ETV Bharat / entertainment

ಪತ್ನಿ, ಪುತ್ರಿಯೇ ತಮ್ಮ ಮೆಚ್ಚಿನ ಜನರೆಂದ ಅಭಿಷೇಕ್ ಬಚ್ಚನ್! - ಐಶ್ವರ್ಯಾ ರೈ

ಪತ್ನಿ, ಪುತ್ರಿಯ ಫೋಟೋಗೆ ನಟ ಅಭಿಷೇಕ್ ಬಚ್ಚನ್ ಕಾಮೆಂಟ್​ ಮಾಡಿದ್ದಾರೆ.

Abhishek Bachchan Aishwarya Rai
ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ
author img

By

Published : Apr 6, 2023, 7:51 PM IST

ಕಳೆದ ವಾರ 'ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​' (ಎನ್​ಎಂಎಸಿಸಿ) ಉದ್ಘಾಟನೆಯಾಗಿದೆ. ಮುಂಬೈನ ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್​ನ ಜಿಯೋ ವರ್ಲ್ಡ್​ ಗಾರ್ಡನ್ಸ್​ನಲ್ಲಿ ಮೂರು ದಿನಗಳ ಅದ್ಧೂರಿ ಕಾರ್ಯಕ್ರಮ ನಡೆದಿದೆ. ಈ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸಾಕ್ಷಿಯಾಗಿದ್ದರು. ವಿಶೇಷವಾಗಿ ದೇಶ ವಿದೇಶಗಳ ಸ್ಟಾರ್ ಸೆಲೆಬ್ರಿಟಿಗಳು ಗಮನ ಸೆಳೆದಿದ್ದಾರೆ. ಎನ್​ಎಂಎಸಿಸಿ ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Abhishek Bachchan comments on Aishwarya Rai picture
ಅಭಿಮಾನಿಯೋರ್ವರ ಪೋಸ್ಟ್​ಗೆ ಅಭಿಷೇಕ್ ಬಚ್ಚನ್ ಕಾಮೆಂಟ್

ಈ ಸಮಾರಂಭಕ್ಕೆ ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ತಮ್ಮ ಪುತ್ರಿ ಆರಾಧ್ಯ ಜೊತೆ ಆಗಮಿಸಿದ್ದರು. ಅಭಿಮಾನಿಯೊಬ್ಬರು ತಾಯಿ ಮಗಳ ಫೋಟೋ ಹಂಚಿಕೊಂಡು ನನ್ನ ಮೆಚ್ಚಿನ ಜನರು ಎಂದು ಬರೆದುಕೊಂಡಿದ್ದಾರೆ. ರೆಡ್​ ಹಾರ್ಟ್ ಎಮೋಜಿ ಇದ್ದ ಈ ಪೋಸ್ಟ್ ಅನ್ನು ಐಶ್ವರ್ಯಾ ಅವರ ಪತಿ, ನಟ ಅಭಿಷೇಕ್ ಬಚ್ಚನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಫೋಟೋಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್, ''ನನ್ನ ಮೆಚ್ಚಿನ ಜನರೂ ಕೂಡ'' ಎಂದು ಕಾಮೆಂಟ್ ಮಾಡಿದ್ದಾರೆ.

ಪುತ್ರಿ ಆರಾಧ್ಯ ಜೊತೆ ನಟಿ ಐಶ್ವರ್ಯಾ ರೈ

ಐಶ್ವರ್ಯಾ ರೈ ಪತಿ ಅಭಿಷೇಕ್ ಇಲ್ಲದೇ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಅವರ ದಾಂಪತ್ಯದಲ್ಲಿ ಸಮಸ್ಯೆಗಳಿವೆ ಎಂಬ ವದಂತಿ ಹುಟ್ಟಿಕೊಂಡವು. ಆದಾಗ್ಯೂ, ಅಭಿಷೇಕ್ ಅವರ ಟ್ವೀಟ್ ದಂಪತಿಗಳ ನಡುವೆ ಎಲ್ಲವೂ ಸರಿಯಾಗಿದೆ ಎಂಬುದನ್ನು ತಿಳಿಸಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಭಾರತದಲ್ಲಿ ಅತ್ಯಂತ ಪವರ್​​ ಫುಲ್ ಹಾಗೂ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.​

