ETV Bharat / entertainment

ಪ್ರಕಾಶ್​ ರಾಜ್,​ ಸುದೀಪ್ ಇಬ್ಬರೂ ಜೂಜಿನ ಜಾಹೀರಾತಿನಿಂದ ಹಣ ಗಳಿಸಿದ್ದಾರೆ: ಚೇತನ್ ಅಹಿಂಸಾ​ - ಈಟಿವಿ ಭಾರತ ಕನ್ನಡ

ಪ್ರಕಾಶ್​ ರಾಜ್​ ಮತ್ತು ಸುದೀಪ್​ ಪ್ರತಿಭಾವಂತ ನಟರು. ಇಬ್ಬರು ಜೂಜಿನ ಜಾಹೀರಾತುಗಳ ಮೂಲಕ ಹಣ ಗಳಿಸಿದ್ದಾರೆ ಎಂದು ನಟ ಚೇತನ್​ ಅಹಿಂಸಾ ಟಾಂಗ್​ ನೀಡಿದ್ದಾರೆ.

chethan
ನಟ ಚೇತನ್​
author img

By

Published : Apr 7, 2023, 5:38 PM IST

Updated : Apr 7, 2023, 5:49 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ ಕ್ಷೇತ್ರಗಳಲ್ಲಿ ಮತ ಪ್ರಚಾರ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ವಿಚಾರವಾಗಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ನಟ ಪ್ರಕಾಶ್​ ರಾಜ್‌ ಪ್ರತಿಕ್ರಿಯಿಸಿ, ಕಿಚ್ಚ ಸುದೀಪ್ ತಮ್ಮನ್ನು ಮಾರಿಕೊಳ್ಳುವವರಲ್ಲ ಎಂದು ಹೇಳಿದ್ದರು. ಆಮೇಲೆ ಸುದೀಪ್​ ಹೇಳಿಕೆ ಕೇಳಿ ನನಗೆ ಆಘಾತವಾಗಿದೆ ಎಂದಿದ್ದರು. ಬಳಿಕ ಸರಣಿ ಟ್ವೀಟ್​ಗಳನ್ನು ಮಾಡಿ ಸುದೀಪ್​ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಇಬ್ಬರು ನಟರಿಗೂ ನಟ ಚೇತನ್​ ಅಹಿಂಸಾ ಟಾಂಗ್​ ಕೊಟ್ಟಿದ್ದಾರೆ.

ಚೇತನ್​ ಅಹಿಂಸಾ ಹೇಳಿದ್ದೇನು?: "ಬಿಜೆಪಿಗೆ ಸುದೀಪ್​ರವರು ನೀಡಿದ ಬೆಂಬಲದಿಂದ ಪ್ರಕಾಶ್​ ರಾಜ್​ರವರು ಆಶ್ಚರ್ಯ ಮತ್ತು ಆಘಾತಕ್ಕೊಳಗಾಗಿದ್ದಾರೆ. ಇದು ಕುತೂಹಲಕಾರಿ ವಿಷಯವಾಗಿದೆ. ಇಬ್ಬರು ಪ್ರತಿಭಾವಂತ ನಟರು, ಒಬ್ಬರು ಬಿಜೆಪಿ ಪರ ಮತ್ತು ಮತ್ತೊಬ್ಬರು ಬಿಜೆಪಿ ವಿರೋಧಿ. ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ. ನಾನು ಇಬ್ಬರ ನಿಲುವುಗಳು ಅಥವಾ ಸಿದ್ಧಾಂತಗಳನ್ನು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಭಳಕೆಗೆ ಹಿಂದಿರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ" ಎಂದು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಕಾಶ್​ ರಾಜ್ ಸರಣಿ​ ಟ್ವೀಟ್​: ಕಿಚ್ಚ ಸುದೀಪ್​ ಅವರು ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಿಸುವ ಮೊದಲು ಪ್ರಕಾಶ್​ ರಾಜ್​ ಪ್ರತಿಕ್ರಿಯಿಸಿ, ಸುದೀಪ್​ ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ ಎಂದು ಹೇಳಿದ್ದರು. ಆಮೇಲೆ ಸುದೀಪ್​ ಹೇಳಿಕೆ ಕೇಳಿ, ನನಗೆ ಆಶ್ಚರ್ಯ ಮತ್ತು ಆಘಾತವಾಗಿದೆ ಎಂದು ಹೇಳಿದ್ದರು. ಬಳಿಕ ಇಂದು ಸರಣಿ ಟ್ವೀಟ್​ಗಳನ್ನು ಮಾಡಿರುವ ಅವರು, "ನೋಡ್ರಪ್ಪ, ನಿಮ್ ಮಾಮನೊ, ನಿಮ್ ಅತ್ತೇನೊ, ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%, .20% ಇಲ್ಲ 30 % ಕೊಡಿ. ಅದು ನಿಮ್ಮಿಷ್ಟ. ಆದ್ರೆ, ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ, ಅಷ್ಟೆ ಅಷ್ಟೇ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಇದು ಶಾರುಖ್ ಖಾನ್ TIME! ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಕಿಂಗ್‌ ಖಾನ್‌

ಇದಲ್ಲದೇ ಮತ್ತೊಂದು ಟ್ವೀಟ್​ನಲ್ಲಿ, "ಸುದೀಪ್ ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ. ಇನ್ನು ಮುಂದೆ ನಿಮ್ಮನ್ನೂ , ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ 'ದಸರಾ' ಸಂಭ್ರಮ: ನ್ಯಾಚುರಲ್​ ಸ್ಟಾರ್ ನಾನಿ ಅಭಿಮಾನಿಗಳು ಖುಷ್​

Last Updated : Apr 7, 2023, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.