ಸೂಪರ್ ಹಿಟ್ ಹಿಂದಿ ಸಿನಿಮಾ ತ್ರಿ ಈಡಿಯಟ್ಸ್ ಖ್ಯಾತಿಯ ಅಖಿಲ್ ಮಿಶ್ರಾ ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೂಲಗಳ ಪ್ರಕಾರ, ಅಖಿಲ್ ಮಿಶ್ರಾ ಅವರ ಪತ್ನಿ, ನಟಿ ಸುಝಾನ್ನೆ ಬರ್ನರ್ಟ್ (Suzanne Bernert) ಅವರು ಸಿನಿಮಾ ಶೂಟಿಂಗ್ ಸಲುವಾಗಿ ಹೈದರಾಬಾದ್ನಲ್ಲಿದ್ದ ವೇಳೆ ಘಟನೆ ನಡೆದಿದೆ.
-
May his soul rest in peace ❤️
— Sigmento (@Momento_prooo) September 21, 2023 " class="align-text-top noRightClick twitterSection" data="
He is permanent in our hearts with his flawless acting skills #3Idiots #AkhilMishra pic.twitter.com/AINrg7SFDf
">May his soul rest in peace ❤️
— Sigmento (@Momento_prooo) September 21, 2023
He is permanent in our hearts with his flawless acting skills #3Idiots #AkhilMishra pic.twitter.com/AINrg7SFDfMay his soul rest in peace ❤️
— Sigmento (@Momento_prooo) September 21, 2023
He is permanent in our hearts with his flawless acting skills #3Idiots #AkhilMishra pic.twitter.com/AINrg7SFDf
ಬಾಲಿವುಡ್ನ ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ್ದ 3 ಈಡಿಯಟ್ಸ್ ಚಿತ್ರದಲ್ಲಿ ಲೈಬ್ರೇರಿಯನ್ ದುಬೆ (librarian Dubey) ಪಾತ್ರವನ್ನು ಇವರು ನಿರ್ವಹಿಸಿದ್ದರು. ಇಂದು ಅಡುಗೆ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
''ನನ್ನ ಹೃದಯ ಒಡೆದುಹೋಗಿದೆ. ನನ್ನ ಬಾಳಸಂಗಾತಿ ಇನ್ನಿಲ್ಲ'' ಎಂದು ಪತ್ನಿ ಸುಝಾನ್ನೆ ಬರ್ನರ್ಟ್ ದುಃಖ ತೋಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಟಿ ಹೈದರಾಬಾದ್ನಿಂದ ಹೊರಟರು.
-
3 Idiots fame actor Akhil Mishra died in a city hospital. He was 58 and few days back fall down in his house. An intelligent actor gone away, will be missed. RIP Sir 🙏#akhilmishra #RIPAkhilMishra pic.twitter.com/tIej8uxlb2
— HEMANT NARANG (@hemantsae) September 21, 2023 " class="align-text-top noRightClick twitterSection" data="
">3 Idiots fame actor Akhil Mishra died in a city hospital. He was 58 and few days back fall down in his house. An intelligent actor gone away, will be missed. RIP Sir 🙏#akhilmishra #RIPAkhilMishra pic.twitter.com/tIej8uxlb2
— HEMANT NARANG (@hemantsae) September 21, 20233 Idiots fame actor Akhil Mishra died in a city hospital. He was 58 and few days back fall down in his house. An intelligent actor gone away, will be missed. RIP Sir 🙏#akhilmishra #RIPAkhilMishra pic.twitter.com/tIej8uxlb2
— HEMANT NARANG (@hemantsae) September 21, 2023
ನಟ ಅಖಿಲ್ ಮಿಶ್ರಾ ಭನ್ವಾರ್, ಉಡಾನ್, ಸಿಐಡಿ, ಶ್ರೀಮಾನ್ ಶ್ರೀಮತಿ, ಭಾರತ್ ಏಕ್ ಕೋಜ್, ರಜನಿ ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರನ್ನಲ್ಲಿ ಉಮೇದ್ ಸಿಂಗ್ ಬುಂದೇಲಾ ಪಾತ್ರ ನಿರ್ವಹಿಸುವ ಮೂಲಕ ದೊಡ್ಡ ಮಟ್ಟದ ಹೆಸರು ಸಂಪಾದಿಸಿದರು. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಅವರ ಬ್ಲಾಕ್ ಬಸ್ಟರ್ ಸಿನಿಮಾ ತ್ರಿ ಈಡಿಯಟ್ಸ್‌ನಲ್ಲಿ ಲೈಬ್ರೇರಿಯನ್ ಪಾತ್ರ ನಿರ್ವಹಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಅಲ್ಲದೇ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಡಾನ್, ವೆಲ್ ಡನ್ ಅಬ್ಬಾ, ಹಝಾರೋನ್ ಖ್ವಾಯಿಶೇನ್ ಐಸಿ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಕಾರ್ಯನಿರ್ವಹಿಸಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು.
