ETV Bharat / entertainment

ಮಾನಸಿಕ ಆರೋಗ್ಯ: 'ಮುಜುಗರಕ್ಕೆ ಒಳಗಾಗದೇ ತಜ್ಞರ ಸಹಾಯ ಪಡೆಯಿರಿ' .. ಅಮೀರ್ ಖಾನ್ ಸಲಹೆ - ಇರಾ ಖಾನ್ ಮಾನಸಿಕ ಆರೋಗ್ಯ

ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆ ಬಾಲಿವುಡ್​ ಹಿರಿಯ ನಟ ಅಮೀರ್ ಖಾನ್ ಮತ್ತು ಪುತ್ರಿ ಇರಾ ಖಾನ್​ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Aamir Khan and Ira Khan
ಅಮೀರ್ ಖಾನ್ - ಇರಾ ಖಾನ್​
author img

By ETV Bharat Karnataka Team

Published : Oct 10, 2023, 2:00 PM IST

ಬಾಲಿವುಡ್ ಸೂಪರ್‌ ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಮಾನಸಿಕ ಆರೋಗ್ಯಕ್ಕಾಗಿ ತಜ್ಞರ ಸಹಾಯ ಪಡೆಯುವುದರ ಹಿಂದಿನ ಪ್ರಾಮುಖ್ಯತೆ ಬಗ್ಗೆ ಸಂದರ್ಶನಗಳಲ್ಲಿ ಬೆಳಕು ಚೆಲ್ಲುತ್ತಾರೆ. ಇಂದು ವಿಶ್ವ ಮಾನಸಿಕ ಆರೋಗ್ಯ ದಿನ. ಈ ಹಿನ್ನೆಲೆ ಇರಾ ಖಾನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಮೀರ್​ ಖಾನ್​ ಕೂಡ ಮಗಳೊಂದಿಗೆ ಸೇರಿ ಮಾತನಾಡಿದ್ದಾರೆ. ಯೋಗಕ್ಷೇಮಕ್ಕಾಗಿ ತಜ್ಞರ ಸಹಾಯ ಪಡೆಯೋದು ಮುಜುಗರದ ವಿಷಯ ಅಲ್ಲ ಎಂಬುದನ್ನು ತಂದೆ ಮಗಳು ತಿಳಿಸಿದ್ದು ಅನೇಕರಿಗೆ ಸ್ಫೂರ್ತಿಯಾಗಿದೆ.

ಹೆಚ್ಚು ಬಳಕೆಯಾಗುವ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ಅಮೀರ್ ಖಾನ್ ಮತ್ತು ಇರಾ ಖಾನ್ ನಿತ್ಯದ ವಿಷಯಗಳನ್ನು ಉದಾಹಣೆ ಆಗಿ ಕೊಟ್ಟಿದ್ದಾರೆ. ಗಣಿತ ಕಲಿಯಲು ಶಾಲೆಗೆ ಹೇಗೆ ಹೋಗುತ್ತೇವೆ, ಹೇರ್‌ಕಟ್‌ಗಾಗಿ ಸಲೂನ್‌ಗೆ ಹೇಗೆ ಹೋಗುತ್ತೇವೆ, ಮನೆಯ ಕೆಲ ಅಡೆತಡೆಗಳನ್ನು ಸರಿಪಡಿಸಲು ಪ್ಲಂಬರ್‌ಗಳು ಅಥವಾ ಕಾರ್​ಪೇಂಟರ್ಸ್​​ಗಳನ್ನು ಹೇಗೆ ಕರೆಯುತ್ತೇವೆ, ದೈಹಿಕ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ವೈದ್ಯರನ್ನು ಹೇಗೆ ಭೇಟಿ ಮಾಡುತ್ತೇವೆ ಎಂಬುದರ ಕುರಿತು ಮಾತನಾಡಿದರು. ಏಕೆಂದರೆ, ಇದೇ ರೀತಿ ಮಾನಸಿಕ ಆರೋಗ್ಯಕ್ಕಾಗಿ ಮುಜುಗರ ಮಾಡಿಕೊಳ್ಳದೇ ತಜ್ಞರ ಸಹಾಯ ಪಡೆಯೋದು ಕೂಡ ಅತ್ಯಗತ್ಯ ಎಂಬುದನ್ನು ತಂದೆ ಮಗಳು ಒತ್ತಿ ಹೇಳಿದರು.

