'ಕಾಂತಾರ' ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ. ಕನ್ನಡದಲ್ಲಿ ಬಿಡುಗಡೆ ಆಗಿ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ ಆಗಿ ದೇಶ ವಿದೇಶಗಳ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಚಿತ್ರ. ನಟ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ಇಡೀ ವಿಶ್ವವೇ, ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಮಾಸ್ಟರ್ ಪೀಸ್ ಚಿತ್ರ. ಕಳೆದ ವರ್ಷ ಸೆಪ್ಟೆಂಬರ್ 30ರಂದು ಬಿಡುಗಡೆ ಆದ ಕಾಂತಾರ ಸಿನಿಮಾ ಇಂದಿಗೆ 100 ದಿನವನ್ನು ಪೂರೈಸಿದೆ. ಈ ಮೂಲಕ 2022ನೇ ವರ್ಷದಲ್ಲಿ ಶತದಿನ ಪೂರೈಸಿದ ಏಕೈಕ ಚಿತ್ರ 'ಕಾಂತಾರ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
-
ಬೆಳಕು..!! ಆದರೆ ಇದು ಬೆಳಕಲ್ಲ ೧೦೦ ದಿನದ ದರ್ಶನ🔥
— Rishab Shetty (@shetty_rishab) January 7, 2023 " class="align-text-top noRightClick twitterSection" data="
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/uog4lsf6G6
">ಬೆಳಕು..!! ಆದರೆ ಇದು ಬೆಳಕಲ್ಲ ೧೦೦ ದಿನದ ದರ್ಶನ🔥
— Rishab Shetty (@shetty_rishab) January 7, 2023
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/uog4lsf6G6ಬೆಳಕು..!! ಆದರೆ ಇದು ಬೆಳಕಲ್ಲ ೧೦೦ ದಿನದ ದರ್ಶನ🔥
— Rishab Shetty (@shetty_rishab) January 7, 2023
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/uog4lsf6G6
ಹಲವು ದಾಖಲೆಗಳನ್ನು ನಿರ್ಮಿಸಿದ ಕಾಂತಾರ: 2022ನೇ ವರ್ಷದಲ್ಲಿ ಬಹುದೊಡ್ಡ ಸಕ್ಸಸ್ ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್ಗಳಿಂದು ಹಿಡಿದು ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗದ ನಟ ನಟಿಯರು ಹಾಗೂ ನಿರ್ದೇಶಕರು ಮಾತನಾಡುವಂತೆ ಮಾಡಿದ ಕಾಂತಾರ ಸಿನಿಮಾ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ರೆಕಾರ್ಡ್ಗಳನ್ನು ಮಾಡಿದೆ. ಆ ದಾಖಲೆಗಳ ಕೊಂಚ ಮಾಹಿತಿ ಈ ಕೆಳಗಿನಂತಿದೆ.
ಪ್ಯಾನ್ ಇಂಡಿಯಾ ಸಿನಿಮಾ: 16 ಕೋಟಿ ಬಜೆಟ್ನಲ್ಲಿ ನಿರ್ಮಾಣ ಆದ ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಸೂಪರ್ ಹಿಟ್ ಆಗಿ ನಂತರ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಯಿತು. ಬೆಂಗಳೂರಿನಲ್ಲಿಯೇ 50 ಸಾವಿರಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡ ಚಿತ್ರವಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ ಯಾವ ಸಿನಿಮಾ ಕೂಡಾ ಮಾಡಿರದ ದಾಖಲೆ ಕಾಂತಾರ ಸಿನಿಮಾ ಮಾಡಿದೆ ಅನ್ನೋದು ವಿಶೇಷ.
-
ಬೆಳಕು..!! ಆದರೆ ಇದು ಬೆಳಕಲ್ಲ ೧00 ದಿನದ ದರ್ಶನ🔥
— Vijay Kiragandur (@VKiragandur) January 7, 2023 " class="align-text-top noRightClick twitterSection" data="
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/XZkWftN1cJ
">ಬೆಳಕು..!! ಆದರೆ ಇದು ಬೆಳಕಲ್ಲ ೧00 ದಿನದ ದರ್ಶನ🔥
— Vijay Kiragandur (@VKiragandur) January 7, 2023
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/XZkWftN1cJಬೆಳಕು..!! ಆದರೆ ಇದು ಬೆಳಕಲ್ಲ ೧00 ದಿನದ ದರ್ಶನ🔥
— Vijay Kiragandur (@VKiragandur) January 7, 2023
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/XZkWftN1cJ
1 ಕೋಟಿ ಟಿಕೆಟ್ ಸೇಲ್: ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಿಸಿದ್ದ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ರಾಜಕುಮಾರ ಸಿನಿಮಾ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ಕನ್ನಡಿಗರ ಮನಸೂರೆಗೊಂಡಿದ್ದ ಈ ಸಿನಿಮಾದ 65 ಲಕ್ಷ ಟಿಕೆಟ್ಗಳು ಸೇಲ್ ಆಗಿದ್ದವು. 2018ರಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಮತ್ತೊಂದು ಸೂಪರ್ ಹಿಟ್ ಚಿತ್ರ ಕೆಜಿಎಫ್ 1 ಬಿಡುಗಡೆ ಹಲವು ದಾಖಲೆಗಳನ್ನು ಬರೆಯಿತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ದೇಶದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಕರ್ನಾಟಕದಲ್ಲಿ ಈ ಚಿತ್ರದ 75 ಲಕ್ಷ ಟಿಕೆಟ್ ಸೇಲ್ ಆಗಿದ್ದವು. ಹೊಂಬಾಳೆ ಸಂಸ್ಥೆಯೇ ನಿರ್ಮಿಸಿರುವ ಕಾಂತಾರ ಚಿತ್ರದ 1 ಕೋಟಿ ಟಿಕೆಟ್ ಸೇಲ್ ಆಗುವ ಮೂಲಕ ರಾಜಕುಮಾರ ಹಾಗು ಕೆಜಿಎಫ್ ಸಿನಿಮಾದ ದಾಖಲೆಯನ್ನು ಮುರಿದಿದೆ.
