ETV Bharat / entertainment

Kichcha Sudeep: ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲು ಸಜ್ಜಾದ ಸುದೀಪ್‌ ಕುಟುಂಬದ ಕುಡಿ - sanchith sanjeev entry to kannada film industry

ನಟ ಕಿಚ್ಚ ಸುದೀಪ್‌ ಫ್ಯಾಮಿಲಿಯಿಂದ ಹೊಸ ಪ್ರತಿಭೆಯೊಂದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ. ಅದು ಯಾರ? ಎಂಬ ಮಾಹಿತಿ ಇಲ್ಲಿದೆ ನೋಡಿ.

sanchith sanjeev
ಸಂಚಿತ್ ಸಂಜೀವ್
author img

By

Published : Jun 14, 2023, 12:00 PM IST

ಸಿನಿಮಾವೆಂಬ ಬಣ್ಣದ ಲೋಕಕ್ಕೆ ನಟ, ನಿರ್ದೇಶಕರು ಹಾಗೂ ನಿರ್ಮಾಪಕರ ಮಕ್ಕಳು ಬರೋದು ಹೊಸತೇನಲ್ಲ. ಇದೀಗ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಹುಭಾಷೆಯಲ್ಲಿ ತನ್ನ ಅಮೋಘ ಅಭಿನಯದಿಂದ ಹೆಸರು ಗಳಿಸಿರುವ ನಟ ಕಿಚ್ಚ ಸುದೀಪ್ ಅವರ ಕುಟುಂಬದ ಕುಡಿಯೊಂದು ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿಯಾಗಿದೆ. ಹಾಗಾದ್ರೆ, ಸುದೀಪ್ ಮಗಳು ಸಾನ್ವಿ ಸಿನಿಮಾಗೆ ಬರ್ತಾ ಇದ್ದಾರೆ? ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಕಿಚ್ಚನ ಅಕ್ಕ ಸುಜಾತ ಅವರ ಮಗ ಸಂಚಿತ್ ಸಂಜೀವ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿದ್ದಾರೆ.

ಹೌದು, ಮಾವ ಕಿಚ್ಚ ಸುದೀಪ್​ ಹಾದಿಯಲ್ಲಿ ನಡೆಯಲು ಅಳಿಯ ಸಂಚಿತ್ ಸಜ್ಜಾಗಿದ್ದಾರೆ. ಸಂಚಿತ್ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ನಾಲ್ಕೈದು ವರ್ಷಗಳಿಂದ ಕೇಳಿ ಬರುತ್ತಿತ್ತು. ಅದೇ ರೀತಿ‌‌ ಸುದೀಪ್ ಕೂಡ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಇವೆಂಟ್​ಗೆ ಹೋದರು ಜೊತೆಯಲ್ಲಿ ಅಕ್ಕನ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಅಂದೇ ಕೆಲವರು ಸುದೀಪ್​ನಂತೆ ಸಂಚಿತ್ ಕೂಡ ಸಿನಿಮಾಗೆ ಬರ್ತಾರೆ ಎಂದುಕೊಂಡಿದ್ರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.

ಒಂದು ಇಂಟ್ರೆಸ್ಟ್ರಿಂಗ್ ವಿಚಾರ ಅಂದ್ರೆ, ಸಂಚಿತ್ ಸಂಜೀವ್ ಅಭಿನಯದ ಜೊತೆಗೆ ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರೋ ಸಂಚಿತ್, "ನನಗೆ ಕಾಲೇಜು ದಿನಗಳಿಂದಲೂ ಸಿನಿಮಾ ಬಗ್ಗೆ ಒಲವು ಇತ್ತು, ರಂಗಭೂಮಿಯಲ್ಲಿ ಒಂದಿಷ್ಟು ನಾಟಕಗಳನ್ನು ಮಾಡಿದ್ದೇನೆ. ಇದರ ಜೊತೆಗೆ, ನ್ಯೂಯಾರ್ಕ್‌ನ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ, ಡ್ಯಾನ್ಸ್, ಕ್ಯಾಮರಾ ಮುಂದೆ ಹೇಗೆ ಅಭಿನಯ ಮಾಡಬೇಕು ಎಂಬುದರ ಬಗ್ಗೆ ಎರಡು ವರ್ಷ ತರಬೇತಿ ಪಡೆದಿದ್ದೇನೆ" ಎಂದರು.

