ETV Bharat / entertainment

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ದೆಹಲಿ ತಲುಪಿದ ಅಲ್ಲು ಅರ್ಜುನ್​, ರಾಜಮೌಳಿ, ಕೀರವಾಣಿ

69th National Film Awards: ನಾಳೆ ನಡೆಯಲಿರುವ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಟಾಲಿವುಡ್​ ನಟ ಅಲ್ಲು ಅರ್ಜುನ್, ನಿರ್ದೇಶಕ ಎಸ್.​ಎಸ್.ರಾಜಮೌಳಿ ಮತ್ತು ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ದೆಹಲಿಗೆ ಆಗಮಿಸಿದ್ದಾರೆ.

69th National Film Awards: Pushpa star Allu Arjun headed to Delhi with his wife; SS Rajamouli, MM Keervani reach national capital - watch
69th National Film Awards: ರಾಷ್ಟ್ರ ಪ್ರಶಸ್ತಿಗಾಗಿ ದೆಹಲಿ ತಲುಪಿದ ಅಲ್ಲು ಅರ್ಜುನ್​, ರಾಜಮೌಳಿ, ಕೀರವಾಣಿ
author img

By ETV Bharat Karnataka Team

Published : Oct 16, 2023, 10:53 PM IST

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಟಾಲಿವುಡ್​ ನಟ ಅಲ್ಲು ಅರ್ಜುನ್ ದೆಹಲಿಗೆ ತೆರಳಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ರಾಷ್ಟ್ರಪ್ರಶಸ್ತಿಯಲ್ಲಿ ಅವರು ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದರು. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಲ್ಲು ಅರ್ಜುನ್​ 'ರಾಷ್ಟ್ರ ಪ್ರಶಸ್ತಿ' ಸ್ವೀಕರಿಸುವರು.

ಸೋಮವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಅಲ್ಲು ಅರ್ಜುನ್​ ಅವರು ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಜೊತೆ ಕಾಣಿಸಿಕೊಂಡರು. ಈ ವೇಳೆ ಅಲ್ಲು ಅರ್ಜುನ್​ ಸಂಪೂರ್ಣ ಬ್ಲ್ಯಾಕ್ ದಿರಿಸಿನಲ್ಲಿದ್ದರು. ಸ್ನೇಹಾ ವೈಟ್​ ಶಾರ್ಟ್​ ಡ್ರೆಸ್​ಗೆ ಬ್ಲೂ ಡೆನಿಮ್​​ ಧರಿಸಿದ್ದರು. ಇದಕ್ಕೂ ಮುನ್ನವೇ ಆರ್​ಆರ್​ಆರ್​ ಖ್ಯಾತಿಯ ನಿರ್ದೇಶಕ ಎಸ್​ಎಸ್​ ರಾಜಮೌಳಿ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕೂಡ ಪ್ರಶಸ್ತಿ ಸಮಾರಂಭಕ್ಕಾಗಿ ದೆಹಲಿಗೆ ಆಗಮಿಸಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನು ಆಗಸ್ಟ್​ 24ರಂದು ಕೇಂದ್ರ ಸರ್ಕಾರ ಘೋಷಿಸಿತ್ತು.

ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ: ಅಲ್ಲು ಅರ್ಜುನ್ ಅವರಿಗೆ​​ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿದೆ. ಇವರ ಬ್ಲಾಕ್​​ ಬಸ್ಟರ್ ಸಿನಿಮಾ 'ಪುಷ್ಪ: ದಿ ರೈಸ್​' ನಲ್ಲಿನ ಅಮೋಘ ಅಭಿನಯಕ್ಕೆ ಈ ಗೌರವ ದೊರೆತಿದೆ. ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಸ್ಟೈಲಿಶ್​ ಸ್ಟಾರ್ ಪಾತ್ರರಾಗಿದ್ದಾರೆ. 2021ರ ಡಿಸೆಂಬರ್​​ನಲ್ಲಿ ಪುಷ್ಪ 1 ಚಿತ್ರಮಂದಿರಗಳಲ್ಲಿ ತೆರೆಕಂಡು ಧೂಳೆಬ್ಬಿಸಿತು. ಬಾಕ್ಸ್​ ಆಫೀಸ್​ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿತು. ಪ್ರಸ್ತುತ ಪುಷ್ಪ ಸೀಕ್ವೆಲ್​ ಶೂಟಿಂಗ್​​ನಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ದಿನಚರಿ.. ರಾಷ್ಟ್ರಪ್ರಶಸ್ತಿ ವಿಜೇತ ನಟನ ಮನೆ, ಪುಷ್ಪ ಸೆಟ್​​ ಹೇಗಿದೆ ನೋಡಿ..

ಎಸ್.​ಎಸ್.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರಕ್ಕೆ ಆರು ಪ್ರಶಸ್ತಿಗಳು ಲಭಿಸಿವೆ. ಈ ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪುಷ್ಪ ಚಿತ್ರದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರೊಂದಿಗೆ ಹಂಚಿಕೊಂಡರು. ರಾಜಮೌಳಿ ನಿರ್ದೇಶನದ ಚಲನಚಿತ್ರವು ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ, ಕಾಲಭೈರವ ಅವರಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್‌ಗಳು, ಅತ್ಯುತ್ತಮ ಸಾಹಸ ನಿರ್ದೇಶಕ ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಪ್ರಶಸ್ತಿಗಳು ತಮ್ಮದಾಗಿಸಿಕೊಂಡವು. ನಾಳೆ ಈ 'ರಾಷ್ಟ್ರ ಪ್ರಶಸ್ತಿ'ಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ವಿಜೇತರು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಪುಷ್ಪ 2' ರಿಲೀಸ್​ಗೆ ಮುಹೂರ್ತ ಫಿಕ್ಸ್​; ಚಿತ್ರತಂಡದಿಂದ ಅಧಿಕೃತ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.