ಮುಂಬೈ: ಬಾಲಿವುಡ್ನ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿ ಆಗಿರುವ ರಂಗಭೂಮಿ ನಿರ್ದೇಶಕಿ ಇರಾ ಖಾನ್ ಶುಕ್ರವಾರ ತಮ್ಮ ಬಹುಕಾಲದ ಸಂಗಾತಿ ನೂಪುರ್ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರೊಂದಿಗೆ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಇರಾ ಖಾನ್ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು.
- " class="align-text-top noRightClick twitterSection" data="
">
ಶುಕ್ರವಾರ ನಿರೀಕ್ಷೆಯಂತೆ ತಾರಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಅಮೀರ್ ಖಾನ್, ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್, ಇಮ್ರಾನ್ ಖಾನ್ ಮತ್ತು ಮನ್ಸೂರ್ ಖಾನ್ ಸೇರಿದಂತೆ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಶಿಖರೆ ಕಪ್ಪು ಟುಕ್ಸೆಡೊವನ್ನು ಧರಿಸಿದ್ದರೆ, ಇರಾ ಕೆಂಪು ಬಣ್ಣದ ಗೌನ್ ಆಯ್ಕೆ ಮಾಡಿಕೊಂಡರು. ಈ ಜೋಡಿ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ನೂಪುರ್ ಶಿಖರೆ ಅವರು ಕೆಲವು ತಿಂಗಳ ಹಿಂದೆ ಇರಾ ಖಾನ್ ಅವರಿಗೆ ಇಟಲಿಯಲ್ಲಿ ನಡೆದ ತಮ್ಮ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ಮಾಡಿದ್ದರು.
ಇದನ್ನೂ ಓದಿ: ಪವರ್ ಸ್ಟಾರ್ ಆದರ್ಶದ ಹಾದಿಯಲ್ಲಿ ಗೋಲ್ಡನ್ ಸ್ಟಾರ್.. ಗಣೇಶ್ ಬಗ್ಗೆ ರಂಗಾಯಣ ರಘು ಗುಣಗಾನ