ETV Bharat / entertainment

72 Hoorain Trailer: ಉಗ್ರವಾದ ಕುರಿತ ಸಿನಿಮಾ ಟ್ರೇಲರ್​ಗೆ ಸಿಗದ ಸಿಬಿಎಫ್​ಸಿ ಸಮ್ಮತಿ! - 72 ಹೂರೆನ್​ ಟ್ರೇಲರ್

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ "72 ಹೂರೆನ್" ಟ್ರೇಲರ್​ಗೆ ಪ್ರಮಾಣೀಕರಣ ನೀಡಲು ಸಿಬಿಎಫ್​​ಸಿ ನಿರಾಕರಿಸಿದ ಬೆನ್ನಲ್ಲೇ, ಚಿತ್ರತಂಡ ಟ್ರೇಲರ್​ ಅನ್ನು ಡಿಜಿಟಲ್ ಮಾಧ್ಯಮದ ಮೂಲಕ ಬಿಡುಗಡೆ ಮಾಡಿದರು.

72 Hoorain Trailer
72 ಹೂರೆನ್​ ಟ್ರೇಲರ್
author img

By

Published : Jun 28, 2023, 3:42 PM IST

ಪವನ್ ಮಲ್ಹೋತ್ರಾ ಮತ್ತು ಅಮೀರ್ ಬಶೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ "72 ಹೂರೆನ್" (72 Hoorain) ಚಿತ್ರದ ನಿರ್ಮಾಪಕರು ಇಂದು ಆನ್​ಲೈನ್​​​ ವೇದಿಕೆಯಲ್ಲಿ ಟ್ರೇಲರ್​​ ಬಿಡುಗಡೆ ಮಾಡಿದ್ದಾರೆ. ಎರಡು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿರುವ ನಿರ್ದೇಶಕ ಸಂಜಯ್ ಪುರಾಣ್ ಸಿಂಗ್ ಚೌಹಾಣ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಗ್ರವಾದದ ಪರಿಣಾಮಗಳ ಮೇಲೆ ಚಿತ್ರಕಥೆಯನ್ನು ಕೇಂದ್ರೀಕರಿಸಿದ್ದಾರೆ.

ಜುಲೈ 7ರಂದು ಬಿಡುಗಡೆ ಕಾಣಲು ಸಜ್ಜಾಗಿರುವ ಟ್ರೇಲರ್‌ಗೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ ಎಂದು ಸಹನಿರ್ಮಾಪಕ ಅಶೋಕ್ ಪಂಡಿತ್ ತಿಳಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತು ಸೆಂಟ್ರಲ್​ ಬೋರ್ಡ್ ಆಫ್​ ಫಿಲ್ಮ್ ಸರ್ಟಿಫಿಕೇಶನ್ (CBFC)ಗೆ ಈ ಬಗ್ಗೆ​ ಮನವಿ ಮಾಡಿಕೊಂಡಿದ್ದಾರೆ. "ನಮ್ಮ ಸೃಜನಶೀಲತೆ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸೆನ್ಸಾರ್ ಸಂಸ್ಥೆಯ ಜನರು ಪ್ರಯತ್ನಿಸುತ್ತಿದ್ದಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಿರ್ಮಾಪಕರು ಶೇರ್​ ಮಾಡಿರುವ 1:30 ನಿಮಿಷದ ವಿಡಿಯೋ ಪ್ರಕಾರ, "72 ಹೂರೆನ್ ಚಿತ್ರದ ಟ್ರೇಲರ್​​ಗೆ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿರುವುದು ನಮಗೆ ಸಾಕಷ್ಟು ಆಘಾತ ತಂದಿದೆ ಮತ್ತು ಆಶ್ಚರ್ಯವಾಗಿದೆ. ಹಾಸ್ಯಾಸ್ಪದ ಮತ್ತು ದುಃಖದ ಸಂಗತಿಯೆಂದರೆ, ರಾಷ್ಟ್ರೀಯ ಪ್ರಶಸ್ತಿ ಪಡೆದ ಚಲನಚಿತ್ರ, ಐಎಫ್‌ಎಫ್‌ಐ (ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ) ನಲ್ಲಿ ಪ್ರಶಸ್ತಿ ಗೆದ್ದಿರುವ ಚಿತ್ರದಲ್ಲಿರುವ ದೃಶ್ಯಗಳೇ ಟ್ರೇಲರ್​ನಲ್ಲಿದೆ. ಒಂದು ಕಡೆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೊಟ್ಟಿದ್ದೀರಿ, ಇನ್ನೊಂದು ಕಡೆ ಚಿತ್ರದ ಟ್ರೇಲರ್‌ಗೆ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದೀರಿ'' ಎಂದು ಟೀಕಿಸಿದ್ದಾರೆ.

