ETV Bharat / entertainment

ದಲ್ಬೀರ್ ಕೌರ್ ಅಂತಿಮ ವಿಧಿವಿಧಾನ ಪೂರೈಸಿದ ರಣದೀಪ್​.. ಸರಬ್ಜಿತ್ ಚಿತ್ರದ ವೇಳೆ ಕೊಟ್ಟಿದ್ದ ಮಾತು ಉಳಿಸಿಕೊಂಡ ಹೂಡಾ!

author img

By

Published : Jun 28, 2022, 2:31 PM IST

ನಾನು ಸಾವನ್ನಪ್ಪಿದ್ದಾಗ ನನಗೆ ಹೆಗಲು ನೀಡುವಂತೆ ಕೌರ್​ ವಿನಂತಿಸಿದ್ದರು. ದಲ್ಬೀರ್ ಕೌರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ರಣದೀಪ್ ಅವರ ಕೊನೆಯ ಆಸೆಯನ್ನು ಈಡೇರಿಸಿದರು.

randeep hooda at dalbir kaur funeral  randeep hooda performs last rites of dalbir kaur  randeep hooda dalbir kaur bond  randeep hood at sarbjit sister funeral  ಪಂಜಾಬ್​ನಲ್ಲಿ ದಲ್ಬೀರ್ ಕೌರ್ ಅಂತಿಮ ವಿಧಿವಿಧಾನ ಪೂರೈಸಿದ ರಣದೀಪ್  ಸರಬ್ಜಿತ್ ಚಿತ್ರದ ವೇಳೆ ಕೊಟ್ಟಿದ್ದ ಮಾತು ನಿಭಾಯಿಸಿದ ರಣದೀಪ್​ ಹೂಡಾ  ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ನಿಧನ  ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ನಿಧನ ಸುದ್ದಿ
ದಲ್ಬೀರ್ ಕೌರ್ ಅಂತಿಮ ವಿಧಿವಿಧಾನ ಪೂರೈಸಿದ ರಣದೀಪ್

ಚಂಡೀಗಢ (ಪಂಜಾಬ್): ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಅವರ ನಿಧನದ ಸುದ್ದಿ ತಿಳಿದ ನಟ ರಣದೀಪ್ ಹೂಡಾ ತಕ್ಷಣ ಮುಂಬೈನಿಂದ ಪಂಜಾಬ್‌ಗೆ ಧಾವಿಸಿ ಅವರ ಅಂತಿಮ ವಿಧಿಗಳಲ್ಲಿ ಖುದ್ದಾಗಿ ನಿಭಾಯಿಸಿದರು. ಸರಬ್ಜಿತ್ ಚಿತ್ರೀಕರಣದ ಸಮಯದಲ್ಲಿ ರಣದೀಪ್ ಮತ್ತು ದಲ್ಬೀರ್ ಕೌರ್ ಮಧ್ಯೆ ಉತ್ತಮ ಬಾಂದವ್ಯ ನಿರ್ಮಾಣವಾಗಿತ್ತು.

ಚಿತ್ರದಲ್ಲಿ ರಣದೀಪ್ ದಲ್ಬೀರ್ ಕೌರ್ ಅವರ ಸಹೋದರ ಸರಬ್ಜಿತ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾಕ್​ ಮತ್ತು ಭಾರತ ಗಡಿ ಪ್ರದೇಶದಲ್ಲಿ ಸರಬ್ಜಿತ್​ ಸಿಂಗ್​ ಕುಟುಂಬ ವಾಸವಾಗಿತ್ತು. 1990 ರಲ್ಲಿ ಆಕಸ್ಮಿಕವಾಗಿ ಪಾಕ್​ ಗಡಿ ದಾಟಿದ್ದರು. ಅವರ ವಿರುದ್ಧ ಅನೇಕ ಗಂಭೀರ ಆರೋಪಗಳೊಂದಿಗೆ 23 ವರ್ಷಗಳ ಕಾಲ ಕಂಬಿಗಳ ಹಿಂದೆ ಚಿತ್ರಹಿಂಸೆ ಅನುಭವಿಸಿದ್ದರು. ಅವರು ಮೇ 2, 2013 ರಂದು ಪಾಕಿಸ್ತಾನದ ಜೈಲಿನಲ್ಲಿ ನಿಧನರಾದರು.

