ETV Bharat / entertainment

10 ವರ್ಷಗಳ ಬ್ರೇಕ್ ಬಳಿಕ ಬರಲಿದೆ ಅಮೀರ್ ಖಾನ್ - ರಾಜ್‌ಕುಮಾರ್ ಹಿರಾನಿ ಸಿನಿಮಾ - ಅಮೀರ್ ಖಾನ್ ಸಿನಿಮಾಗಳು

ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಲಿರುವ ಬಯೋಪಿಕ್​ನಲ್ಲಿ ನಟ ಅಮೀರ್ ಖಾನ್ ನಟಿಸಲಿದ್ದಾರೆ ಎಂಬ ವರದಿಗಳಿವೆ.

Aamir Khan and Rajkumar Hirani
ಅಮೀರ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಸಿನಿಮಾ
author img

By

Published : Jul 5, 2023, 8:03 PM IST

3 ಈಡಿಯಟ್ಸ್ ಮತ್ತು ಪಿಕೆ ಅಂತಹ ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ನಟ ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತೆ ಒಟ್ಟಿಗೆ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ಬಯೋಪಿಕ್​​ ಒಂದನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿದ್ದಾರೆ.

ವರದಿಗಳ ಪ್ರಕಾರ, ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಐಡಿಯಾ ಬಗ್ಗೆ ನಟ ಅಮೀರ್ ಖಾನ್​ ಉತ್ಸುಕರಾಗಿದ್ದರು. ಸದ್ಯ ಅವರ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಮುಂದಿನ ಈ ಪ್ರಾಜೆಕ್ಟ್ ಇನ್ನೂ ಯೋಜನಾ ಹಂತದಲ್ಲಿದೆ. ಈ ಬಯೋಪಿಕ್​​ ನಿರ್ಮಾಣ ಆಗಬಹುದೆಂಬ ಭರವಸೆ ಇದೆ. ಅವರ ಹಿಂದಿನ ಸಿನಿಮಾ PK ತೆರೆ ಕಂಡು ಸುಮಾರು 9 ವರ್ಷಗಳ ನಂತರ ನಟ - ನಿರ್ದೇಶಕರ ಜೋಡಿ ಬಯೋಪಿಕ್​ ಒಂದರ ಸಲುವಾಗಿ ಸದ್ದು ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್​ ಕಳೆದ ಸಾಲಿನಲ್ಲೇ ಕೆಲಸ ಆರಂಭಿಸಿದೆ ಎಂಬ ವರದಿ ಇದೆ.

ಈ ಹಿಂದೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದ ಅಮೀರ್​​ ಮತ್ತು ಹಿರಾನಿ, ಕೊನೆಗೆ ಇಬ್ಬರಿಗೂ ಇಷ್ಟವಾಗುವ ವಿಷಯವನ್ನು ಅಂತಿಮಗೊಳಿಸಿದ್ದಾರೆ. ವರದಿಗಳ ಪ್ರಕಾರ, ಹಿರಾನಿ ಅವರ ಐಡಿಯಾವನ್ನು ಕೇಳಿದ ತಕ್ಷಣ ಅಮೀರ್​ ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ನಿರ್ದೇಶಕರು ಪ್ರಸ್ತುತ ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಡಂಕಿ ಸಿನಿಮಾ ಬಿಡುಗಡೆ ಆದ ಕೂಡಲೇ ನಿರ್ದೇಶಕರು ಅಮೀರ್​ ಖಾನ್​ ಸಿನಿಮಾದ ಫೈನಲ್​ ಸ್ಕ್ರಿಪ್ಟ್ ಮತ್ತು ಇತರ ಪ್ರೀ ಪ್ರೊಡಕ್ಷನ್​ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ. ಅಮೀರ್ ಮತ್ತು ಹಿರಾನಿ ಜೋಡಿಯ ಈ ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದೆಯಾದರೂ, ಬಹುತೇಕ ಖಚಿತ ಎಂದು ಹೇಳಲಾಗಿದೆ. ಸ್ಕ್ರಿಪ್ಟ್​ ಫೈನಲ್​ ಆದ ಬಳಿಕ ಚಿತ್ರತಂಡ ಸಿನಿಮಾ ಘೋಷಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಶಾರುಖ್​ ಖಾನ್ ಸಿನಿಮಾ ದಾಖಲೆ: ಬಿಡುಗಡೆಗೂ ಮುನ್ನ 480 ಕೋಟಿ ರೂ. ವ್ಯವಹಾರ ನಡೆಸಿದ ಜವಾನ್, ಡಂಕಿ!

ಎಲ್ಲವೂ ಅಂದುಕೊಂಡಂತೆ ನಡೆದರೆ, 2014ರಲ್ಲಿ ತೆರೆಕಂಡ PK ಬಿಡುಗಡೆಯಾದ 10 ವರ್ಷಗಳ ನಂತರ ಅಮೀರ್ ಮತ್ತು ಹಿರಾನಿ ಮುಂದಿನ ವರ್ಷ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಕರೀನಾ ಕಪೂರ್ ಖಾನ್ ಜೊತೆ ನಟಿಸಿದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಮೀರ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ನಂತರ ಕುಟುಂಬಕ್ಕೆ ಸಮಯ ಮೀಸಲಿಡುವುದಾಗಿ ಘೋಷಿಸಿದ ನಟ ಅಮೀರ್​ ಖಾನ್​, ಸಿನಿಮಾಗಳಿಂದ ಕೊಂಚ ಬ್ರೇಕ್​ ಪಡೆಯುವುದಾಗಿಯೂ ತಿಳಿಸಿದ್ದರು.

ಇದನ್ನೂ ಓದಿ: ನಾನು ಜೀವನದಲ್ಲಿ ಒಮ್ಮೆ ಮಾತ್ರ ಪ್ರೀತಿ ಮಾಡಿದ್ದೇ; ಈಗ ಭಾವನೆಗಳೇ ಇಲ್ಲ, ಪ್ರತಿಯೊಬ್ಬರೂ ಸ್ವಾರ್ಥಿ ಎಂದಿದ್ದೇಕೆ ನಟಿ ಶೆಹನಾಜ್​ ಗಿಲ್?

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಸಿನಿಮಾದಲ್ಲಿ ಸೂಪರ್​ ಸ್ಟಾರ್ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡ ನಟಿಸಿದ್ದಾರೆ. ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಡಂಕಿ ಸಿನಿಮಾ ಎಸ್​ಆರ್​ಕೆ ಮತ್ತು ಹಿರಾನಿ ಕಾಂಬಿನೇಶನ್​ನ ಮೊದಲ ಸಿನಿಮಾ. ಡಂಕಿ ಚಿತ್ರದ ನಾನ್ ಥಿಯೇಟ್ರಿಕಲ್ ರೈಟ್ಸ್ 230 ಕೋಟಿ ರೂ.ಗೆ ಮಾರಾಟವಾಗಿದೆ ಎಂಬ ಮಾಹಿತಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.