ಕಾಂತಾರ ಕಲೆಕ್ಷನ್: 16 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಾಜ್ಯದಲ್ಲಿ ಬಿಡುಗಡೆ ಆದ ಬಹುತೇಕ ಎಲ್ಲ ಥಿಯೇಟರ್ನಲ್ಲಿಯೂ ಕಾಂತಾರ ಚಿತ್ರ 50 ದಿನಗಳ ಕಾಲ ಸಕ್ಸಸ್ಫುಲ್ ಪ್ರದರ್ಶನಗೊಂಡಿತ್ತು. ಕರ್ನಾಟಕದಲ್ಲಿಯೇ ಬರೋಬ್ಬರಿ 168 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಿಂದಿ ಭಾಷೆಗೆ ಕಾಂತಾರ ಸಿನಿಮಾ ಡಬ್ಬಿಂಗ್ ಆಗಿ ಬರೋಬ್ಬರಿ 2,500ಕ್ಕೂ ಅಧಿಕ ಪರದೆಗಳಲ್ಲಿ ಪ್ರದರ್ಶನ ಕಂಡಿತ್ತು. ಬಾಲಿವುಡ್ನಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ತೆಲುಗು ವರ್ಷನ್‌ನಲ್ಲಿ ಬಿಡುಗಡೆ ಆದ ಕಾಂತಾರ ಸಿನಿಮಾ ಮೊದಲ ದಿನವೇ 5 ಕೋಟಿ ರೂಪಾಯಿ ಗಳಿಸಿತ್ತು. ತಿಂಗಳುಗಟ್ಟಲೇ ತೆಲುಗು ಭಾಷೆಯಲ್ಲಿ ಪ್ರದರ್ಶನಗೊಂಡ ಕಾಂತಾರ ಚಿತ್ರ 45 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಸೂಪರ್ ಸ್ಟಾರ್ಗಳಿಂದ ಮೆಚ್ಚುಗೆಯ ಮಹಾಪೂರ: ಶಿವ ರಾಜ್‌ಕುಮಾರ್, ಸುದೀಪ್, ರಮ್ಯಾ, ಯಶ್ ಸೇರಿದಂತೆ ಸಾಕಷ್ಟು ಕನ್ನಡ ತಾರೆಯರು ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡರು. ಈ ಚಿತ್ರವನ್ನು ನಮ್ಮ ತಾರೆಯರು ಅಲ್ಲದೇ ತೆಲುಗು ನಟ ಪ್ರಭಾಸ್, ನಾಣಿ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ಇನ್ನು ಬಾಲಿವುಡ್ನಲ್ಲಿ ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಹೃತಿಕ್ ರೋಷನ್, ಅನುಪಮ್ ಖೇರ್ ಸೇರಿದಂತೆ ಭಾರತೀಯ ಚಿತ್ರರಂಗದ ಸ್ಟಾರ್ಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ: ಭಾರತದ ಟಾಪ್ 10 ಸಿನಿಮಾಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿತ್ತು. ಇದೀಗ ಸಿನಿಮಾ ಒಟಿಟಿಯಲ್ಲಿ ಕೂಡಾ ರಿಲೀಸ್ ಆಗಿದ್ದು, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾಗಿದೆ. ಆದರೂ ಸಿನಿಮಾ ಥಿಯೇಟರ್ನಲ್ಲಿ ಓಡುತ್ತಿದೆ. ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದು, ಈ ಮೂಲಕ ಚಿತ್ರ ಯಶಸ್ವಿ ನೂರು ದಿನ ಪೂರೈಸಿದೆ.
ಇದನ್ನೂ ಓದಿ: 5 ವರ್ಷ, 3 ಸಾವಿರ ಕೋಟಿ ರೂ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ನಿಂದ ಮತ್ತಷ್ಟು ಬಹುಭಾಷಾ ಸಿನಿಮಾ
'ಕಾಂತಾರ' ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದರು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಇದ್ದು ನೋಡುಗರನ್ನು ಆಕರ್ಷಿಸಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ ಸಿನಿಮಾವವನ್ನು ನಿರ್ಮಾಣ ಮಾಡುವ ಮೂಲಕ ವಿಶ್ವದಾದ್ಯಂತ ಗಮನ ಸೆಳೆದರು. ಇನ್ನೂ ಬೆಳಕು..!! ಆದರೆ ಇದು ಬೆಳಕಲ್ಲ ೧೦೦ ದಿನದ ದರ್ಶನ ಎಂದು ಕಾಂತಾರ ಚಿತ್ರತಂಡ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.