ಚಿತ್ರದ ಚಿತ್ರೀಕರಣದ ಸಮಯದಲ್ಲಿ ದಲ್ಬೀರ್ ಕೌರ್ ಅವರು ರಣದೀಪ್ ಸಿಂಗ್​ನಲ್ಲಿ ಸರಬ್ಜಿತ್ ಸಿಂಗ್ ಅವರನ್ನು ನೋಡುತ್ತಾರೆ ಎಂದು ಹೇಳಿದ್ದರು. ಈ ವೇಳೆ, ನಾನು ಸಾವನ್ನಪ್ಪಿದ್ದಾಗ ನನಗೆ ಹೆಗಲು ನೀಡುವಂತೆ ಕೌರ್​ ವಿನಂತಿಸಿದ್ದರು. ದಲ್ಬೀರ್ ಕೌರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ರಣದೀಪ್ ಅವರ ಕೊನೆಯ ಆಸೆಯನ್ನು ಈಡೇರಿಸಿದರು. ದಲ್ಬೀರ್ ಕೌರ್ ಭಾನುವಾರ ಪಂಜಾಬ್‌ನ ಅಮೃತಸರ ಬಳಿಯ ಭಿಖಿವಿಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.

ಓದಿ: ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ನಿಧನ

ರಣದೀಪ್ ಅವರು ದಲ್ಬೀರ್ ಕೌರ್ ಅವರ ನೆನಪಿಗಾಗಿ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಲೇಖನಿಯೊಂದು ಬರೆದುಕೊಂಡಿದ್ದಾರೆ. ಖಂಡಿತವಾಗಿ ನೀನು ಮನೆಗೆ ಬರಬೇಕು ಎಂದು ಅವಳು ಹೇಳಿದ್ದು ಕೊನೆಯ ಮಾತು. ನಾನು ಹೋಗಿದ್ದೆ, ಆದರೆ ಅವರು ಮಾತ್ರ ಹೊರಟು ಹೋಗಿದ್ದರು. ದಲ್ಬೀರ್ ಕೌರ್ ಜೀ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಕನಸಲ್ಲಿಯೂ ಸಹ ಊಹೆ ಮಾಡಿರಲಿಲ್ಲ. ಹೋರಾಟಗಾರ, ಮಗು, ತೀಕ್ಷ್ಣವಾದ ಮತ್ತು ಅವರು ಎಲ್ಲದಕ್ಕೂ ಶ್ರದ್ಧೆಯುಳ್ಳವರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಅವರ ಪ್ರೀತಿ ಮತ್ತು ಆಶೀರ್ವಾದವನ್ನು ಪಡೆದ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಈ ಜೀವನದಲ್ಲಿ ಎಂದಿಗೂ ರಾಖಿ ಕಟ್ಟಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಾರದು. ವಿಪರ್ಯಾಸವೆಂದರೆ ನಾವು ಕೊನೆಯ ಬಾರಿಗೆ ಭೇಟಿಯಾದದ್ದು ಭಾರತ-ಪಾಕ್ ಗಡಿಯನ್ನು ರಚಿಸಿದ್ದ ಪಂಜಾಬ್‌ನ ಕ್ಷೇತ್ರಗಳಲ್ಲಿ. ಅದು ನವೆಂಬರ್ ತಡರಾತ್ರಿ ಚಳಿ ಮತ್ತು ಮಂಜು ಕವಿದಿತ್ತು ಆದರೆ, ಅವರು ಅದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ನಾನು ಯಾವಾಗಲೂ ಪಾಲಿಸುತ್ತೇನೆ ಎಂದು ರಣದೀಪ್ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.