ಇದನ್ನೂ ಓದಿ: 'ಜವಾನ್'ನಲ್ಲಿ ದೀಪಿಕಾ ಪಡುಕೋಣೆ ಪಾತ್ರಕ್ಕೆ ಹೆಚ್ಚು ಒತ್ತು; ಬಾಲಿವುಡ್‌ನಿಂದ ಮುನಿಸಿಕೊಂಡರೇ ನಯನತಾರಾ
ಬಾಲಿವುಡ್ ಬಹುಬೇಡಿಕೆ ನಟರಾದ ಅಮೀರ್ ಖಾನ್, ಕರೀನಾ ಕಪೂರ್ ಖಾನ್, ಶರ್ಮಾನ್ ಜೋಶಿ, ಆರ್ ಮಾಧವನ್, ಬೋಮನ್ ಇರಾನಿ ಸೇರಿದಂತೆ ಹಲವರು ನಟಿಸಿರುವ ತ್ರಿ ಈಡಿಯಟ್ಸ್ ಚಿತ್ರದಲ್ಲಿ ಲೈಬ್ರೇರಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ನಟನ ಜನಪ್ರಿಯತೆ ಹೆಚ್ಚಲು ಸಹಾಯ ಮಾಡಿದೆ. ರಾಜ್ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇಂದಿಗೂ ಪ್ರೇಕ್ಷಕರು ಮತ್ತೊಮ್ಮೆ ಈ ಸಿನಿಮಾ ವೀಕ್ಷಿಸಲು ಇಷ್ಟ ಪಡುತ್ತಾರೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ 'ಘೋಸ್ಟ್' ಕೋಟಿ ಕೋಟಿ ವ್ಯವಹಾರ: ಹ್ಯಾಟ್ರಿಕ್ ಹೀರೋ ಸಿನಿಮಾ ಬಗ್ಗೆ ಭಾರಿ ಕುತೂಹಲ!
2009ರಲ್ಲಿ ನಟ ಅಖಿಲ್ ಮಿಶ್ರಾ, ಜರ್ಮನ್ ನಟಿ ಸುಝಾನ್ನೆ ಬರ್ನರ್ಟ್ ಪರಿಚಿತರಾದರು. 2011ರ ಸೆಪ್ಟೆಂಬರ್ 30ರಂದು ದಾಂಪತ್ಯ ಜೀವನ ಆರಂಭಿಸಿದರು. ಮೇರಾ ದಿಲ್ ದೀವಾನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2019ರಲ್ಲಿ ಬಂದ ಮಜ್ನು ಕಿ ಜೂಲಿಯಟ್ ಎಂಬ ಕಿರು ಚಿತ್ರದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಶಾರ್ಟ್ ಫಿಲ್ಮ್ ಅನ್ನು ಅಖಿಲ್ ಮಿಶ್ರಾ ಅವರೇ ಬರೆದು ನಿರ್ದೇಶಿಸಿದ್ದಾರೆ.