ETV Bharat / entertainment

ಮಗನ ಮೆಹಂದಿಯಲ್ಲಿ ಪತ್ನಿ ಜೊತೆ ಕ್ರೇಜಿ ಸ್ಟಾರ್​ ರವಿಚಂದ್ರನ್ ಮಸ್ತ್ ಡ್ಯಾನ್ಸ್: ವಿಡಿಯೋ - ಕ್ರೇಜಿ ಸ್ಟಾರ್​ ರವಿಚಂದ್ರನ್ ಪತ್ನಿ ಸುಮತಿ

ಪುತ್ರ ಮನೋರಂಜನ್ ರವಿಚಂದ್ರನ್ ಮತ್ತು ಸಂಗೀತಾ ದೀಪಕ್ ಮೆಹಂದಿ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್​ ರವಿಚಂದ್ರನ್ ಪತ್ನಿ ಸುಮತಿ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

crazy star ravichandran
ರವಿಚಂದ್ರನ್
author img

By

Published : Aug 21, 2022, 11:03 AM IST

Updated : Aug 21, 2022, 12:49 PM IST

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲೀಗ ಮದುವೆ ಸಂಭ್ರಮ. ಹಿರಿಯ ಪುತ್ರ ಮನೋರಂಜನ್ ಅವರು ಸಂಗೀತಾ ದೀಪಕ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿರುವ ವೈಟ್ ಪೆಟಲ್ಸ್‌ನ ತ್ರಿಪುರ ವಾಸಿನಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಿತು.

ಅದಕ್ಕೂ ಮುಂಚೆ ರವಿಚಂದ್ರನ್ ಕುಟುಂಬದವರು, ಸಂಬಂಧಿಕರು, ಮೆಹಂದಿ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದರು. ಮನೋರಂಜನ್ ರವಿಚಂದ್ರನ್, ಸಹೋದರ ವಿಕ್ರಮ್ ಸೇರಿದಂತೆ ಸಂಬಂಧಿಕರು ಕುಣಿದು ಕುಪ್ಪಳಿಸಿದರು. ಈ ಸಂಭ್ರಮದಲ್ಲಿ ರವಿಚಂದ್ರನ್ ಕೂಡ ಪತ್ನಿ ಸುಮತಿ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹಿಪ್ ಆಫ್ ಮ್ಯೂಸಿಕ್‌ಗೆ ಇಡೀ ಕ್ರೇಜಿ ಕುಟುಂಬ ಸಖತ್ ಮಸ್ತಿ ಮಾಡಿದೆ.

ಮೆಹಂದಿ ಕಾರ್ಯಕ್ರಮ

ಶಿವರಾಜ್ ಕುಮಾರ್, ರಾಘವೇಂದ್ರ ಕುಮಾರ್, ಬಹುಭಾಷೆ ನಟಿ ಖುಷ್ಬೂ, ನಾಗಾಭರಣ, ಹಂಸಲೇಖ, ಉಮಾಶ್ರೀ ಹಾಗು ರಾಜಕಾರಣಿಗಳಾದ ಸಿ ಟಿ ರವಿ, ಕಟ್ಟಾ ಸುಬ್ರಮಣ್ಯಂ ನಾಯ್ಡು ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಹಾಗು ರಾಜಕೀಯ ಗಣ್ಯರು ಆಗಮಿಸಿ ನೂತನ ವಧು-ವರರಿಗೆ‌ ಶುಭ ಕೋರಿದರು.

ಇದನ್ನೂ ಓದಿ: ನನ್ನ ತಂದೆಯೇ ನನಗೆ ರೋಲ್ ಮಾಡೆಲ್: ರವಿಚಂದ್ರನ್ ಪುತ್ರ ವಿಕ್ರಮ್

ಸಾಹೇಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮನೋರಂಜನ್, ಆನಂತರ 'ಬೃಹಸ್ಪತಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇತ್ತೀಚೆಗೆ ಇವರ ನಟನೆಯ 'ಮುಗಿಲ್‌ಪೇಟೆ', 'ಪ್ರಾರಂಭ' ಸಿನಿಮಾಗಳು ಕೂಡ ತೆರೆಕಂಡಿವೆ. ಆದರೆ, ಮನೋರಂಜನ್ ಒಂದೊಳ್ಳೆಯ ಬ್ರೇಕ್‌ಗಾಗಿ ಎದುರು ನೋಡುತ್ತಿದ್ದಾರೆ‌.

ಇದನ್ನೂ ಓದಿ: 'ರವಿ ಬೋಪಣ್ಣ' ಪ್ರೀ ರಿಲೀಸ್ ಈವೆಂಟ್: ಸಿನಿಮಾ‌ ಇಂಡಸ್ಟ್ರಿಯಲ್ಲಿ ಜೇಬು ತುಂಬಿಲ್ಲ, ಪ್ರೀತಿ ತುಂಬಿದೆ ಎಂದ ಕ್ರೇಜಿಸ್ಟಾರ್​​

Last Updated : Aug 21, 2022, 12:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.