ಗೋವಾದಲ್ಲಿ 2019ರ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI)ನಲ್ಲಿ ಭಾರತೀಯ ಪನೋರಮಾ ವಿಭಾಗದ ಅಡಿಯಲ್ಲಿ "72 ಹೂರೆನ್" ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಚಿತ್ರ ICFT-UNESCO GANDHI MEDAL ಗೌರವ ಸ್ವೀಕರಿಸಿತು. 2021ರಲ್ಲಿ, ಚೌಹಾಣ್ ಅವರು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದರು. ಆದ್ರೆ ಈ ತಿಂಗಳ ಆರಂಭದಲ್ಲಿ ಕಾಶ್ಮೀರದ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ಮುಖಂಡರು "72 ಹೂರೆನ್" ನಲ್ಲಿ ಮುಸ್ಲಿಮರ ಕುರಿತಾದ ಚಿತ್ರಣವನ್ನು ಖಂಡಿಸಿದರು. ಅಲ್ಲದೇ ಈ ಚಲನಚಿತ್ರವು ಸಮುದಾಯದ "ಭಾವನೆಗಳನ್ನು ನೋಯಿಸುತ್ತದೆ" ಎಂದು ಸಹ ಹೇಳಿದರು.

ಇದನ್ನೂ ಓದಿ: ಮಾಂಕ್ ದಿ ಯಂಗ್ ಟೀಸರ್​ ಅನಾವರಣ: ಮೂರು ತಿಂಗಳೊಳಗೆ ಸಿನಿಮಾ ತೆರೆಗೆ

"ಸಿಬಿಎಫ್‌ಸಿಯಲ್ಲಿಯೇ ಏನೋ ತಪ್ಪಾಗಿದೆ" ಎಂದು ಆರೋಪಿಸಿರುವ ಅಶೋಕ್ ಪಂಡಿತ್ ಅವರು, ಪ್ರಸೂನ್ ಜೋಶಿ ಮತ್ತು ಅನುರಾಗ್ ಠಾಕೂರ್ ಅವರನ್ನು ಈ ವಿಷಯದ ಕುರಿತು ಗಂಭೀರವಾಗಿ ಪರಿಶೀಲಿಸುವಂತೆ ಒತ್ತಾಯಿಸಿದರು. ನಾವು ಸಿಬಿಎಫ್‌ಸಿ ಅಧ್ಯಕ್ಷರಾದ ಪ್ರಸೂನ್ ಜೋಶಿ ಅವರಿಗೆ ಮನವಿ ಮಾಡುತ್ತೇವೆ, ಈ ನಿರ್ಧಾರವನ್ನು ತೆಗೆದುಕೊಂಡಿರುವ ಸದಸ್ಯರಿಗೆ ಪ್ರಶ್ನಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ಸಚಿವ ಅನುರಾಗ್ ಠಾಕೂರ್ ಅವರಿಗೂ ನಾವು ಈ ಬಗ್ಗೆ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ಈ ಬಗ್ಗೆ ಕ್ರಮ ವಹಿಸಿ. ಈ ಜನರು ಯಾರು, ಸಿಬಿಎಫ್‌ಸಿಯಲ್ಲಿರುವ ಇವರು ನಮ್ಮ ಸೃಜನಶೀಲ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: Julian Sands Death: ಕಣ್ಮರೆಯಾಗಿ ಐದು ತಿಂಗಳ ನಂತರ ಆಸ್ಕರ್ ನಾಮನಿರ್ದೇಶಿತ ಸಿನಿಮಾ ನಟನ ಶವ ಪತ್ತೆ!

ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರದ ಟ್ರೇಲರ್​ಗೆ ಸೆನ್ಸಾರ್ ಪ್ರಮಾಣಪತ್ರವನ್ನು ನಿರಾಕರಿಸಲಾಗುವುದಿಲ್ಲ ಎಂದು ಸಹ ಹೇಳಿದರು. ಸಾರಥಿ ಎಂಟರ್‌ಟೈನ್‌ಮೆಂಟ್ ಮತ್ತು ಏಲಿಯನ್ಸ್ ಪಿಕ್ಚರ್ಸ್ ನಿರ್ಮಿಸಿರುವ "72 ಹೂರೆನ್" ಅನ್ನು ಅನಿಲ್ ಪಾಂಡೆ ಮತ್ತು ಜುನೈದ್ ವಾಸಿ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.