ್ಡಿ ಎಂದು ಅಡ್ಡಹೆಸರು ಇಡಲಾಗಿತ್ತು. ಅಂದಿನ ನನ್ನ ಸ್ನೇಹಿತರು ಈಗಲೂ ನನ್ನನ್ನು ಖೋಪ್ಡಿ ಎಂದು ಕರೆಯುತ್ತಾರೆ. ಆದರೆ ಆ ನಟನಿಗೆ ಇಂದು ವಿದಾಯ ಹೇಳುವ ಸಮಯ ಬಂದಿದೆ. ಭಾವಪೂರ್ಣ ವಿದಾಯ ಸಮೀರ್ ಖಾಖರ್. ನೆನಪುಗಳಿಗೆ ಧನ್ಯವಾದಗಳು" ಎಂದು ಹನ್ಸಲ್ ಮೆಹ್ತಾ ತಿಳಿಸಿದರು. ಇವರಲ್ಲದೇ ಚಿತ್ರರಂಗದವರು, ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

ಸಮೀರ್ ಖಾಖರ್ ಸಿನಿ ಪಯಣ: ನಟ ಸಮೀರ್ ಖಾಖರ್ ಸಿನಿ ಜಗತ್ತಿನಲ್ಲಿ ಸುಮಾರು ನಾಲ್ಕು ದಶಕ ಕಾಲ ಗುರುತಿಸಿಕೊಂಡಿದ್ದಾರೆ. ಅವರು ನುಕ್ಕಡ್ ಮತ್ತು ಸರ್ಕಸ್ ಟಿವಿ ಶೋಗಳಲ್ಲಿ ತಮ್ಮ ಪಾತ್ರ, ಅಭಿನಯದಿಂದ ಖ್ಯಾತಿ ಪಡೆದರು. ಅವರು ಶ್ರೀಮಾನ್ ಶ್ರೀಮತಿ ಮತ್ತು ಅದಾಲತ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹಸೀ ತೋ ಫಸಿ, ಜೈ ಹೋ, ಪಟೇಲ್ ಕಿ ಪಂಜಾಬಿ ಶಾದಿ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುಧೀರ್ ಮಿಶ್ರಾ ನಿರ್ದೇಶನದ ಸೀರಿಯಸ್ ಮೆನ್ ಮತ್ತು ವಿಕಾಸ್ ಬಹ್ಲ್ ಅವರ ವೆಬ್ ಸರಣಿ ಸೂರ್ಯಕಾಂತಿಯಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ರಾಜ್ ಮತ್ತು ಡಿಕೆ ನಿರ್ದೇಶನದ ಶಾಹಿದ್ ಕಪೂರ್ ನಟನೆಯ ಒಟಿಟಿ ಸೀರಿಸ್​ ಫಾರ್ಜಿಯಲ್ಲಿ ಸಹ ಸಮೀರ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಒಂದು ದಿನಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತೇನೆ: ನಟ ಪವನ್​ ಕಲ್ಯಾಣ್​​

ಒಟ್ಟಾರೆ 25ಕ್ಕೂ ಹೆಚ್ಚು ಚಲನಚಿತ್ರಗಳು, ಸರಿಸುಮಾರು 7 ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. 1984 ರಿಂದ 1998ರ ವರೆಗೆ ಕಿರುತೆರೆ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಬಹಳ ಸಕ್ರಿಯರಾಗಿದ್ದರು. ಇದಾದ ನಂತರ ವೃತ್ತಿಜೀವನದಲ್ಲಿ ಕೆಲ ವರ್ಷಗಳ ಕಾಲ ವಿರಾಮ ತೆಗೆದುಕೊಂಡರು. 2013ರಲ್ಲಿ ಸೆಕೆಂಡ್​​ ಇನ್ನಿಂಗ್ಸ್​ ಆರಂಭಿಸಿ ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ರಂಜಿಸಿದರು.

ಇದನ್ನೂ ಓದಿ: ಆನ್‌ಲೈನ್​ನಲ್ಲಿ ಸೋರಿಕೆಯಾದ ಟಿಕ್ ಟಾಕ್ ತಾರೆಯ ಖಾಸಗಿ ವಿಡಿಯೋ.. ಸ್ನೇಹಿತರಿಂದಲೇ ಕೃತ್ಯ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.