ETV Bharat / entertainment

'ಪ್ರಭುತ್ವ'ದ ಮೂಲಕ ಮತದಾನದ ಮಹತ್ವ ಸಾರಲಿದ್ದಾರೆ ನಟ ಚೇತನ್​ ಚಂದ್ರ - ಈಟಿವಿ ಭಾರತ ಕನ್ನಡ

ಮತದಾನದ ಮಹತ್ವ ಸಾರುವ 'ಪ್ರಭುತ್ವ' ಚಿತ್ರದ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿದೆ.

prabhutva
ಪ್ರಭುತ್ವ
author img

By

Published : Mar 14, 2023, 12:27 PM IST

ರಾಜ್ಯ ಚುನಾವಣೆ ಸಮೀಪಿಸುತ್ತಿದ್ದು, ಮತದಾನದ ಮಹತ್ವ ಸಾರುವ ಸಿನಿಮಾವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. 'ಕುಂಭರಾಶಿ‌' ಸಿನಿಮಾ ಖ್ಯಾತಿಯ ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಚಿತ್ರ ಒಂದಲ್ಲ ಒಂದು ವಿಚಾರದಲ್ಲಿ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ 'ಪ್ರಭುತ್ವ' ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೇಲರ್​ ಅನ್ನು ರಾಜಕೀಯ ಮುಖಂಡರಾದ ರವೀಂದ್ರ ರಿಲೀಸ್​ ಮಾಡಿದ್ದಾರೆ.

ಜೊತೆಗೆ ಟ್ರೇಲರ್​ನಿಂದಾಗಿ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿರುವ ನಟ ಚೇತನ್ ಚಂದ್ರ, "ಇದು ನನ್ನ 12 ನೇ ಸಿನಿಮಾ. ಮೇಘಡಹಳ್ಳಿ ಡಾ.ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ರಂಗನಾಥ್ ಅಷ್ಟೇ ಚೆನ್ನಾಗಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಮತ್ತು ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ" ಎಂದರು.

ಬಳಿಕ ನಿರ್ದೇಶಕ ಆರ್ ರಂಗನಾಥ್ ಮಾತನಾಡಿ, "ಈ ಸಿನಿಮಾ ಮತದಾನದ ಕುರಿತಾಗಿದೆ. ಪ್ರಭುತ್ವ ಚಿತ್ರವು ಚೆನ್ನಾಗಿ ಮೂಡಿಬಂದಿದೆ" ಎಂದು ಹೇಳಿದರು. "ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ದೇಶದಲ್ಲಿ ಮತದಾನ ಅಮೂಲ್ಯವಾದ್ದದ್ದು. ಹೀಗಾಗಿ ಮತವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ" ಎಂದು ಕಥೆಗಾರ ಮೇಘಡಹಳ್ಳಿ ಡಾ. ಶಿವಕುಮಾರ್ ತಿಳಿಸಿದರು.

prabhutva
'ಪ್ರಭುತ್ವ' ಚಿತ್ರತಂಡ

ಇದನ್ನೂ ಓದಿ: 'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?

ನಂತರ ನಾಯಕಿ ಪಾವನ ಗೌಡ ಮಾತನಾಡಿ, ಪ್ರಭುತ್ವ ಸಿನಿಮಾದಲ್ಲಿ ಅನು ಎಂಬ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು. ಇನ್ನು, ಚೇತನ್ ಚಂದ್ರ ಹಾಗೂ ನಟಿ ಪಾವನ ಅಲ್ಲದೇ ನಾಸರ್, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 'ಪ್ರಧಾನಿ ಮೋದಿ ಕರೆ ಮಾಡಿ ರಾಜ್ಯಸಭಾ ಸ್ಥಾನ ನೀಡಿದರು': ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​

ಈ ಚಿತ್ರಕ್ಕೆ ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದ್ದು, ವಿನಯ್ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಇದೀಗ ಟ್ರೇಲರ್ ರಿಲೀಸ್​ ಆಗಿದೆ. ಅಂತೂ ಬಹಳ ವರ್ಷಗಳ ನಂತರ ನಟ ಚೇತನ್ ಚಂದ್ರ ಒಂದೊಳ್ಳೆ ಕಥೆಯ ಜೊತೆಗೆ ಸಿನಿ ಪ್ರಿಯರ ಮುಂದೆ ಬರೋದಕ್ಕೆ ರೆಡಿಯಾಗಿದ್ದಾರೆ.

ಇದನ್ನೂ ಓದಿ: 'ದ ಎಲಿಫೆಂಟ್​ ವಿಸ್ಪರರ್ಸ್': ಮರಿ ಆನೆ ನೋಡಲು ಮುದುಮಲೈ ಶಿಬಿರಕ್ಕೆ ಪ್ರವಾಸಿಗರ ದಂಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.