ETV Bharat / entertainment

ಜಗ್ಗೇಶ್ ಉತ್ತಮ ನಟ, ಅವರ ನಾಯಿ ಸಂಗೀತ ವಿದ್ವಾಂಸ: ಪ್ರಾಣ ಸ್ನೇಹಿತನ ವಿಡಿಯೋ ಶೇರ್ - ನಾಯಿ ಸಂಗೀತ ವಿದ್ವಾಂಸ

ನಟ ಜಗ್ಗೇಶ್ ಅವರು ತಮ್ಮ ಪ್ರಾಣ ಸ್ನೇಹಿತನನ್ನು ಪರಿಚಯಿಸಿದ್ದಾರೆ. ಹೌದು, ಅವರ ಮನೆಯ ಪ್ರೀತಿಯ ಶ್ವಾನವನ್ನು ಸಂಗೀತ ವಿದ್ವಾಂಸ ಎಂದು ಜಗ್ಗೇಶ್ ಹೊಗಳಿದ್ದಾರೆ.

Etv Bharat,ಜಗ್ಗೇಶ್ ನಾಯಿ,ಶ್ವಾನ
Etv Bharat,ಜಗ್ಗೇಶ್ ನಾಯಿ,ಶ್ವಾನ
author img

By

Published : Aug 9, 2022, 10:00 AM IST

ರಾಜ್ಯಸಭೆ ಸದಸ್ಯ, ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವವರು. ಕುಟುಂಬಸ್ಥರ, ಸ್ನೇಹಿತರ ಫೋಟೋ ವಿಡಿಯೋಗಳನ್ನು ಆಗಾಗ ಶೇರ್ ಮಾಡಿ ಪರಿಚಯಿಸುವವರು. ಆದರೆ ಇದೀಗ ಅವರು ತಮ್ಮ ಮನೆಯಲ್ಲೇ ಇರುವ ಸಂಗೀತ ವಿದ್ವಾಂಸ ಸ್ನೇಹಿತನನ್ನು ಪರಿಚಯಿಸಿದ್ದಾರೆ. ಹೌದು, ಜಗ್ಗೇಶ್ ಅವರು ತಮ್ಮ ಮನೆಯ ಪ್ರೀತಿಯ ಶ್ವಾನ (Jaggesh's dog) ಹಾಡು ಹಾಡುವ ವಿಡಿಯೋ ಶೇರ್ ಮಾಡಿದ್ದಾರೆ.

ನಮ್ಮ ಮನೆಯಲ್ಲಿರುವ ವಿಶೇಷ ಸಂಗೀತ ವಿದ್ವಾಂಸನನ್ನು ಪರಿಚಯಿಸುತ್ತಿದ್ದೇನೆ. ಆತ ನನ್ನ ಜೊತೆಗೆ ಹಾಡು ಹಾಡುತ್ತಾನೆ ಎಂದು ನಟ ಜಗ್ಗೇಶ್ ಹೊಗಳಿದ್ದಾರೆ. ಬಳಿಕ ಜಗ್ಗೇಶ್ ಹಾಡಲು ಶುರು ಮಾಡುತ್ತಿದ್ದಂತೆ ಶ್ವಾನ ಕೂಡ ಹಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

'happyfriendshipday ನನ್ನ ಸ್ನೇಹಿತ ನನ್ನ ಪ್ರಾಣ.. ಪ್ರಾಣಿಗಳೆ ಗುಣದಲಿ ಮೇಲು ದಯೆ ಇರಲಿ ಸಕಲ ಪ್ರಾಣಿಗಳ ಮೇಲೆ' ಎಂದು ಅಡಿ ಬರಹದಡಿ ಶ್ವಾನ ಹಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದು ಮಜವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜಗ್ಗೇಶ್ ಅವರು ಶ್ವಾನ ಪ್ರಿಯರಾಗಿದ್ದು, ಮನೆಯಲ್ಲೇ ಪೆಟ್ ಸಾಕಿದ್ದಾರೆ.

ಜಗ್ಗೇಶ್ ಮತ್ತು ಅವರ ತಮ್ಮ ಕೋಮಲ್ ಉತ್ತಮ ನಟರು. ಜಗ್ಗೇಶ್ ಅವರ ಮಕ್ಕಳು ಕೂಡ ಸಿನಿಮಾ ರಂಗದಲ್ಲಿದ್ದಾರೆ. ಆದರೆ ಇದೀಗ ಅವರ ಮನೆಯ ನಾಯಿಯೂ ಹಾಡು ಹಾಡುತ್ತಿದೆ.

  • " class="align-text-top noRightClick twitterSection" data="">

(ಇದನ್ನೂ ಓದಿ: ರಾಜ್ಯಸಭೆ: ಕನ್ನಡದಲ್ಲಿ ರಾಯರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಟ ಜಗ್ಗೇಶ್)​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.