sanchith sanjeev
ಮಾವ ಸುದೀಪ್​ ಜೊತೆ ಅಳಿಯ ಸಂಚಿತ್ ಸಂಜೀವ್

ನಿರ್ದೇಶನದ ವಿಷಯಕ್ಕೆ ಬಂದರೆ ಮಾಣಿಕ್ಯ ಚಿತ್ರದಲ್ಲಿ ಸಂಚಿತ್ ಕೆಲಸ ಮಾಡಿದ್ದಾರೆ.‌ ಜೊತೆಗೆ 'ಜಿಗರ್‌ಥಂಡಾ’ ಚಿತ್ರದ ಪ್ರೀ ಪ್ರೊಡಕ್ಷನ್‌ ಹಂತದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗೂ 'ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ಕೋ ಡೈರೆಕ್ಟರ್‌ ಕೆಲಸ ಮಾಡಿದ್ದಾರೆ. ಇದೀಗ ತಮ್ಮ ಚಿತ್ರದಲ್ಲಿ ನಟನೆ ಜೊತೆಗೆ ಡೈರೆಕ್ಷನ್ ಕೂಡ ಮಾಡ್ತಾ ಇದ್ದು, ಇದಕ್ಕೆ ಸುದೀಪ್ ಅವರ ಸಪೋರ್ಟ್ ಇದೆ. ಈ ಸಿನಿಮಾವನ್ನು ಕೆ ಪಿ ಶ್ರೀಕಾಂತ್‌, ಮನೋಹರ್‌ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.

sanchith sanjeev
ಸಂಚಿತ್ ಸಂಜೀವ್

ಇನ್ನು ಎಂಟು ವರ್ಷದ ಹಿಂದೆ ಸಂಚಿತ್ ಸಂಜೀವ್ ಒಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು.ಅದರಲ್ಲಿ ಚಂದನ್‌ ಶೆಟ್ಟಿ, ಪ್ರದೀಪ್‌ ಮುಂತಾದವರು ಅಭಿನಯಿಸಿದ್ದರು‌. ಈಗ ಈ ಕಿರುಚಿತ್ರದ ಕಥೆಯನ್ನು ಒಂದಿಷ್ಟು ಬದಲಾವಣೆ ಮಾಡಿಕೊಂಡು ಹೊಸ ಚಿತ್ರವನ್ನು ಬೆಳ್ಳಿ ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ : Kiccha Sudeep: ಮೈಸೂರು ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್​ ಭೇಟಿ, ಅಭಿಮಾನಿಗಳ ನೂಕುನುಗ್ಗಲು

"ಇದೊಂದು ಕ್ರೈಂ ಡ್ರಾಮಾ ಕಥೆಯಾಗಿದ್ದು, ತಂದೆ - ಮಗನ ಬಾಂಧವ್ಯವನ್ನು ಕಟ್ಟಿಕೊಡಲಿದೆ. ಇವರ ಮೊದಲ ಸಿನಿಮಾಗೆ ಸಿನಿಮಾಟೋಗ್ರಾಫರ್‌ ಆಗಿ ಅಮಿತ್‌ ಎಂಬ ಹೊಸ ಯುವಕ ಆಯ್ಕೆಯಾಗಿದ್ದಾರೆ. ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ವಾಸುಕಿ ವೈಭವ್‌ ಅವರಿಗೆ ನೀಡಲಾಗಿದೆ. ಮೂರು ಮುಖ್ಯ ಪಾತ್ರಗಳನ್ನು ಬಿಟ್ಟರೆ ಈ ಸಿನಿಮಾದಲ್ಲಿ ಬರುವ ಅನೇಕ ಪಾತ್ರಗಳಲ್ಲಿ ಹೊಸಬರೇ ಇರುತ್ತಾರೆ ಎನ್ನುವುದು" ನಿರ್ದೇಶಕ, ನಟ ಸಂಚಿತ್‌ ಮಾತು.

sanchith sanjeev
ಸಂಚಿತ್ ಸಂಜೀವ್

ಹಾಗೆಯೇ, ಸುದೀಪ್ ತಮ್ಮ ಅಕ್ಕನ ಮಗ ಸಂಚಿತ್​ಗೆ ಒಂದಿಷ್ಟು ಸಲಹೆಗಳನ್ನ ಕೊಟ್ಟಿದ್ದಾರಂತೆ. "ನಿನ್ನ ಮೊದಲ ಸಿನಿಮಾವನ್ನು ನೀನೇ ನಿರ್ದೇಶನ ಮಾಡು. ಗೆದ್ದರೆ ಸಂಪೂರ್ಣ ಕ್ರೆಡಿಟ್‌ ನಿನ್ನದೆ ಮತ್ತು ಸೋತರೂ ನಿನ್ನದೇ ಆಗಿರುತ್ತದೆ" ಅಂತಾ ಕಿಚ್ಚ ಕಿವಿ ಮಾತು ಹೇಳಿದ್ದಾರಂತೆ‌. ಅದರಂತೆ ಸಂಚಿತ್ ಸಂಜೀವ್ ಸಾಕಷ್ಟು ಸಿದ್ಧತೆ ಮಾಡಿಕೊಂಡು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ 15 ರಂದು (ನಾಳೆ) ಅದ್ಧೂರಿಯಾಗಿ ಸಂಚಿತ್ ಸಂಜೀವ್ ಮೊದಲ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲು ವೇದಿಕೆ ಸಜ್ಜಾಗಿದೆ.

ಇದನ್ನೂ ಓದಿ : ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಜೊತೆ ಕಿಚ್ಚ ಸುದೀಪ್ 46ನೇ ಸಿನಿಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.