ETV Bharat / entertainment

ಹೊಸ ಪ್ರತಿಭೆಗಳ 'ಅಬ್ಬಬ್ಬ' ಸಿನಿಮಾಗೆ ಸಾಥ್‌ ಕೊಟ್ಟ ನಟ ಕಿಚ್ಚ ಸುದೀಪ್​ - Abbabba cinema trailer release

ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿರೋ ಅಬ್ಬಬ್ಬ ಸಿನಿಮಾದ ಟ್ರೇಲರ್ ಅನ್ನು ಕಿಚ್ಚ ಸುದೀಪ್​ ಮೆಚ್ಚಿಕೊಂಡಿದ್ದಾರೆ‌. ಅಷ್ಟೇ ಅಲ್ಲದೇ ಟ್ಟಿಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಸಪೋರ್ಟ್ ಮಾಡಿದ್ದಾರೆ.

ಅಬ್ಬಬ್ಬ ಸಿನಿಮಾ
ಅಬ್ಬಬ್ಬ ಸಿನಿಮಾ
author img

By

Published : Jun 9, 2022, 8:45 PM IST

ಸಿನಿಮಾ ಜೊತೆ ಜೊತೆಗೆ ತನ್ನ ಸ್ನೇಹಿತರು ಹಾಗೂ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡುವ 'ವಿಕ್ರಾಂತ್ ರೋಣ' ಇದೀಗ ಹೊಸ ಪ್ರತಿಭೆಗಳ ಸಿನಿಮಾಗೆ ಕೈ ಜೋಡಿಸಿದ್ದಾರೆ‌. ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿರುವ ಅಬ್ಬಬ್ಬ ಸಿನಿಮಾದ ಟ್ರೇಲರ್ ನೋಡಿ ಕಿಚ್ಚ ಮೆಚ್ಚಿಕೊಂಡಿದ್ದಾರೆ‌. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಮೆಚ್ಚಿಕೊಳ್ಳುವ ಸುದೀಪ್​​ ಈ ಸಿನಿಮಾದ ಟ್ರೈಲರ್​ಗೆ ಫಿದಾ ಆಗಿದ್ದು, ತಮ್ಮ ಟ್ಟಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಒಂದು ಅದ್ಭುತವಾದ ಕಾಮಿಡಿ ಸಿನಿಮಾ. ಇದು ಸಾಮಾನ್ಯವಾಗಿ ಬಂದ ಕಾಮಿಡಿ ಚಿತ್ರ ಅಲ್ಲ. ಯೂತ್ ಫುಲ್ ಕಂಟೆಂಟ್ ಇರುವ ಇತ್ತೀಚಿನ ದಿನಗಳಿಗೆ ಅಪರೂಪದ ಚಿತ್ರ ಎಂದು ಸುದೀಪ್ ಹೇಳಿದ್ದಾರೆ. ಮೀರಾಮಾರ್ ಸಂಸ್ಥೆಯ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿದ್ದು, ಕೆ.ಎಂ.ಚೈತನ್ಯ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ಕೆ.ಆರ್.ಜಿ ಸಂಸ್ಥೆಯ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜುಲೈ 1ರಂದು ಸಿನಿಮಾ ತೆರೆ ಕಾಣಲಿದೆ.

ಹೊಸ ಪ್ರತಿಭೆಗಳಿಗೆ ಕಿಚ್ಚನ ಸಪೋರ್ಟ್​

ಇದನ್ನೂ ಓದಿ: ರಜನಿಕಾಂತ್​ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಶಿವರಾಜ್​ಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.