ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಪಂಜಾಬ್ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗೋಲ್ಡನ್ ಟೆಂಪಲ್ ಖ್ಯಾತಿಯ ಹರ್ಮಂದಿರ್ ಸಾಹಿಬ್‌ಗೆ ಕುಟುಂಬಸ್ಥರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಿಂದೂ ಸಂಪ್ರದಾಯದಂತೆ 2011ರ ಮಾರ್ಚ್ 6ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ ಅಯಾನ್ ಮತ್ತು ಅರ್ಹ ಎಂಬ ಇಬ್ಬರು ಮಕ್ಕಳಿದ್ದಾರೆ. ಇಂದು ನಟ ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿ, ಅಯಾನ್ ಮತ್ತು ಅರ್ಹ ಶ್ರೀ ಹರಿಮಂದರ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ದರ್ಬಾರ್ ಸಾಹೇಬ್ನ ವಾರ್ತಾ ಇಲಾಖೆಯಿಂದ ಅಲ್ಲು ಅವರನ್ನು ಸನ್ಮಾನಿಸಲಾಯಿತು.
ಇನ್ನು ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ ಚಿತ್ರವು ಡಿ. 17, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. ರಕ್ತ ಚಂದನ ಕಳ್ಳಸಾಗಣೆ ಕತೆ ಹೊಂದಿರುವ ಚಿತ್ರ ಇದಾಗಿದ್ದು, ಭಾರಿ ಸಕ್ಸಸ್ ಕಂಡಿತ್ತು. ಹಾಡು, ಸಾಹಸ ದೃಶ್ಯಗಳು, ಅಲ್ಲು ಅರ್ಜುನ್ ಅವರ ನಟನೆ, ರಶ್ಮಿಕಾ ಮಂದಣ್ಣ ನೃತ್ಯ ಸೇರಿದಂತೆ ಹಲವು ಕಾರಣಗಳಿಂದ ನೋಡುಗರ ಮನ ಗೆದ್ದಿತ್ತು. ಇದರ ಮುಂದುವರಿದ ಭಾಗದ ಚಿತ್ರೀಕರಣ ಕಳೆದ ಆಗಸ್ಟ್ನಲ್ಲಿ ಆರಂಭವಾಗಿದೆ.
ಇದನ್ನೂ ಓದಿ: ಹಿಂದಿ ದೃಶ್ಯಂ 2 ಟೀಸರ್ ರಿಲೀಸ್.. ನ.18ಕ್ಕೆ ಸಿನಿಮಾ ತೆರೆಗೆ