‘ವಿರಾಟಪರ್ವಂ’ ಚಿತ್ರದ ಪ್ರಚಾರದ ಅಂಗವಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಯಿ ಪಲ್ಲವಿ, ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ತೋರಿಸಿರುವ ಘಟನೆಗಳನ್ನು ಮತ್ತು ಹಸುಗಳನ್ನು ಸಾಗಿಸುವಾಗ ಮುಸ್ಲಿಂ ಚಾಲಕನ ಮೇಲೆ ನಡೆದ ಹಲ್ಲೆಗೆ ಹೋಲಿಸುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು.
ಜೂನ್ 21ರಂದು ಪೊಲೀಸರು ನೀಡಿದ ನೋಟಿಸ್‌ಗಳನ್ನು ಪ್ರಶ್ನಿಸಿ ಸಾಯಿ ಪಲ್ಲವಿ ಅರ್ಜಿ ಸಲ್ಲಿಸಿದ್ದು, ಗುರುವಾರ ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ ಅವರು ಅರ್ಜಿ ವಿಚಾರಣೆ ನಡೆಸಿದರು. ಗೋ ರಕ್ಷಕರನ್ನು ಕಾಶ್ಮೀರಿ ಭಯೋತ್ಪಾದಕರಿಗೆ ಹೋಲಿಸಿ ದೂರು ದಾಖಲಿಸಿರುವುದು ತಪ್ಪು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದು, ಸಾಯಿ ಪಲ್ಲವಿ ಅವರು ಕೇವಲ ಮಾನವೀಯತೆ ಮೆರೆದಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದರು. ಸರ್ಕಾರಿ ವಕೀಲ ಟಿ.ಶ್ರೀಕಾಂತ್ ರೆಡ್ಡಿ ಪ್ರತಿಕ್ರಿಯಿಸಿ, ಎಫ್‌ಐಆರ್ ದಾಖಲಾಗಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲು ಮಾತ್ರ ನೋಟಿಸ್ ನೀಡಲಾಗಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದರು ಎಂದರು.
ಇದನ್ನೂ ಓದಿ: 'ಧರ್ಮಕ್ಕಿಂತಲೂ ಮನುಷ್ಯತ್ವ ದೊಡ್ಡದು' ಎಂದಿದ್ದ ನಟಿ ಸಾಯಿ ಪಲ್ಲವಿ ವಿರುದ್ಧ ಎಫ್‌ಐಆರ್