ETV Bharat / entertainment

ವಿಕ್ರಾಂತ್​ ರೋಣ ಸೂಕ್ಷ್ಮವಿಲ್ಲದ ಚಿತ್ರ; ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ನಟ ಚೇತನ್​ ಟ್ವೀಟ್​ - ವಿಕ್ರಾಂತ್​ ರೋಣ ಚಿತ್ರ

ನಟ ಕಂ ಹೋರಾಟಗಾರ ಚೇತನ್​ ಅವರು ವಿಕ್ರಾಂತ್​ ರೋಣ ಚಿತ್ರವನ್ನು ವೀಕ್ಷಿಸಿದ ಬಳಿಕ ತಮಗೆ ಅನ್ನಿಸಿದ ಕೆಲವು ಅಭಿಪ್ರಾಯಗಳನ್ನು ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಆದರೆ, ಇವರ ಅಭಿಪ್ರಾಯಗಳು ಸದ್ಯ ಸ್ಯಾಂಡಲ್​ವುಡ್​ನಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.

Actor chetan kumar tweet about vikrant rona movie

author img

By

Published : Aug 4, 2022, 4:27 PM IST

ಇತ್ತೀಚೆಗಷ್ಟೇ ತೆರೆಕಂಡ ಅನೂಪ್ ಭಂಡಾರಿ ನಿರ್ದೇಶನದ, ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್​ ನಟನೆಯ ಪ್ಯಾನ್​ ಇಂಡಿಯಾ ವಿಕ್ರಾಂತ್​ ರೋಣ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ತರಹೇವಾರಿ ವಾದ ಮತ್ತು ವದಂತಿಗಳು ಹರಿದಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಬೆನ್ನಲ್ಲೇ ಆ ದಿನಗಳು ಚಿತ್ರದ ನಟ ಕಂ ಹೋರಾಟಗಾರ ಚೇತನ್​ ಅವರು ಚಿತ್ರದ ಬಗ್ಗೆ ತಮ್ಮ ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇವರ ಅಭಿಪ್ರಾಯಗಳು ಸದ್ಯ ಸ್ಯಾಂಡಲ್​ವುಡ್​ನಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.

  • ‘Vikrant Rona’—good technically & in performances

    I was disappointd in its insensitive portrayal of Dalit-Bahujans as vicious/diabolical & stereotyping of Muslims

    Filmmakers must stop exploiting caste/religion for profits without nuanced understandings of historical in/justices

    — Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 3, 2022 " class="align-text-top noRightClick twitterSection" data=" ">

ಚಿತ್ರವನ್ನು ವೀಕ್ಷಿಸಿದ ಹಲವರು ಸುದೀಪ್​ ನಟನೆಯನ್ನು ಮೆಚ್ಚುಕೊಂಡು ಇದೊಂದು ಅದ್ಭುತ ಕಥೆ ಎಂದು ಬಣ್ಣಿಸುತ್ತಿದ್ದರೆ, ಇನ್ನೂ ಕೆಲವರು ರಂಗಿತರಂಗಿ ಚಿತ್ರದ ಮುಂದುವರೆದ ಭಾಗ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಚಿತ್ರ ನಟ ಚೇತನ್​ ಈ ಬಗ್ಗೆ ಟ್ವೀಟ್​ ಮಾಡಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಗೆ ಕೆಲವರು ಅಪಸ್ವರ ಸಹ ಎತ್ತಿದ್ದಾರೆ.

ಟ್ವೀಟ್​ನಲ್ಲಿ ಏನಿದೆ?: 'ವಿಕ್ರಾಂತ್​ ರೋಣ'- ತಾಂತ್ರಿಕವಾಗಿ ಮತ್ತು ಅಭಿನಯ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ, ದಲಿತರನ್ನು-ಬಹುಜನರನ್ನು ದುಷ್ಟ, ಪೈಶಾಚಿಕನಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್​ ಮಾಡಿದ್ದಾರೆ. ಈ ಸೂಕ್ಷ್ಮವಿಲ್ಲದ ಚಿತ್ರದಿಂದ ನಾನು ನಿರಾಶೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡುವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದೇ ಲಾಭಕ್ಕಾಗಿ ಜಾತಿ/ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಇದೀಗ ಇವರ ಈ ಪೋಸ್ಟ್​ಗೆ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆ ಶುರುವಾಗಿದೆ.

100 ಕೋಟಿ ಕ್ಲಬ್: ಜುಲೈ 28ರಂದು ಜಗತ್ತಿನೆಲ್ಲೆಡೆ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದ 'ವಿಕ್ರಾಂತ್ ರೋಣ' ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳ್​ ಎಬ್ಬಿಸಿದೆ. ಕರ್ನಾಟಕದಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್​, 65 ಮಲ್ಟಿಪ್ಲೆಕ್ಸ್​ನಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಮೊದಲ ದಿನ ರಾಜ್ಯದಲ್ಲಿ 2,500 ಶೋಗಳು ಪ್ರದರ್ಶನಗೊಂಡಿದ್ದವು. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್​ನಲ್ಲಿ 800 ಶೋ ಪ್ರದರ್ಶನವಾಗಿತ್ತು. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಚಿತ್ರ ಪ್ರಾರಂಭಿಸಲಾಗಿತ್ತು. ಸದ್ಯ ವಾರ ಕಳೆಯಲು ಸನಿಹಕ್ಕೆ ಬಂದಿರುವ ಚಿತ್ರ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ವರ್ಷನ್‌ನ ಕಲೆಕ್ಷನ್‌ನಲ್ಲಿ ‘ವಿಕ್ರಾಂತ್ ರೋಣ’ ಮುಂದಿದೆ.

ಇದನ್ನೂ ಓದಿ: ಮಹಾರಾಜ ಟ್ರೋಫಿ: 6 ತಂಡಗಳ ನಾಯಕರ ಘೋಷಿಸಿ, ಟ್ರೋಫಿ ಅನಾವರಣಗೊಳಿಸಿದ ನಟ ಸುದೀಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.