ETV Bharat / entertainment

17 ವರ್ಷದ ಸಂಭ್ರಮದಲ್ಲಿ 'ಮೈ ಆಟೋಗ್ರಾಫ್​'​​: ಹರ್ಷ ಹಂಚಿಕೊಂಡ ಅಭಿನಯ ಚಕ್ರವರ್ತಿ

2006ರಲ್ಲಿ ಬಿಡುಗಡೆ ಆದ 'ಮೈ ಆಟೋಗ್ರಾಫ್​'​​ ಸಿನಿಮಾ 17 ವರ್ಷದ ಸಂಭ್ರಮದಲ್ಲಿದೆ.

my autograph movie
ಮೈ ಆಟೋಗ್ರಾಫ್​​​ ಸಿನಿಮಾ ಸಂಭ್ರಮ
author img

By

Published : Feb 18, 2023, 5:30 PM IST

ಹಲವು ಏರಿಳಿತಗಳ ನಡುವೆ ತಮ್ಮ ಅಮೋಘ ಅಭಿನಯದಿಂದ ಸಿನಿಪ್ರಿಯರನ್ನು ರಂಜಿಸಿರುವ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್. ತಮ್ಮ ಅತ್ಯದ್ಭುತ ನಟನೆ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿದ್ದಾರೆ ಅಭಿನಯ ಚಕ್ರವರ್ತಿ. ಸಿನಿ ವೃತ್ತಿಜೀವನದಲ್ಲಿ ಈಗಾಗಲೇ 25 ವರ್ಷಗಳನ್ನು ಪೂರೈಸಿರುವ ಕಿಚ್ಚ ಸುದೀಪ್ ಏಳು ಬೀಳುಗಳನ್ನು ಮೆಟ್ಟಿ ನಿಂತಿರುವ ಶ್ರೇಷ್ಠ ನಟ. ಸ್ಟಾರ್ ನಟರ ಸಿನಿ ಜೀವನದಲ್ಲಿ ಒಂದೊಂದು ಸಿನಿಮಾಗಳು ಕೂಡ ಅದರದ್ದೇ ಆದ ಮಹತ್ವ ಹೊಂದಿರುತ್ತದೆ. ಸುದೀಪ್ ಸಿನಿ ಕೆರಿಯರ್​​ನಲ್ಲೂ ಹಲವು ಸಿನಿಮಾಗಳು ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ.

17 ವರ್ಷ ಪೂರೈಸಿದ 'ಮೈ ಆಟೋಗ್ರಾಫ್​'​​: ಸುದೀಪ್​​​​ ಸಿನಿ ಜರ್ನಿಯಲ್ಲಿ ಅಚ್ಚಳಿಯದಂತಹ ಸಿನಿಮಾಗಳ ಪೈಕಿ 'ಮೈ ಆಟೋಗ್ರಾಫ್​'​​ ಕೂಡ ಒಂದು. ಈ ಚಿತ್ರವನ್ನು ಸುದೀಪ್​ ಅವರೇ ನಿರ್ದೇಶಿಸಿ ನಟನೆ ಕೂಡ ಮಾಡಿದ್ದರು. 2006ರಲ್ಲಿ ತೆರೆ ಕಂಡ ಈ ಸಿನಿಮಾ ಇಂದಿಗೆ ನಿನ್ನೆಗೆ 17 ವರ್ಷ ಪೂರೈಸಿದೆ.

  • 17 years of me trying out my hands as a director.
    It's always been a great feeling to be on a maker's chair.
    I thank every actor,technician,production team,support staff, and everyone on set who stood by me.
    ❤️❤️🙏🏼🙏🏼🙏🏼 pic.twitter.com/zJUH1nVYzj

    — Kichcha Sudeepa (@KicchaSudeep) February 17, 2023 " class="align-text-top noRightClick twitterSection" data=" ">

ನಟ ಸುದೀಪ್ ಟ್ವೀಟ್​: ನಿರ್ದೇಶಕನಾಗಿ 17 ವರ್ಷಗಳು, ಚಿತ್ರ ತಯಾರಕರ ಕುರ್ಚಿಯಲ್ಲಿರುವುದು ಎಂದಿಗೂ ಅದ್ಭುತ ಭಾವನೆ. ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬ ನಟ, ತಂತ್ರಜ್ಞ, ನಿರ್ಮಾಣ ತಂಡ, ಸಿಬ್ಬಂದಿ ಮತ್ತು ಸೆಟ್‌ನಲ್ಲಿದ್ದ ಎಲ್ಲರಿಗೂ ನನ್ನ ಧನ್ಯವಾದ ಎಂದು ಸೋಶಿಯಲ್​ ಮೀಡಿಯಾದಲ್ಲಿ ನಟ ಸುದೀಪ್​​ ಬರೆದುಕೊಂಡಿದ್ದಾರೆ.

