ETV Bharat / entertainment

ಈ ವೀಕೆಂಡ್​ ಅತಿಥಿ ಸ್ಯಾಂಡಲ್​ವುಡ್​ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್​​ - weekend with Ramesh

'ವೀಕೆಂಡ್​​ ವಿತ್​ ರಮೇಶ್' ಕಾರ್ಯಕ್ರಮದ ಅತಿಥಿಯಾಗಿ ನೆನಪಿರಲಿ ಪ್ರೇಮ್​​ ಆಗಮಿಸಲಿದ್ದಾರೆ.

actor Prem
ನೆನಪಿರಲಿ ಪ್ರೇಮ್​​
author img

By

Published : May 3, 2023, 2:11 PM IST

ಕನ್ನಡದ ಖ್ಯಾತ ನಟ ರಮೇಶ್​ ಅರವಿಂದ್​ ನಡೆಸಿಕೊಡುವ 'ವೀಕೆಂಡ್​ ವಿತ್​ ರಮೇಶ್'​​ ಶೋ ಬಹುಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಸಾಧಕರ ಜೀವಮಾನದ ಕಥೆ ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳುತ್ತದೆ. ಈ ಮೂಲಕ ಅದೆಷ್ಟೋ ಮಂದಿಗೆ ಸ್ಫೂರ್ತಿ ಆಗಿದೆ 'ವೀಕೆಂಡ್​ ವಿತ್​ ರಮೇಶ್'​.

ಜನಪ್ರಿಯ 'ವೀಕೆಂಡ್​​ ವಿತ್​ ರಮೇಶ್' ಸೀಸನ್​ 5 ಮಾರ್ಚ್ 25ರಂದು ಆರಂಭಗೊಂಡಿದೆ. ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರು ಬಂದು ಹೋಗಿದ್ದರು. ಈ ವಾರ ಪ್ರಸಾರ ಆಗಲಿರುವ ಎಪಿಸೋಡ್​ನಲ್ಲಿ ಸಿನಿಮಾ ಸಾಧಕನ ಎಂಟ್ರಿ ಆಗಲಿದೆ. ಹೌದು, ಸ್ಯಾಂಡಲ್​ವುಡ್​ ಲವ್ಲಿ ಸ್ಟಾರ್ ಎಂದೇ ಖ್ಯಾತರಾದ ನೆನಪಿರಲಿ ಪ್ರೇಮ್​​ ಈ ವೀಕೆಂಡ್​ನ ಅತಿಥಿ.

ಈಗಾಗಲೇ 9 ಸಾಧಕರ ಕಥೆ ಈ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಸ್ಯಾಂಡಲ್​​ವುಡ್​ ಮೋಹಕ ತಾರೆ ಖ್ಯಾತಿಯ ನಟಿ ರಮ್ಯಾ ಮೂಲಕ ಭರ್ಜರಿ ಓಪನಿಂಗ್​ ಪಡೆದುಕೊಂಡ ನಂತರ ಈ ಶೋನಲ್ಲಿ ಪ್ರಭುದೇವ (ನಟ, ನೃತ್ಯ ನಿರ್ದೇಶಕ). ಡಾ. ಸಿ.ಎನ್​ ಮಂಜುನಾಥ್ (ಜಯದೇವ ಸಂಸ್ಥೆಯ ನಿರ್ದೇಶಕ), ದತ್ತಣ್ಣ (ಹಿರಿಯ ಕಲಾವಿದ), ಡಾಲಿ ಧನಂಜಯ್ (ಬಹುಬೇಡಿಕೆ ನಟ​​), ಅವಿನಾಶ್ (ಹಿರಿಯ ನಟ)​, ಮಂಡ್ಯ ರಮೇಶ್ (ಹಿರಿಯ ನಟ), ಸಿಹಿಕಹಿ ಚಂದ್ರು (ನಟ, ನಿರೂಪಕ), ಡಾ. ಗುರುರಾಜ ಕರಜಗಿ (ಶಿಕ್ಷಣ ತಜ್ಞ) ಅತಿಥಿಗಳಾಗಿ ಆಗಮಿಸಿದ್ದರು. ಈ ವಾರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನೆನಪಿರಲಿ ಪ್ರೇಮ್ ಆಗಮಿಸುತ್ತಿದ್ದು, ಈ ಕಾರ್ಯಕ್ರಮದ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ನಿನ್ನೆ ಜೀ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ನಟ ಪ್ರೇಮ್​ ಅವರ ಬ್ಲರ್​ ಇಮೇಜ್​ ಶೇರ್ ಮಾಡಿಕೊಂಡು ಯಾರು ಅಂತಾ ಊಹಿಸಿ ಎಂದು ನೆಟ್ಟಿಗರಲ್ಲಿ ಕೇಳಿತ್ತು. ಬಹುತೇಕ ಸೋಶಿಯಲ್​ ಮೀಡಿಯಾ ಬಳಕೆದಾರರು ಪ್ರೇಮ್​ ಅವರ ಹೆಸರನ್ನೇ ಸೂಚಿಸಿದ್ದರು. ಜೊತೆಗೆ, ಕೆಲಸವರ ಹಸರನ್ನು ಉಲ್ಲೇಖಿಸಿ ಕಾರ್ಯಕ್ರಮಕ್ಕೆ ಇವರನ್ನೂ ಕರೆಸಿ ಎಂದು ಪ್ರೇಕ್ಷಕರು ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2: ನಟ ಕಾರ್ತಿ ಸಿನಿಮಾ ನೋಡಲು ಜಪಾನ್​ನಿಂದ ಬಂದ ಫ್ಯಾನ್ಸ್, ನಟನ ಮನೆಯಲ್ಲಿ ಸತ್ಕಾರ

ನಟ ಪ್ರೇಮ್​ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಉತ್ತಮ ಹೃದಯವಂತಿಕೆ ಇರುವ ನಟ ಪ್ರೇಮ್' ಎಂದು ಓರ್ವರು ಬರೆದರೆ, 'ಜೀ ಕನ್ನಡ ವಾಹಿನಿಗೆ ಮನವಿ, ನಮ್ಮ ದೊಡ್ಡಮನೆ ಸೊಸೆ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಅವರನ್ನು ಕರೆಸಿ ಪ್ಲೀಸ್' ಎಂದು ಮತ್ತೊಬ್ಬರು ಕೇಳಿಕೊಂಡಿದ್ದಾರೆ. 'ಈ ಎಪಿಸೋಡ್​ ವೀಕ್ಷಿಸಲು ಕಾತುರರಾಗಿದ್ದೇವೆ' ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ. ಸಿನಿಮಾದವರನ್ನೇ ಹೆಚ್ಚು ಕರೆಸಲಾಗುತ್ತಿದೆ, ಇತರೆ ಕ್ಷೇತ್ರದ ಸಾಧಕರನ್ನೂ ಕರೆಸಿ ಎಂದೂ ಪ್ರೇಕ್ಷಕರು ಬೇಡಿಕೆ ಇಡುತ್ತಿದ್ದಾರೆ.

​​ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಮೇಘನಾ ರಾಜ್​: 'ತತ್ಸಮ ತದ್ಭವ' ಪೋಸ್ಟರ್​ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.