ETV Bharat / entertainment

ನಟ ಪ್ರಭಾಸ್ ಇನ್​ಸ್ಟಾಗ್ರಾಮ್​ ಖಾತೆ ಮಾಯ, ಫ್ಯಾನ್ಸ್​ಗೆ ಶಾಕ್-ಇದು 'ಸಲಾರ್'​ ಪ್ರಚಾರದ ಭಾಗವೇ? - Prabhas latest news

Actor Prabhas Instagram account: ಭಾರತೀಯ ಚಿತ್ರರಂಗದ ಜನಪ್ರಿಯ ನಟ ಪ್ರಭಾಸ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

Actor Prabhas Instagram account Deactivated
ಪ್ರಭಾಸ್ ಇನ್​ಸ್ಟಾಗ್ರಾಮ್​ ಮಾಯ
author img

By ETV Bharat Karnataka Team

Published : Oct 15, 2023, 4:28 PM IST

Updated : Oct 15, 2023, 4:37 PM IST

ನಟ ಪ್ರಭಾಸ್ ಕುರಿತ ಸುದ್ದಿಯೊಂದು ಸದ್ದು ಮಾಡುತ್ತಿದೆ. 'ಸಲಾರ್' ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿರುವ ಇವರ ಇನ್​ಸ್ಟಾಗ್ರಾಮ್ ಖಾತೆ ಮಾಯವಾಗಿದೆ. ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಸೋಷಿಯಲ್​ ಮೀಡಿಯಾ ಬಳಕೆದಾರರು ಊಹಿಸುತ್ತಿದ್ದಾರೆ.

ಯಾವುದೇ ಹೇಳಿಕೆ ನೀಡದೇ ಖಾತೆಯನ್ನು ಡಿಆ್ಯಕ್ಟಿವೇಟ್ ಮಾಡಿದ್ದು, ಸೈಬರ್ ದಾಳಿ ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ. ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ನಟನ ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಬಂದ್​ ಆಗಿದ್ದು, ಫ್ಯಾನ್ಸ್ ಶಾಕ್​ನಲ್ಲಿದ್ದಾರೆ.

ಬಾಹುಬಲಿ ಖ್ಯಾತಿಯ ಪ್ರಭಾಸ್ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸಲಾರ್'. ಇದೇ ವರ್ಷಾಂತ್ಯ ಸಿನಿಮಾ ಬಿಡುಗಡೆ ಆಗಲಿದೆ. ಮೋಸ್ಟ್ ಎಕ್ಸ್​​ಪೆಕ್ಟೆಡ್​ ಆ್ಯಂಡ್ ಬಿಗ್ ಬಜೆಟ್ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿರುವ ಈ ಹೊತ್ತಿನಲ್ಲಿ ನಾಯಕ ನಟನ ಇನ್‌ಸ್ಟಾಗ್ರಾಮ್ ಖಾತೆಯು ಕಣ್ಮರೆಯಾಗಿರುವ ಸುದ್ದಿ ಸದ್ದು ಮಾಡುತ್ತಿದೆ.

ಕೆಜಿಎಫ್​​ ನಿರ್ದೇಶಕ ಪ್ರಶಾಂತ್​ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ಅಪ್‌ಡೇಟ್ಸ್​ಗೆ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಟ್ಟಿರುತ್ತಾರೆ. ಹೀಗಿರುವಾಗ, ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಇನ್‌ಸ್ಟಾಗ್ರಾಮ್​​ ಕಾಣಿಸುತ್ತಿಲ್ಲ. ಯಾವುದೇ ಮೆಸೇಜ್​​ ಕೊಡದೇ ಅಕೌಂಟ್​ ಡಿಆ್ಯಕ್ಟಿವೇಟ್​ ಮಾಡಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನೀವೀಗ ಪ್ರಭಾಸ್ ಅವರ ಅಫೀಶಿಯಲ್​ ಅಕೌಂಟ್​​ ಸರ್ಚ್ ಮಾಡಿದ್ರೆ ಈ ಪೇಜ್​ ಲಭ್ಯವಿಲ್ಲ ಎಂಬ ಸಂದೇಶ ಬರುತ್ತದೆ. ಇದನ್ನು ಕಂಡ ಫ್ಯಾನ್ಸ್ ಕಂಗಾಲಾಗಿದ್ದಾರೆ.