ನಿರ್ದೇಶಕನಾಗಿ ನಟ ಸುದೀಪ್​: ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ ಸುದೀಪ್ ನಟ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಗುರುತಿಸಿಕೊಂಡರು. 2006ರಲ್ಲಿ 'ಮೈ ಆಟೋಗ್ರಾಫ್' ಸಿನಿಮಾ ಮೂಲಕ ನಿರ್ದೇಶಕನಾಗಿ ಹೊರಹೊಮ್ಮಿದರು. 'ಮೈ ಆಟೋಗ್ರಾಫ್ ಚಿತ್ರದ ಮೂಲಕ ನಟ, ನಿರ್ದೇಶಕ ಹಾಗೂ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದರು. 2006ರಲ್ಲಿಯೇ ಸುಮಾರು 2 ಕೋಟಿ ರೂಪಾಯಿ ಬಜೆಟ್​​​ನಲ್ಲಿ ತಯಾರಾದ 'ಮೈ ಆಟೋಗ್ರಾಫ್' 6 ಕೋಟಿ ರೂಪಾಯಿ ಲಾಭ ಮಾಡಿತು.

ಸುದೀಪ್ ಸಿನಿ ಪಯಣ: ನಟ ಸುದೀಪ್​ ಅವರು 'ಬ್ರಹ್ಮ' ಚಿತ್ರದ ಮೂಲಕ ತಮ್ಮ ಸಿನಿ ವೃತ್ತಿಜೀವನ ಆರಂಭಿಸಬೇಕೆಂದುಕೊಂಡರು. ಆದ್ರೆ ಈ ಸಿನಿಮಾ ಕೆಲಸ ಪೂರ್ಣಗೊಳ್ಳದೇ ನಿಂತುಹೋಯಿತು. 1997ರಲ್ಲಿ 'ತಾಯವ್ವ' ಚಿತ್ರದಲ್ಲಿ ಅಭಿನಯಿಸಿದ್ದರೂ ಇದು ಸುದೀಪ್ ಅವರಿ​​​​ಗೆ ಹೇಳಿಕೊಳ್ಳುವಷ್ಟು ಹೆಸರು ತಂದುಕೊಡಲಿಲ್ಲ. ನಂತರ 'ಪ್ರತ್ಯರ್ಥ' ಚಿತ್ರ ಕೂಡಾ ಬ್ರೇಕ್ ನೀಡದಿದ್ದಾಗ ಸುದೀಪ್ ಈ ಚಿತ್ರರಂಗದಿಂದ ದೂರ ಸರಿಯಬೇಕೆಂದು ನಿರ್ಧರಿಸುತ್ತಾರೆ. ಆ ಸಮಯದಲ್ಲಿ 'ಸ್ಪರ್ಶ' ಚಿತ್ರ ಸುದೀಪ್​ ಕೈ ಹಿಡಿಯುತ್ತದೆ.

ಸುನಿಲ್ ಕುಮಾರ್ ದೇಸಾಯಿ ಅವರ 'ಸ್ಪರ್ಶ' ಚಿತ್ರವನ್ನು ಸುದೀಪ್ ತಂದೆ ಸಂಜೀವ್​​ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್​​​ನಲ್ಲಿ ನಿರ್ಮಿಸಿದ್ದರು. ಚಿತ್ರ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅಲ್ಲಿಂದ ಒಂದೊಂದೆ ಮೆಟ್ಟಿಲುಗಳನ್ನು ಹತ್ತಿಕೊಂಡು ಬಂದ ನಟ ಸುದೀಪ್​ ಸದ್ಯ ಭಾರತದ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಫಿಟ್ನೆಸ್​​ ಸೀಕ್ರೆಟ್​​: ಅವರೇ ಹೇಳಿದ್ದು ಹೀಗೆ..!

ಸುದೀಪ್​ ಸಿನಿಮಾಗಳು: ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾದ ವಿಕ್ರಾಂತ್​ ರೋಣ, ಈಗ, ಪೈಲ್ವಾನ್​, ಕಿಚ್ಚ, ಕೋಟಿಗೊಬ್ಬ 3, ಹೆಬ್ಬುಲಿ, ಕೋಟಿಗೊಬ್ಬ 2, ದಿ ವಿಲನ್​, ಹುಚ್ಚ, ಮಾಣಿಕ್ಯ, ರನ್ನ, ಕೆಂಪೇಗೌಡ, ವಿಷ್ಣುವರ್ಧನ, ಬಚ್ಚನ್​, ಮುಸ್ಸಂಜೆ ಮಾತು, ಜಸ್ಟ್ ಮಾತ್​ ಮಾತಲ್ಲಿ, ಸ್ವಾತಿ ಮುತ್ತು ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂದಿನ ಬಹು ನಿರೀಕ್ಷಿತ ಕಬ್ಜ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.