ETV Bharat / entertainment

ವೀರ ಸಿಂಧೂರ ಲಕ್ಷ್ಮಣ ಪಾತ್ರಕ್ಕೆ ಡಾಲಿ ಧನಂಜಯ್​ - Dolly Dhananjay as Veera Sindura Lakshmana

ಉತ್ತರ ಕರ್ನಾಟಕದ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನಾಗಿ ನಟಿಸಲು ನಟ ಡಾಲಿ ಧನಂಜಯ್ ಸಜ್ಜಾಗಿದ್ದಾರೆ.

Actor Dolly Dhananjay is ready to do a historical role
ಐತಿಹಾಸಿಕ ಪಾತ್ರದಲ್ಲಿ ಮಿಂಚಲು ರೆಡಿಯಾದ ಡಾಲಿ ಧನಂಜಯ್​
author img

By

Published : Nov 19, 2022, 1:16 PM IST

ಅತ್ಯುತ್ತಮ ಅಭಿನಯದ ಮೂಲಕ ಚಿತ್ರರಂಗದಲ್ಲಿ ಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ನಟ ಡಾಲಿ ಧನಂಜಯ್. ರತ್ನನ್ ಪ್ರಪಂಚ, ಬೈರಾಗಿ, ಮಾನ್ಸೂನ್​ ರಾಗ, ಹೆಡ್‌ಬುಷ್ ಸಿನಿಮಾಗಳ‌ ಯಶಸ್ಸಿನ ಮ‌ೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಧನಂಜಯ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ರಮ್ಯಾ ಜೊತೆಗಿನ ಉತ್ತರಕಾಂಡ ಚಿತ್ರಕ್ಕೆ ಪೂಜೆ ಮುಗಿಸಿದರು. ಇದರ ಬೆನ್ನಲ್ಲೇ ಡಾಲಿ ಐತಿಹಾಸಿಕ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಹೌದು, ಅಲ್ಲಮ ಸಿನಿಮಾ ಬಳಿಕ‌ ಧನಂಜಯ್​ಗೆ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸುವ ಬಂಪರ್ ಆಫರ್​ವೊಂದು ಹುಡುಕಿಕೊಂಡು ಬಂದಿದೆ. ಉತ್ತರ ಕರ್ನಾಟಕದ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ನಟಿಸಲು ಧನಂಜಯ ಸಜ್ಜಾಗಿದ್ದಾರೆ.

ಹೆಬ್ಬುಲಿ ಹಾಗು ಮದಗಜ ಅಂಥಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.‌ ಈ ಹಿಂದೆ‌ ಸಿಂಧೂರ ಲಕ್ಷ್ಮಣ ಕಥೆಯನ್ನು ಕನ್ನಡದ ಒಬ್ಬ ಸ್ಟಾರ್ ನಟನಿಗೆ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಆ ನಟನನ್ನು ಕೈಬಿಟ್ಟು ಈ ಪಾತ್ರಕ್ಕೆ ಸದ್ಯ ಸುದ್ದಿಯಲ್ಲಿರುವ ಧನಂಜಯ್ ಅವರನ್ನು ಸೆಲೆಕ್ಟ್ ಮಾಡಲಾಗಿದೆ. ನಿರ್ಮಾಪಕ ಉಮಾಪತಿ ಈಗಾಗಲೇ ಧನಂಜಯ್​ ಅವರಲ್ಲಿ ಮಾತನಾಡಿದ್ದಾರೆ. ಈ ಸಿನಿಮಾ ಕಥೆ ಕೇಳಿ ಡಾಲಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.

ಇದನ್ನೂ ಓದಿ: ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜನ್ಮದಿನ.. ನಟಿಗೆ ಶುಭಾಶಯಗಳ ಮಹಾಪೂರ

ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣ ಅವರನ್ನು ಅಗಾಧವಾಗಿ ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ಸಿಂಧೂರ ಲಕ್ಷ್ಮಣ ಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರಿಗೆ ಸಿಂಧೂರ ಲಕ್ಷ್ಮಣ ತಕ್ಕ ಪಾಠ ಕಲಿಸಿದ್ದರು. ಇದೀಗ ಈ ಪಾತ್ರಕ್ಕೆ ಧನಂಜಯ್ ಜೀವ ತುಂಬಲಿದ್ದಾರೆ. ಸ್ಕ್ರಿಪ್ಟ್ ವರ್ಕ್ ಕೂಡ ನಡೆಯುತ್ತಿದೆ. ಈ ಹಿಂದೆ‌ ಸರಳವಾಗಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಎಲ್ಲಾ ಅಂದುಕೊಂಡಂತೆ ನಡೆದರೆ ಈ ಚಿತ್ರದ ಮುಹೂರ್ತ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಇದನ್ನೂ ಓದಿ: 'ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ': ವಿವಾದ ಸೃಷ್ಟಿಸಿದವರಿಗೆ ಡಾಲಿ ಟಾಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.