ಸದ್ಯದಲ್ಲೇ ತೆಲುಗು ಸಿನಿಮಾ ನಿರ್ದೇಶನ ಮಾಡುವುದಾಗಿ ಖ್ಯಾತ ಸಿನಿಮಾ ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅಂಥಾ ವಿಶೇಷತೆ ಇಲ್ಲ ಎಂದ ಅವರು, ಕಥೆ ಗಟ್ಟಿಯಾಗಿದ್ದರೆ, ಗುಣಮಟ್ಟದ ಸಿನಿಮಾ ಮಾಡಿದರೆ ಜಗತ್ತಿನಾದ್ಯಂತ ಜನಪ್ರಿಯತೆ ಸಿಗುತ್ತದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು. ಗುರುವಾರ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ಕೊಟ್ಟ ವೇಳೆ ಮಾತನಾಡಿದ ಅವರು, ಹಲವು ವಿಚಾರಗಳನ್ನು ಹಂಚಿಕೊಂಡರು.
ಕಥೆ ಗಟ್ಟಿತನ ಹೊಂದಿರಬೇಕು: ದೇವರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದು ಮಾತು ಶುರು ಮಾಡಿದ ನಟ ಅರ್ಜುನ್ ಸರ್ಜಾ, ಚಿತ್ರರಂಗ ತುಂಬಾ ಚೆನ್ನಾಗಿದೆ. ಒಳ್ಳೆಯ ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡುತ್ತಿವೆ. ನನ್ನ ಆಲೋಚನೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಂಥಾ ವಿಶೇಷತೆ ಇಲ್ಲ. ಚಿತ್ರ ಚೆನ್ನಾಗಿದ್ದರೆ ಎಲ್ಲೆಡೆ ಹಬ್ಬುತ್ತದೆ ಎಂದರು.
ಕೆಜಿಎಫ್ ಕುರಿತು ಅರ್ಜುನ್ ಸರ್ಜಾ ಅಭಿಪ್ರಾಯ: ಕನ್ನಡ ಸಿನಿಮಾ ಇಂಡಸ್ಟ್ರಿ ಚಿಕ್ಕದಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಅಲ್ಲಿಂದ ಬಂದ ಕೆಜಿಎಫ್ ಎಲ್ಲೆಡೆ ಸದ್ದು ಮಾಡಿತು. ಗುಣಮಟ್ಟದ ಸಿನಿಮಾ ಕೊಟ್ಟರೆ ನೋಡುತ್ತಾರೆಂಬುದು ಜಗತ್ತಿನಾದ್ಯಂತ ಸಾಬೀತಾಗಿದೆ. ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಯಿತು. ಇದರಿಂದ ತಿಳಿದುಕೊಳ್ಳಬೇಕಾದದ್ದು ಬಹಳಷ್ಟಿದೆ. ಹಾಗಾಗಿ ಕಥೆ ಗಟ್ಟಿತನ ಹೊಂದಿರಬೇಕು ಎಂದರು. ಇನ್ನೂ ಕೋವಿಡ್‌ನಿಂದಾಗಿ ಸಂಭವಿಸಿದ ಒಳ್ಳೆಯ ವಿಷಯವೆಂದರೆ ಒಟಿಟಿ ಪ್ಲಾಟ್‌ಫಾರ್ಮ್ ಆಗಮನವಾಗಿದೆ. ಇದರಿಂದ ಆದಾಯ ಎಲ್ಲಿಂದ ಸಿಗಬಹುದು ಎಂಬುದು ಗೊತ್ತಾಗಿದೆ ಎಂದು ತಿಳಿಸಿದರು.
ಒಳ್ಳೆಯ ಸಿನಿಮಾಗಳಿಗೆ ಬೆಂಬಲವಿದೆ: ಕೋವಿಡ್ ನಂತರ ಥಿಯೇಟರ್‌ಗಳಿಗೆ ಪ್ರೇಕ್ಷಕರು ಬರುವುದಿಲ್ಲ, ಚಲನಚಿತ್ರಗಳು ಓಡುವುದಿಲ್ಲ ಎನ್ನಲಾಗಿತ್ತು. ಇದು ಸುಳ್ಳು ಎಂದು ಕಂಡು ಬಂದಿದೆ. ಒಳ್ಳೆಯ ಸಿನಿಮಾಗಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೆಲುಗಿನಲ್ಲೂ ಎರಡ್ಮೂರು ಚಿತ್ರಗಳು ಭರ್ಜರಿ ಪ್ರದರ್ಶನ ಕಂಡಿವೆ. ಸಿನಿಮಾ ಚೆನ್ನಾಗಿದ್ದರೆ ಖಂಡಿತಾ ಯಶಸ್ವಿಯಾಗುತ್ತದೆ. ಅದೇ ತತ್ವವು ಶಾಶ್ವತವಾಗಿ ಅನ್ವಯಿಸುತ್ತದೆ ಎಂದು ಹೇಳಿದರು.
ಕಥೆಯ ಆಯ್ಕೆ ಚೆನ್ನಾಗಿರಬೇಕು: ಒಳ್ಳೆಯ ಸಿನಿಮಾ ಮಾಡಬೇಕು. ಕಥೆಯ ಆಯ್ಕೆ ಚೆನ್ನಾಗಿರಬೇಕು. ಪ್ರೇಕ್ಷಕರು ನೋಡುತ್ತಾರೆಯೇ ಎನ್ನುವ ಭಯವೂ ಇರಬೇಕು. ಒಟಿಟಿಯು ವೀಕ್ಷಕರಿಗೆ ಅನೇಕ ಪರ್ಯಾಯಗಳನ್ನು ಹೊಂದಿದೆ. ಇದು ಕೂಡ ಸಿನಿಮಾ ಯಶಸ್ಸಿಗೆ ಸಹಾಯಕ ಎಂದು ತಿಳಿಸಿದರು.
ಇದನ್ನೂ ಓದಿ: ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್ ಹುಟ್ಟುಹಬ್ಬ.. ಶಿವಾಜಿ ಸುರತ್ಕಲ್ 2 ಟೀಸರ್ ರಿಲೀಸ್
ನನ್ನ ಮಗಳು ಐಶ್ವರ್ಯಳ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದೇನೆ. ವಿಶ್ವಕ್ ಸೇನ್ ಚಿತ್ರದ ನಟ. ನಾನು ಕೂಡ ಸಣ್ಣ ಪಾತ್ರ ಮಾಡುತ್ತಿದ್ದೇನೆ. ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶೀರ್ಷಿಕೆಯನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಇನ್ನೂ ಎರಡು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ತೆಲುಗಿನಲ್ಲೂ ನಿರ್ದೇಶನ ಮಾಡುತ್ತೇನೆ. ಕಥೆಯೂ ಸಿದ್ಧವಾಗಿದೆ. ಮಗಳ ಸಿನಿಮಾ ಮುಗಿದ ನಂತರ ಈ ಸಿನಿಮಾ ಮಾಡುತ್ತೇನೆಂದು ನಟ ಅರ್ಜುನ್ ಸರ್ಜಾ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ.. ಮಕ್ಕಳೊಂದಿಗೆ ಮಾತುಕತೆ