ETV Bharat / entertainment

ಅಭಿಷೇಕ್ ಅಂಬರೀಶ್- ಅವಿವಾ ಮದುವೆಗೆ ಸಿದ್ಧತೆ: ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ? - sumalatha

ಅಭಿಷೇಕ್ ಅಂಬರೀಶ್​ ಹಾಗೂ ಅವಿವಾ ಬಿದ್ದಪ್ಪ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

Abhishek Ambarish aviva wedding invitation card
ಅಭಿಷೇಕ್ ಅಂಬರೀಶ್ ಅವಿವಾ ಮದುವೆ ಆಮಂತ್ರಣ ಪತ್ರಿಕೆ
author img

By

Published : May 31, 2023, 1:15 PM IST

ಅಭಿಷೇಕ್ ಅಂಬರೀಶ್ ಅವಿವಾ ಮದುವೆ ಆಮಂತ್ರಣ ಪತ್ರಿಕೆ

ರೆಬೆಲ್ ಸ್ಟಾರ್ ದಿ.ಅಂಬರೀಶ್​ ಪುತ್ರ ಅಭಿಷೇಕ್ ಅಂಬರೀಶ್​ ವಿವಾಹಕ್ಕೆ ಸಿದ್ಧತೆ ಜೋರಾಗೇ ನಡೆಯುತ್ತಿದೆ. ಪ್ರೀತಿಸಿದ ಹುಡುಗಿ, ಫ್ಯಾಷನ್ ಡಿಸೈನರ್​ ಅವಿವಾ ಬಿದ್ದಪ್ಪ ಕೈ ಹಿಡಿದು ಗೃಹಸ್ತಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಅಭಿಷೇಕ್. ಸದ್ಯ ಮದುವೆ ಆಮಂತ್ರಣ ಪತ್ರಿಕೆ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ.

ಪ್ರಧಾನಿ ಮೋದಿಗೆ ತಲುಪಿದೆ ಇನ್ವಿಟೇಶನ್: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸೂಪರ್ ಸ್ಟಾರ್​ಗಳಾದ ರಜನಿಕಾಂತ್, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಇದೇ ವಿವಾಹ ಪತ್ರಿಕೆಯನ್ನು ಸುಮಲತಾ ಹಾಗೂ ಅಭಿಷೇಕ್ ತಲುಪಿಸಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಮದುವೆ ಆಮಂತ್ರಣ ಪತ್ರಿಕೆ ಅದ್ಧೂರಿಯಾಗಿದ್ದು, ವಿಶೇಷವಾಗಿ ಸಿದ್ಧಪಡಿಸಲಾಗಿದೆ. ದ್ರಾಕ್ಷಿ, ಗೋಡಂಬಿ ಸೇರಿದಂತೆ ಡ್ರೈ ಫ್ರ್ಯೂಟ್ಸ್​​​​​ನಿಂದ ಈ ಲಗ್ನಪತ್ರಿಕೆ ರೆಡಿ ಮಾಡಿದ್ದಾರೆ.

ಮೆಹೆಂದಿ, ಸಂಗೀತ್, ಅತಿಥಿಗಳ ಡಿಟೈಲ್ಸ್ ಇಲ್ಲಿದೆ..: ಮದುವೆ ಸಂಭ್ರಮ ಈಗಾಗಲೇ ಆರಂಭ ಆಗಿದೆ. ಎರಡೂ ಮನೆಯಲ್ಲೂ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಜೂನ್ 2 ರಿಂದಲೇ ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮಗಳು ಆರಂಭ ಆಗುತ್ತಿವೆ. ಜೂನ್ 2ರಂದು ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಜೂನ್ 3 ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಎರಡು ತಂಡಗಳಾಗಿ ಈ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಜೂನ್ 4 ರಂದು ಚಪ್ಪರ ಶಾಸ್ತ್ರ ಇರಲಿದೆ. ಜೂನ್ 5ರಂದು ವಿವಾಹ ಮಹೋತ್ಸವ ನಡೆಯಲಿದೆ. ಕೇವಲ ಆತ್ಮೀಯರು ಹಾಗೂ ಕುಟುಂಬಸ್ಥರು ಮಾತ್ರ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಬಳಗ ದೊಡ್ಡದಿದೆ. ಇಬ್ಬರೂ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಆತ್ಮೀಯರನ್ನು ಸಂಪಾದಿಸಿದ್ದಾರೆ. ಈಗಾಗಲೇ ಎರಡೂ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಟ್ಟಾಗಿದೆ. ಅಭಿಷೇಕ್ ಅಂಬರೀಶ್ ಆತ್ಮೀಯ ಮೂಲಗಳ ಪ್ರಕಾರ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಸೂಪರ್‌ಸ್ಟಾರ್ ರಜನಿಕಾಂತ್, ಸೂರ್ಯ, ಜೂ. ಎನ್‌ಟಿಆರ್ ಆಗಮಿಸುತ್ತಿದ್ದಾರೆ. ಇವರೊಂದಿಗೆ ಕನ್ನಡ ಚಿತ್ರರಂಗದ ದಿಗ್ಗಜರು ರಾಜಕೀಯ ಗಣ್ಯರು ಬರಲಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಹೆಚ್‌.ಡಿ. ದೇವೇಗೌಡ, ಹೆಚ್‌.ಡಿ. ಕುಮಾರಸ್ವಾಮಿ ಕೂಡ ಮದುವೆಗೆ ಬರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಖಾನ್​ ಪುತ್ರಿ: ಸಾಮರಸ್ಯದ ಸಂದೇಶ ಸಾರಿದ ನಟಿ ಸಾರಾ

ಜೂನ್ 7 ರಂದು ಅದ್ಧೂರಿ ಆರತಕ್ಷತೆ ಇಟ್ಟುಕೊಂಡಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಸುಮಾರು 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಭಾಷಣ ಮಾಡಿದ್ದ ಮಂಡ್ಯದ ಗೆಜ್ಜಲಗೆರೆಯಲ್ಲಿ ಅಭಿಮಾನಿಗಳಿಗಾಗಿ ಅದ್ಧೂರಿ ಬೀಗರ ಊಟವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಅಂಬಿ ಅಭಿಮಾನಿಗಳು ಬರಲಿದ್ದಾರೆ.

ಇದನ್ನೂ ಓದಿ: 1 ರೂಪಾಯಿ ಕೊಟ್ಟು 'ಯದಾ ಯದಾಹಿ' ಸಿನಿಮಾ ಪ್ರೀಮಿಯರ್ ಶೋ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.