ಫೇಸ್​ಬುಕ್ ಖಾತೆ ಸಕ್ರಿಯ: ಪ್ರಭಾಸ್ ಇನ್​ಸ್ಟಾಗ್ರಾಮ್​ನಲ್ಲಿ ಸಕ್ರಿಯರಾಗಿದ್ದರು. ಸಿನಿಮಾಗೆ ಸಂಬಂಧಿಸಿದ ಸುದ್ದಿಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದರು. ಆದ್ರೀಗ ನಟನ ಖಾತೆಯೇ ಕಾಣಿಸಿಸುತ್ತಿಲ್ಲ. ಇದು ಹ್ಯಾಕರ್‌ಗಳ ಕೆಲಸ ಆಗಿರಬಹುದು ಎಂದು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಹೇಳುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಭಾಸ್ ಅಥವಾ ನಟನ ತಂಡದಿಂದ ಯಾವುದೇ ಹೇಳಿಕೆ ಬಂದಿಲ್ಲ. ಫೇಸ್​ಬುಕ್ ಖಾತೆ ಸಕ್ರಿಯವಾಗಿದೆ.

ಇದನ್ನೂ ಓದಿ: ನಾಡಹಬ್ಬ ದಸರಾ 2023ಕ್ಕೆ ಚಾಲನೆ: ಫೋಟೋಗಳಿಲ್ಲಿವೆ ನೋಡಿ

ನಟನ ಬಹು ನಿರೀಕ್ಷಿತ ಸಿನಿಮಾ 'ಸಲಾರ್' ಡಿಸೆಂಬರ್ 22 ರಂದು ತೆರೆಗಪ್ಪಳಿಸಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ತೆಲುಗು ಚಿತ್ರ 'ಕಣ್ಣಪ್ಪ'ದಲ್ಲಿ ಕೂಡ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮೋಹನ್ ಲಾಲ್ ಮತ್ತು ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಉಳಿದಂತೆ ಬಿಗ್​ ಬಜೆಟ್​ ಸಿನಿಮಾ 'ಕಲ್ಕಿ 2898 ಎಡಿ' 2024ರ ಜನವರಿ 12ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಸಿಂಘಂ ಎಗೈನ್: ಪೊಲೀಸ್​ ಅಧಿಕಾರಿ ಶಕ್ತಿ ಶೆಟ್ಟಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ - ಫಸ್ಟ್ ಲುಕ್ ಔಟ್

ಕಾಜೋಲ್​ ಇನ್​​ಸ್ಟಾಗ್ರಾಮ್​​: ಈ ಹಿಂದೆ ಬಾಲಿವುಡ್​ ನಟಿ ತಮ್ಮ ಇನ್​ಸ್ಟಾ ಪೋಸ್ಟ್​ಗಳನ್ನೆಲ್ಲಾ ಡಿಲೀಟ್​ ಮಾಡಿ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದ್ದರು. 'Facing one of the toughest trials of my life' ಎಂಬ ಒಂದೇ ಒಂದು ಸೀಕ್ರೆಟ್ ಪೋಸ್ಟ್ ಶೇರ್ ಮಾಡಿ ಉಳಿದ ಪೋಸ್ಟ್​ಗಳೆಲ್ಲವನ್ನೂ ಅಳಿಸಿ ಹಾಕಿದ್ದರು. ಬಳಿಕ ನಟಿ ಟೆನ್ಷನ್​​ನಲ್ಲಿ ಕಾರು ಹತ್ತಿದ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಆದ್ರೆ ಇದೆಲ್ಲವೂ ದಿ ಟ್ರಯಲ್ ವೆಬ್​ ಸೀರಿಸ್​ನ ಪ್ರಚಾರದ ಭಾಗವಾಗಿತ್ತು. ಹಾಗಾಗಿ ಪ್ರಭಾಸ್ ಇನ್​ಸ್ಟಾಗ್ರಾಮ್ ಖಾತೆ ಸುದ್ದಿಯೂ ಪ್ರಚಾರದ ಭಾಗ ಆಗಿರಬಹುದೆಂಬ ಕೆಲವರ ಗ್ರಹಿಕೆಯನ್ನು ನಾವು ನಿರಾಕರಿಸುವಂತಿಲ್ಲ.

Last Updated : Oct 15, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.