ತಮ್ಮ ಮುಂದಿನ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಕುರಿತು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಹೊಸ ಅಪ್ಡೇಟ್ ನೀಡಿದ್ದರು. ಇದೀಗ ಸಿನಿಮಾ ತಂಡ ಮತ್ತೊಂದು ಸುದ್ದಿ ಕೊಟ್ಟಿದೆ. ವಿನೂತನ ಪ್ರಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಇದು ಹೊಸತೆಂದು ಹೇಳಲಾಗುತ್ತಿದೆ.
ಚಾರ್ಲಿ 777 ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಚಿತ್ರವೇ ಸಪ್ತ ಸಾಗರದಾಚೆ ಎಲ್ಲೋ. ಪೋಸ್ಟರ್ ಹಾಗು ಹಾಡುಗಳಿಂದ ಚಿತ್ರರಂಗದಲ್ಲಿ ಟಾಕ್ ಆಗುತ್ತಿದೆ. ಇದುವರೆಗೆ ಯಾರೂ ಮಾಡದೇ ಇರುವಂತಹ ಹೊಸ ಪ್ರಯೋಗವನ್ನು ಚಿತ್ರತಂಡ ಮಾಡೋಕೆ ಹೊರಟಿದೆ. ಸಾಮಾನ್ಯವಾಗಿ ಚಿತ್ರಗಳು ರಿಲೀಸ್ ಆಗಿ ಹಿಟ್ ಆಗುತ್ತಿದ್ದಂತೆ ಅದರ ಸೀಕ್ವೆಲ್ ಘೋಷಣೆಯಾಗುತ್ತದೆ. ನಂತರ ಚಿತ್ರೀಕರಣ ಮುಗಿಸಿ, ಒಂದೋ ಎರಡೋ ಅಥವಾ ಮೂರು ವರ್ಷಗಳ ನಂತರ ಎರಡನೇ ಭಾಗ ತೆರೆಗೆ ಬರುತ್ತದೆ. ಇದಕ್ಕೂ ಮಿಗಿಲಾಗಿ ಚಿತ್ರ ಘೋಷಣೆಯಾಗುತ್ತಿದ್ದಂತೆ ಸೀಕ್ವೆಲ್ ಬಗ್ಗೆ ಹೇಳಿ, ಮೊದಲ ಭಾಗ ರಿಲೀಸ್ ಆದ ನಂತರ ಕನಿಷ್ಠ ವರ್ಷದ ನಂತರ ಸೀಕ್ವೆಲ್ ರಿಲೀಸ್ ಮಾಡಲಾಗುತ್ತದೆ.
-
Embark on an exhilarating odyssey that cuts across boundless seas!@KvnProductions is happy to present with @ParamvahStudios to take you on an unforgettable cinematic voyage.#SapthaSagaradaacheEllo Side A will splash across theatres on Sept 1st & Side B on Oct 20th. pic.twitter.com/K2OtReEdQx
— KVN Productions (@KvnProductions) June 15, 2023 " class="align-text-top noRightClick twitterSection" data="
">Embark on an exhilarating odyssey that cuts across boundless seas!@KvnProductions is happy to present with @ParamvahStudios to take you on an unforgettable cinematic voyage.#SapthaSagaradaacheEllo Side A will splash across theatres on Sept 1st & Side B on Oct 20th. pic.twitter.com/K2OtReEdQx
— KVN Productions (@KvnProductions) June 15, 2023Embark on an exhilarating odyssey that cuts across boundless seas!@KvnProductions is happy to present with @ParamvahStudios to take you on an unforgettable cinematic voyage.#SapthaSagaradaacheEllo Side A will splash across theatres on Sept 1st & Side B on Oct 20th. pic.twitter.com/K2OtReEdQx
— KVN Productions (@KvnProductions) June 15, 2023
ಆದರೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತಂಡ ಸಿನಿಮಾ ಘೋಷಣೆಯಾದಾಗ ಯಾವುದೇ ಸೀಕ್ವೆಲ್ ಸುಳಿವು ನೀಡಿರಲಿಲ್ಲ. ಆದರೆ ಸಿನಿಮಾ ಚಿತ್ರೀಕರಣ ಮುಗಿಸಿರುವ ಮಾಹಿತಿ ನೀಡುವಾಗಲೇ ಸೀಕ್ವೆಲ್ ಬಗ್ಗೆ ಹೇಳುವುದಲ್ಲದೆ, ಆ ಸೀಕ್ವೆಲ್ ಚಿತ್ರೀಕರಣವನ್ನೂ ಮುಗಿಸಿರುವ ಆಶ್ಚರ್ಯಕರ ಸಂಗತಿ ಬಯಲು ಮಾಡಿತ್ತು. ನಿರ್ದೇಶಕ ಹೇಮಂತ್ ಎಂ. ರಾವ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾದ ಸೈಡ್ ಎ ಸೆಪ್ಟೆಂಬರ್ 1ರಂದು ತೆರೆಗೆ ಬಂದರೆ, ಸೈಡ್ B ಒಂದು ತಿಂಗಳ ಅಂತರದಲ್ಲಿ ಅಂದರೆ ಅಕ್ಟೋಬರ್ 20 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅತ್ಯಂತ ಸಣ್ಣ ಅಂತರದಲ್ಲಿ ಸೀಕ್ವೆಲ್ ರಿಲೀಸ್ ಮಾಡುತ್ತಿರುವುದು ಇದೇ ಮೊದಲು.
ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಬಂಡವಾಳ ಹೂಡಿದ್ದು, ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ಕೆವಿಎನ್ ಸಂಸ್ಥೆ ಸಿನಿಮಾ ರಿಲೀಸ್ ಡೇಟ್ ಕುರಿತು ಎರಡು ಪೋಸ್ಟರ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಎರಡು ಕಾಲಘಟ್ಟಗಳಲ್ಲಿ ಕಥೆ ನಡೆಯಲಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಇಬ್ಬರು ನಾಯಕಿಯರು ಜೋಡಿಯಾಗಿದ್ದಾರೆ.
ಎರಡು ವಿಭಿನ್ನ ಪೋಸ್ಟರ್ಗಳಲ್ಲಿ ಮೊದಲ ಭಾಗದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ನಾಯಕಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು, ಎರಡನೇ ಭಾಗದಲ್ಲಿ ಇಬ್ಬರು ನಾಯಕಿಯರಿದ್ದಾರೆ. ರುಕ್ಮಿಣಿ ವಸಂತ್ ಅವರ ಜೊತೆಗೆ ನಟಿ ಚೈತ್ರಾ ಜೆ ಆಚಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ.
ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇಲ್ಲಿಂದ ಚಿತ್ರದ ಪ್ರಚಾರದ ಕೆಲಸಗಳು ಪ್ರಾರಂಭವಾಗಲಿವೆ. ನಟನೆಯ ಜೊತೆಗೆ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ – ಸೈಡ್ A ಮತ್ತು B ಚಿತ್ರಗಳನ್ನು ಪರಂವಃ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.
ಇದನ್ನೂ ಓದಿ: 40ರ ಸಂಭ್ರಮದಲ್ಲಿ ಸಿಂಪಲ್ ಸ್ಟಾರ್: 2 ಪಾರ್ಟ್ಗಳಾಗಿ ಪ್ರೇಕ್ಷಕರ ಮುಂದೆ SSE