ಇವರಿಬ್ಬರು ಮದುವೆಯಾಗಿ 16 ವರ್ಷ ಜೀವನ ನಡೆಸಿದ್ದಾರೆ. ಆಗಾಗ್ಗೆ ಒಟ್ಟಿಗೆ ವಿದೇಶಕ್ಕೆ ಪ್ರವಾಸ ತೆರಳುತ್ತಾರೆ. ಅವರೂಪಕ್ಕೆ ತಮ್ಮ ಮುದ್ದಾದ ಫೋಟೋ ಶೇರ್ ಮಾಡುತ್ತಾರೆ. ತಮ್ಮ ಪ್ರೀತಿ ವ್ಯಕ್ತಪಡಿಸುವುದರಿಂದಲೂ ಹಿಂದೆ ಸರಿಯಲ್ಲ. ಆದಾಗ್ಯೂ, ಇವರ ದಾಂಪತ್ಯದಲ್ಲಿ ಸಮಸ್ಯೆಗಳಿವೆ ಎಂಬ ಬಗ್ಗೆ ವದಂತಿಗಳು ಹರಡುತ್ತವೆ. ಇತ್ತಿಚಿನ ಈವೆಂಟ್‌ಗಳಿಗೆ ಅಭಿಷೇಕ್ ಅನುಪಸ್ಥಿತಿಯು ಅವರ ವೈವಾಹಿಕ ಜೀವನದಲ್ಲಿ ತೊಂದರೆಯಿದೆ ಎಂದು ಊಹಿಸಲು ಕಾರಣವಾಗಿತ್ತು.

ಇದನ್ನೂ ಓದಿ: SCAM 1770 ಪೋಸ್ಟರ್ ರಿಲೀಸ್: ನೀವು ನೋಡಲೇಬೇಕಾದ ಸಿನಿಮಾ ಎಂದ ನಿರ್ದೇಶಕ

ಏಪ್ರಿಲ್ 1ರಂದು ಎನ್​ಎಮ್​ಎಸಿಸಿ ಈವೆಂಟ್‌ನ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಐಶ್ವರ್ಯಾ ಮಗಳೊಂದಿಗೆ ಆಗಮಿಸಿ ಗಮನ ಸೆಳೆದಿದ್ದಾರೆ. ಇವರ ಚೆಂದದ ಫೋಟೋಗಳು ವೈರಲ್​ ಆಗುತ್ತಿವೆ. ಆದರೆ, ಆ ಸಮಯದಲ್ಲಿ ಅಭಿಷೇಕ್ ಜೊತೆಗಿರಲಿಲ್ಲ. ಇದು ಅವರ ನಡುವೆ ಬಿರುಕಿದೆ ಎಂಬ ವದಂತಿ ಹುಟ್ಟುಹಾಕಿದೆ. ದಂಪತಿ ವಿಚ್ಛೇದನ ಪಡೆಯಲಿದ್ದಾರಾ ಎಂಬ ಬಗ್ಗೆ ಊಹಾಪೋಹಗಳು ಎದ್ದಿವೆ.

ಇದನ್ನೂ ಓದಿ: ಸೂಪರ್​ ಸ್ಟಾರ್​ಗಳೊಂದಿಗೆ ನಟನೆ: ಬಾಲಿವುಡ್​ಗೆ ಆರ್​ಆರ್​ಆರ್​ ನಟ ಜೂ. ಎನ್​ಟಿಆರ್​ ಎಂಟ್ರಿ!

ಕಳೆದ ವಾರ ನಡೆದ ಈ ಕಾರ್ಯಕ್ರಮಕ್ಕೆ ರಜನಿಕಾಂತ್​, ಸೌಂದರ್ಯ, ಸಲ್ಮಾನ್​ ಖಾನ್​,​ ಶಾರುಖ್​ ಖಾನ್​ ಕುಟುಂಬ, ವರುಣ್​ ಧವನ್, ಶಾಹಿದ್​ ಕಪೂರ್​ ಫ್ಯಾಮಿಲಿ, ಬಾಲಿವುಡ್​ ನವ ಜೋಡಿಗಳಾದ ಸಿದ್ಧಾರ್ಥ್​ ಮಲ್ಹೋತ್ರಾ ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ ರಣ್ವೀ​ರ್​​ ಸಿಂಗ್ ಕಪಲ್​​, ಪ್ರಿಯಾಂಕಾ ಚೋಪ್ರಾ ನಿಕ್​ ಜೋನಾಸ್ ದಂಪತಿ​, ಕರಣ್​ ಜೋಹಾರ್​, ಶ್ರದ್ಧಾ ಕಪೂರ್​, ಜಾನ್ವಿ ಕಪೂರ್​, ಸೋನಂ, ಹನ್ಸಿಕಾ ಮೋಟ್ವಾನಿ, ಆಲಿಯಾ ಭಟ್ ಕುಟುಂಬ, ಕ್ರಿಕೆಟಿಗ ಸಚಿನ್​ ಕುಟುಂಬ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.