'ನಮ್ಮ ಜೀವನದಲ್ಲಿ ನಾವೇ ಸ್ವತಃ ಮಾಡಲಾಗದ ಹಲವು ಕಾರ್ಯಗಳಿವೆ. ಅದಕ್ಕಾಗಿ ನಮಗೆ ಇತರರ, ವಿಶೇಷವಾಗಿ ಆ ಕೆಲಸದಲ್ಲಿ ಪರಿಣಿತರಾದವರ ಸಹಾಯ ಬೇಕಾಗುತ್ತದೆ. ಅಷ್ಟೇ ಅಲ್ಲದೇ, ನಾವು ಈ ನಿರ್ಧಾರಗಳನ್ನು (ಸಹಾಯ ತೆಗೆದುಕೊಳ್ಳುವುದರ) ಯಾವುದೇ ಮುಜುಗರ ಪಡೆಯದೇ ಸುಲಭವಾಗಿ ಮಾಡುತ್ತೇವೆ' ಎಂದು ಅಮೀರ್ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: ಎಸ್‌ಎಸ್ ರಾಜಮೌಳಿ ಜನ್ಮದಿನ: ದೂರದೃಷ್ಟಿಯ ನಿರ್ದೇಶಕರಿಂದ ಹೆಣೆಯಲ್ಪಟ್ಟ ಅತ್ಯುತ್ತಮ ಖಳನಾಯಕ ಪಾತ್ರಗಳಿವು!

ತಂದೆಯ ಮಾತನ್ನು ಮುಂದುವರಿಸಿದ ಮಗಳು ಇರಾ ಖಾನ್, 'ಯಾರಾದರೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೆ, ಅವರು ಯಾವುದೇ ಹಿಂಜರಿಕೆಯಿಲ್ಲದೇ ಅನುಭವಿ ತಜ್ಞರನ್ನು ಸಂಪರ್ಕಿಸಿ' ಎಂದು ತಿಳಿಸಿದ್ದಾರೆ. ಮಗಳ ಮಾತಿಗೆ ಸಾಥ್​ ನೀಡಿದ ತಂದೆ, 'ನಾನು ಮತ್ತು ಮಗಳು ಇರಾ ಥೆರಪಿ / ಚಿಕಿತ್ಸೆಯ ಲಾಭ ಮಡೆಯುತ್ತಿದ್ದೇವೆ' ಎಂದು ತಿಳಿಸಿದರು. ಒತ್ತಡ ಅಥವಾ ಯಾವುದೇ ರೀತಿಯ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರೆ ಮುಜುಗರ ಮಾಡದೇ ವೃತ್ತಿಪರರ ಸಹಾಯ ಪಡೆಯಿರಿ, ಆಲ್​ ದಿ ಬೆಸ್ಟ್ ಎಂದು ಹೇಳುವ ಮೂಲಕ ನಟ ಅಮೀರ್​ ಖಾನ್​ ತಮ್ಮ ಮಾತು ಮುಗಿಸಿದರು. ಜನರಿಗೆ ಅಗತ್ಯ ಇರುವ, ಮಹತ್ವದ ವಿಷಯಗಳ ಕುರಿತು ಚರ್ಚೆ ಮಾಡಿದ್ದಕ್ಕಾಗಿ ಅಭಿಮಾನಿಗಳು ತಂದೆ ಮಗಳ ಕುರಿತು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Animal: ರೊಮ್ಯಾಂಟಿಕ್​ ಮೂಡ್​ನಲ್ಲಿ ರಣ್​ಬೀರ್​ - ರಶ್ಮಿಕಾ; 'ಹುವಾ ಮೈನ್' ಹಾಡು ನಾಳೆ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.