ಮುಂಬೈ: 'ಖಿನ್ನತೆ' ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಹೇಳಿಕೆಗೆ ಮತ್ತೊಬ್ಬ ನಟ ಗುಲ್ಶನ್ ದೇವಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಿನ್ನತೆ ಎಂಬುದು ನಗರದ ವಿಷಯ ಎಂಬ ಸಿದ್ದಿಕಿಗೆ ಹೇಳಿಕೆಗೆ ಟ್ವಿಟರ್ನಲ್ಲಿ ಖಡಿಸಿದ್ದು, ಇದನ್ನು ಧೃತರಾಷ್ಟ್ರ ಮತ್ತು ಗಾಂಧಾರಿ ಅಸ್ವಸ್ಥತೆಯಂದು ಟೀಕಿಸಿದ್ದಾರೆ.
ಏನಿದು ಸಿದ್ದಿಕಿ ಹೇಳಿಕೆ: ಇತ್ತೀಚೆಗೆ ಸಂದರ್ಶನವೊಂದರಲ್ಲಿ ಖಿನ್ನತೆ ಕುರಿತು ನಿರೂಪಕರ ಪ್ರಶ್ನೆಗೆ ಉತ್ತರಿಸಿದ ನವಾಜುದ್ದೀನ್ ಸಿದ್ದಿಕಿ, ಇದು ನಗರದ ವಿಷಯವಾಗಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ನಗರದಲ್ಲಿ ವೈಭವೀಕರಿಸಿ, ಅದನ್ನು ಖಿನ್ನತೆ ಎಂದು ಭಾವಿಸಲಾಗುತ್ತದೆ. ಕಷ್ಟ ಎಂಬುದು ಎಲ್ಲರಿಗೂ ಇರುತ್ತದೆ. ಆದರೆ, ಅದನ್ನೇ ನಮಗೆ ಮಾತ್ರ ಯಾಕೆ ಹೀಗಾಗುತ್ತಿದೆ. ಇದಕ್ಕೆ ಮರುಗಿ, ಖಿನ್ನತೆಗೆ ಜಾರಬಾರದು. ಅಲ್ಲದೇ, ನನಗೆ ಖಿನ್ನತೆ ಇದೆ ಎಂದು ನಾನು ಹೋಗಿ ನಮ್ಮ ಹಳ್ಳಿಯಲ್ಲಿ ಹೇಳಿದರೆ, ಕೆನ್ನೆಗೆ ಬಾರಿಸುತ್ತಾರೆ. ಹಳ್ಳಿಗಳಲ್ಲಿ ಖಿನ್ನತೆ ಎಂಬ ಸಮಸ್ಯೆ ಇಲ್ಲ. ಅದು ನಗರದ ವೈಭವೀಕರಣದ ಸಮಸ್ಯೆ ಎಂದಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ನಟ ದೇವಯ್ಯ, 'ಇದು ದೃತರಾಷ್ಟ್ರ ಮತ್ತು ಗಂಧಾರಿ ಸಿಂಡ್ರೋಮ್. ನಾನು ಅವರ ಕೆಲಸದ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇನೆ. ಆದರೆ, ಅವರು ಈ ವಿಚಾರದಲ್ಲಿ ತಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ. ಗ್ರಾಮೀಣ ಸಮುದಾಯದಲ್ಲಿ ಕುಡಿತ ಮತ್ತು ಇನ್ನಿತರ ವ್ಯಸನಗಳನ್ನು ಕಾಣಬಹುದು. ನೀವು ಕುಡಿತದ ವ್ಯಸನಗಳು ನೋಡಿ ಅವು ಗ್ರಾಮೀಣ ಸಮುದಾಯದಲ್ಲೇ ಹೆಚ್ಚಿರುವುದು. ಅದು ಮಾನಸಿಕ ರೋಗವಾಗಿದೆ. ಯಾವುದೇ ವ್ಯಸನಿ ವ್ಯಸನದಲ್ಲಿ ತೊಡಗುವುದಿಲ್ಲ. ಏಕೆಂದರೆ ಅವರು ಅದನ್ನು ಪ್ರೀತಿಸುತ್ತಾರೆ. ಈ ವ್ಯಸನವೇ ಒಂದು ಲಕ್ಷಣ. ಇದು ನಿಜವಾದ ಸಮಸ್ಯೆಯಾಗಿದ್ದು, ಇದನ್ನು ಗುಣಮುಖವಾಗಿಸಲು ಸಾಧ್ಯವಿಲ್ಲ' ಎಂದಿದ್ದಾರೆ.
