ಲಾಸ್ ಏಂಜಲೀಸ್ (ಅಮೆರಿಕ): ಬಾಕ್ಸಿಂಗ್ ಡ್ರಾಮಾದ 'ರಾಕಿ' ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಬರ್ಟ್ ಯಂಗ್ (Burt Young) ವಿಧಿವಶರಾಗಿದ್ದಾರೆ. ಜನಪ್ರಿಯ ನಟನಿಗೆ 83 ವರ್ಷ ವಯಸ್ಸಾಗಿತ್ತು. ಬರ್ಟ್ ಯಂಗ್ ಸಾವಿನ ಸುದ್ದಿಯನ್ನು ಅವರ ಪುತ್ರಿ ಅನ್ನೆ ಮೊರಿಯಾ ಸ್ಟಿಂಗೀಸ್ಸರ್ (Anne Moriah Steingiesser) ಅವರು ನ್ಯೂಯಾರ್ಕ್ ಟೈಮ್ಸ್‌ಗೆ ಖಚಿತಪಡಿಸಿದ್ದಾರೆ. 160ಕ್ಕೂ ಹೆಚ್ಚು ಪ್ರೊಜೆಕ್ಟ್ಗಳಲ್ಲಿ ಕಾಣಿಸಿಕೊಂಡಿರುವ ನಟ ಇಹಲೋಕ ತ್ಯಜಿಸಿದ್ದು, ಹಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
160ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಲ್ಲಿ ಕಾಣಿಸಿಕೊಂಡ ನಟ: 'ಚೈನಾ ಟೌನ್' ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಅಮೆರಿಕಾ' ಸೇರಿದಂತೆ ನಟ ಬರ್ಟ್ ಯಂಗ್ ಅವರು 160 ಕ್ಕೂ ಹೆಚ್ಚು ಸಿನಿಮಾ, ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ, ಅವರು 'ದಿ ಗ್ಯಾಂಗ್ ದಟ್ ಕುಡ್ ನಾಟ್ ಶೂಟ್ ಸ್ಟ್ರೈಟ್' (1971) ಮತ್ತು 'ಸಿಂಡ್ರೆಲ್ಲಾ ಲಿಬರ್ಟಿ' (1973) ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಆದಾಗ್ಯೂ, ಸಿಲ್ವೆಸ್ಟರ್ ಸ್ಟಲ್ಲೋನ್ ನಟಿಸಿದ 'ರಾಕಿ' ಚಿತ್ರದಲ್ಲಿನ ಅವರ ಪಾತ್ರ ಜನಪ್ರಿಯತೆ ಹೆಚ್ಚಿಸಿತು.
ಇದನ್ನೂ ಓದಿ: 'ಘೋಸ್ಟ್' ಅಬ್ಬರ ಶುರು: ಚಿತ್ರಮಂದಿರಗಳತ್ತ ಮುಗಿಬಿದ್ದ ಸಿನಿಪ್ರಿಯರು-ಫ್ಯಾನ್ಸ್ ಸೆಲೆಬ್ರೇಶನ್ ವಿಡಿಯೋ ನೋಡಿ
ಬರ್ಟ್ ಯಂಗ್ 1940ರ ಏಪ್ರಿಲ್ 30 ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ನಟನ ಮೂಲ ಹೆಸರು ಜೆರಾಲ್ಡ್ ತೊಮಾಸೊ ಡಿಲೂಯಿಸ್ (Gerald Tommaso DeLouise). ಬಣ್ಣದ ಲೋಕದಲ್ಲಿ ವೃತ್ತಿಜೀವನ ಆರಂಭಿಸಿದ ಸಂದರ್ಭ ಬರ್ಟ್ ಯಂಗ್ ಎಂದು ಹೆಸರು ಬದಲಾಯಿಸಿಕೊಂಡರು. ಪತ್ನಿ ಗ್ಲೋರಿಯಾ ಡಿಲೂಯಿಸ್ 1974ರಲ್ಲೇ ನಿಧನರಾಗಿದ್ದಾರೆ. ಹಾಲಿವುಡ್ನಲ್ಲಿ ಪೋಷಕ ನಟನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದ ಬರ್ಟ್ ಯಂಗ್ ನಿಧನಕ್ಕೆ ಚಿತ್ರರಂಗದವರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