ETV Bharat / entertainment

ವಿಕ್ರಮ್​ ನಟನೆಯ 'ಪೊನ್ನಿಯಿನ್​ ಸೆಲ್ವನ್​​' ಚಿತ್ರದ ಟೀಸರ್​ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ

ಬಹುನಿರೀಕ್ಷಿತ ಪೊನ್ನಿಯಿನ್ ಸೆಲ್ವನ್​ ಚಿತ್ರದ ಮೊದಲ ಭಾಗದ ಟೀಸರ್​ ರಿಲೀಸ್​ ಆಗಿದೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಐದು ಭಾಷೆಗಳಲ್ಲಿ ಟೀಸರ್​ ಬಿಡುಗಡೆಯಾಗಿದ್ದು, ಭೀಕರ ಯುದ್ಧಗಳ ಸನ್ನಿವೇಶ ಹೆಚ್ಚು ಗಮನ ಸೆಳೆದಿದೆ.

Ponniyin selvan teaser
Ponniyin selvan teaser
author img

By

Published : Jul 8, 2022, 10:50 PM IST

ಚೆನ್ನೈ(ತಮಿಳುನಾಡು): ಮಣಿರತ್ನಂ ನಿರ್ದೇಶನದ ಪೊನ್ನಿಯಿನ್​ ಸೆಲ್ವನ್​​ ಭಾಗ-1 ಚಿತ್ರದ ಟೀಸರ್​ ಇಂದು ರಿಲೀಸ್​ ಆಗಿದೆ. ಚಿತ್ರದಲ್ಲಿ ತಮಿಳುನಾಡು ನಟ ವಿಕ್ರಮ್​ ನಟನೆ ಮಾಡಿದ್ದು, ಅದ್ಧೂರಿ ಸೆಟ್​ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದ ಕನ್ನಡ ಟೀಸರ್​​​ ಅನ್ನು ನಟ ರಕ್ಷಿತ್​ ಶೆಟ್ಟಿ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ನಟ ವಿಕ್ರಮ್​, ಜಯಮ್ ರವಿ, ಕಾರ್ತಿ, ತ್ರಿಷಾ, ಶೋಬಿತಾ, ಪ್ರಕಾಶ್ ರಾಜ್​​ ಸೇರಿದಂತೆ ಅನೇಕರು ನಟನೆ ಮಾಡಿದ್ದು, ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನವಿದೆ.

ಬಹಳ ವರ್ಷಗಳ ಬಳಿಕ ನಟಿ ಐಶ್ವರ್ಯಾ ರೈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಹೆಚ್ಚಿನ ಹೈಲೈಟ್​ ಆಗಿದೆ. ಇನ್ನೂ ಮಣಿರತ್ನಂ ಹಾಗೂ ಐಶ್ವರ್ಯಾ ಒಟ್ಟಾಗಿ ಕೆಲಸ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ.

  • Have always looked up to and been inspired by #ManiRatnam sir. Grateful for the chance to release the teaser of the genius filmmaker’s next offering!

    Grandeur, vision and brilliance. The #PS1 teaser has it all 😊https://t.co/c68YOnwWDm

    — Rakshit Shetty (@rakshitshetty) July 8, 2022 " class="align-text-top noRightClick twitterSection" data=" ">

ಕಲ್ಕಿ ಕೃಷ್ಣಮೂರ್ತಿ ಅವರ 1955ರಲ್ಲಿ ಬರೆದ ಪೊನ್ನಿಯಿನ್​ ಸೆಲ್ವನ್​ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಇಂದು ಟೀಸರ್ ರಿಲೀಸ್ ಆಗಿದೆ. ಈ ಚಿತ್ರ ಸೆಪ್ಟೆಂಬರ್​ 30ರಂದು ರಿಲೀಸ್​ ಆಗಲಿದೆ. 'ಪೊನ್ನಿಯಿನ್​ ಸೆಲ್ವನ್'​ ಚಿತ್ರದ ಟ್ರೇಲರ್ ಕಾರ್ಯಕ್ರಮದಲ್ಲಿ ನಟ ವಿಕ್ರಮ್ ಭಾಗಿಯಾಗಬೇಕಾಗಿತ್ತು. ಆದರೆ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಹೊರಗುಳಿದಿದ್ದಾರೆ.

ಎರಡು ಭಾಗಗಳಲ್ಲಿ ಪೊನ್ನಿಯಿನ್ ಸೆಲ್ವನ್​ ಸಿನಿಮಾ ಮೂಡಿ ಬರಲಿದ್ದು, ಅದಕ್ಕಾಗಿ 500 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.