ಇನ್ನು ಗುಲ್ಶನ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಬಳಕೆದಾರರು, ಈ ಧೃತರಾಷ್ಟ್ರ ಮತ್ತು ಗಾಂಧಾರಿ ಅಸ್ವಸ್ಥತೆ ಎಂದರೆ ಏನು? ಈ ಬಗ್ಗೆ ಕುತೂಹಲ ಹೊಂದಿದ್ದು, ವಿವರಿಸುವಂತೆ ಕೋರಿದ್ದಾರೆ. ಇದಕ್ಕೆ ಉತ್ತರಿಸಿರುವ ನಟ, ಕೆಲವರು ಅಂಧರು ಮತ್ತೆ ಕೆಲವರು ಕಣ್ಣುಮುಚ್ಚಿದವರು. ಅವರಿಗೆ ಕಾಣುತ್ತಿಲ್ಲ ಎಂಬ ಮಾತ್ರಕ್ಕೆ ಅದು ಅಸ್ತಿತ್ವದಲ್ಲಿ ಇಲ್ಲ ಎಂದು ಅರ್ಥವಲ್ಲ ಎಂದಿದ್ದಾರೆ. ಮಾನಸಿಕ ರೋಗದ ಶಬ್ದದ ಅಸ್ವಸ್ಥತೆ ಶಬ್ಧವೇ ನನಗೆ ಸೇರಿದಂತೆ ಅನೇಕರಲ್ಲಿ ಭಯ ಮೂಡಿಸುತ್ತದೆ. ನಮ್ಮಲ್ಲಿ ಮಾನಸಿಕ ಮತ್ತು ಅಸ್ವಸ್ಥತೆ ಎಂದರೆ ಹುಚ್ಚು ಎಂಬುದಾಗಿದೆ.
ಖಿನ್ನತೆ ಕುರಿತು ನವಾಜುದ್ದೀನ್ ಸಿದ್ದಿಕಿ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಟೀಕೆಗಳು ವ್ಯಕ್ತವಾಗಿವೆ. ಸಾಮಾಜಿಕ ಬಳಕೆದಾರರು ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಎಂದು ದೂರಿದ್ದಾರೆ.
ಖಿನ್ನತೆ ಕುರಿತು.. ಆಧುನಿಕ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಮಾನಸಿಕ ಅಸ್ವಸ್ಥೆಯಲ್ಲಿ ಖಿನ್ನತೆ ಕೂಡ ಒಂದಾಗಿದೆ. ಜಾಗತಿಕವಾಗಿ ಶೇ 5ರಷ್ಟು ಜನ ಈ ಖಿನ್ನತೆಗೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ತಿಳಿಸಿದೆ. ಯುವ ಜನತೆಯನ್ನು ಕಾಡುತ್ತಿರುವ ಈ ಸಮಸ್ಯೆ ಅನೇಕ ಬಾಲಿವುಡ್ ನಟ-ನಟಿಯರನ್ನು ಬಿಟ್ಟಿಲ್ಲ. ಈ ಬಗ್ಗೆ ನಟಿ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಈ ಸಮಸ್ಯೆ ಕುರಿತು ಅರಿವು ಮೂಡಿಸುವ ಯತ್ನವನ್ನು ಅವರು ಮಾಡಿದರು.
ಇದನ್ನೂ ಓದಿ: ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಬೇಕು ಎಂದಿದ್ದಾರೆ ಶೆಹನಾಜ್ ಗಿಲ್; ಇದಕ್ಕೆ ನವಾಜ್ ಸಿದ್ಧಿಕಿ ಹೇಳಿದ್ದೇನು?