ಸ್ಯಾಂಡಲ್ವುಡ್ ಸೆನ್ಸೇಶನಲ್ ಸ್ಟಾರ್ ಕೋಮಲ್ ಕುಮಾರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿರುವ ಅವರು 'ಉಂಡೆನಾಮ' ಹಾಕಲು ಸಿದ್ಧರಾಗಿದ್ದಾರೆ. ವಿಭಿನ್ನ ಶೀರ್ಷಿಕೆಯನ್ನು ಇಟ್ಟುಕೊಂಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಆ ಪ್ರಯುಕ್ತ ನವರಸ ನಾಯಕ ಜಗ್ಗೇಶ್ ಅವರು ಸಹೋದರ ಕೋಮಲ್ ಮತ್ತು ಉಂಡೆನಾಮ ಚಿತ್ರತಂಡದ ಜೊತೆ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಕೆಲ ದಿನಗಳ ಹಿಂದೆ ಜಗ್ಗೇಶ್ ಈ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ನಾನು ನನ್ನ ತಮ್ಮನ ಕಾಮಿಡಿ ಟೈಮಿಂಗ್ಗೆ ಅಭಿಮಾನಿ ಎಂದು ಹೇಳಿದ್ದರು.
ಚಿತ್ರತಂಡ ಹೀಗಿದೆ.. ಉಂಡೆನಾಮ ಚಿತ್ರದಲ್ಲಿ ಕೋಮಲ್ ಕುಮಾರ್ಗೆ ಜೋಡಿಯಾಗಿ ನಟಿ ಧನ್ಯ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಹರೀಶ್ ರಾಜ್, ತಬಲನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ದನ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ. ನಿರ್ಮಾಪಕರಾದ ಟಿ ಆರ್ ಚಂದ್ರಶೇಖರ್ ಹಾಗೂ ಸಿ ನಂದಕಿಶೋರ್ ಸಿನಿಮಾವನ್ನು ಎನ್ ಕೆ ಸ್ಟುಡಿಯೋಸ್ನ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಮಜಾ ಟಾಕೀಸ್, ರಾಬರ್ಟ್ ಸಿನಿಮಾ ಖ್ಯಾತಿಯ ಕೆ ಎಲ್ ರಾಜಶೇಖರ್ ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ಶ್ರೀಧರ್ ವಿ ಸಂಭ್ರಮ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಟ್ರೇಲರ್ನಿಂದಲೇ ಗಮನ ಸೆಳೆದಿರೋ ಉಂಡೆನಾಮ ಯಾವ ರೀತಿಯಾಗಿ ಪ್ರೇಕ್ಷಕರನ್ನು ರಂಜಿಸಲಿದೆ ಎಂಬುದು ಇಂದು ಗೊತ್ತಾಗಲಿದೆ.
ಇದನ್ನೂ ಓದಿ: ಲೂಧಿಯಾನದ ಚಿಕ್ಕ ಅಡುಗೆ ಮನೆಯಿಂದ ಮಾಸ್ಟರ್ ಶೆಫ್ ಕಾರ್ಯಕ್ರಮದ ಟಾಪ್ 5 ಸ್ಥಾನದವರೆಗೆ ಕುಲ್ದೀಪ್ ಕೌರ್ ಪಯಣ
ಕೋಮಲ್ನಂತೆ ಕಾಮಿಡಿ ಮಾಡಲು ಕಲಿಯಬೇಕು...: ಇದು 'ಉಂಡೆನಾಮ' ಟ್ರೇಲರ್ ಲಾಂಚ್ ವೇಳೆ ನವರಸ ನಾಯಕ ಜಗ್ಗೇಶ್ ಆಡಿದ ಮಾತು. "ಟ್ರೇಲರ್ ಚೆನ್ನಾಗಿದೆ. ನನ್ನ ತಮ್ಮ ಕೋಮಲ್, ಬಹಳ ವರ್ಷಗಳ ನಂತರ ನಟಿಸಿರುವ ಚಿತ್ರವಿದು. ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ, ಇವನ ಹಾಗೆ ನಾನು ಕೂಡ ಕಾಮಿಡಿ ಮಾಡಲು ಕಲಿಯಬೇಕು ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್" ಎಂದು ಸಹೋದರನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದರು.
ಸಿನಿಮಾದಿಂದ ಈ ಕಾರಣಕ್ಕೆ ದೂರ ಉಳಿದಿದ್ದೆ..: ಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನಾವು ಜಾತಕ, ಭವಿಷ್ಯ, ದೇವರು, ಆಚರಣೆಗಳೆಲ್ಲವನ್ನೂ ನಂಬುವವರು. ಅಣ್ಣ ಜಗ್ಗೇಶ್ ಅವರು ನನ್ನ ಜಾತಕದಲ್ಲಿ ಕೇತು ದೆಸೆ ನಡೆಯುತ್ತಿದೆ, ಜಾಗೃತೆ ವಹಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ನಾನು ಐದು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದೆ ಎಂದು ಕಾಲಾಯ ನಮಃ ಸಿನಿಮಾ ಶೂಟಿಂಗ್ ಆರಂಭವಾದ ವೇಳೆ ನಟ ಕೋಮಲ್ ತಿಳಿಸಿದ್ದರು.
ಇದನ್ನೂ ಓದಿ: ಖಳನಟ ವಜ್ರಮುನಿಯ ‘‘ಯಲಾ ಕುನ್ನಿ’’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್