ETV Bharat / entertainment

ಕಾಫಿ ವಿತ್​ ಕರಣ್​ 7: ಅರ್ಜುನ್, ಮಲೈಕಾ ಮದುವೆಯಾಗ್ತಾರಾ.. ಮದುವೆಯ ಯೋಜನೆ ಬಗ್ಗೆ ಕಪೂರ್​ ಹೇಳಿದ್ದೇನು? - ಕಾಫಿ ಹ್ಯಾಂಪರ್

ಕರಣ್ ಜೋಹರ್ ಅವರ ಕಾಫಿ ವಿತ್​ ಕರಣ್​ ಶೋ ಸದಾ ಸುದ್ದಿಯಲ್ಲೇ ಇರುತ್ತದೆ. ಕಾರ್ಯಕ್ರಮದ ಹೊಸ ಸಂಚಿಕೆ ಗುರುವಾರ ರಾತ್ರಿ 12 ಗಂಟೆಗೆ ಪ್ರಸಾರವಾಗಿದೆ. ರಕ್ಷಾಬಂಧನ ವಿಶೇಷ ಸಂಚಿಕೆಯಲ್ಲಿ ಸೋನಂ ಕಪೂರ್ ತನ್ನ ಸಹೋದರ ಅರ್ಜುನ್ ಕಪೂರ್ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರಿಬ್ಬರ ಅದ್ಭುತ ಬಾಂಧವ್ಯ ಕಾರ್ಯಕ್ರಮದಲ್ಲಿ ಕಂಡು ಬಂದಿತು.

Koffee with Karan 7  Arjun Kapoor explains  Malaika Arora  ಕಾಫಿ ವಿತ್​ ಕರಣ್​ ಮದುವೆಯ ಯೋಜನೆ ಬಗ್ಗೆ ಕಪೂರ್​ ಹೇಳಿದ್ದೇನು  ಕಾಫಿ ಹ್ಯಾಂಪರ್  ಏಕ್ ವಿಲನ್ ರಿಟರ್ನ್ಸ್
ಅರ್ಜುನ್, ಮಲೈಕಾ ಮದುವೆಯಾಗ್ತಾರಾ
author img

By

Published : Aug 11, 2022, 12:44 PM IST

ಮುಂಬೈ, ಮಹಾರಾಷ್ಟ್ರ: ಕಾಫಿ ವಿತ್ ಕರಣ್ 7ನ ಆರನೇ ಸಂಚಿಕೆ ಅಂತಿಮವಾಗಿ ಹೊರ ಬಂದಿದೆ. ಈ ವಿಶೇಷ ಸಂಚಿಕೆಯಲ್ಲಿ ಸಹೋದರ ಅರ್ಜುನ್ ಕಪೂರ್ ಮತ್ತು ಸಹೋದರಿ ಸೋನಮ್ ಕಪೂರ್ ಜೋಡಿ ಕಾಣಿಸಿಕೊಂಡರು. ಈ ವೇಳೆ ತಮ್ಮ ಸಂಬಂಧಗಳು ಮತ್ತು ವೃತ್ತಿಜೀವನದ ಬಗ್ಗೆ ಬಹಿರಂಗವಾಗಿ ಚರ್ಚಿಸಿದರು. ಈ ವೇಳೆ ಕರಣ್ ಜೋಹರ್ ಅರ್ಜುನ್ ಮತ್ತು ಮಲೈಕಾ ಅರೋರಾ ಸಂಬಂಧದ ಬಗ್ಗೆ ಮಾತನಾಡಿ ಪ್ರಣಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

1. ಅವರಿಬ್ಬರ ಪ್ರೀತಿಯ ವಿಷಯದಲ್ಲಿ ನಿಮ್ಮ ಸಹೋದರನನ್ನು ಹೇಗೆ ಬೆಂಬಲಿಸಿದ್ರಿ.. ಎಂದು ಸೋನಮ್​ ಕಪೂರ್​ಗೆ ಕರಣ್ ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರಿಸಿದ ನಟಿ ಸೋನಮ್​, ‘ಅರ್ಜುನ್ ಮತ್ತು ನನಗೂ ಹದಿನೈದು ದಿನಗಳ ಅಂತರವಿದೆ. ಶಾಲೆಯಿಂದ ನಾವು ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು. ನಮ್ಮ ಸಹೋದರ - ಸಹೋದರಿ ಪ್ರೀತಿಗೆ ಷರತ್ತುಗಳಿಲ್ಲ. ಇತ್ತೀಚೆಗೆ ಅವರ ಜೀವನದಲ್ಲಿ ಸ್ಥಿರತೆ ಮತ್ತು ಸಂತೋಷ ಬಂದಿದೆ. ಅವರು ಸ್ವಲ್ಪಮಟ್ಟಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವನ ಸಂತೋಷವೇ ನನಗೆ ಮುಖ್ಯ. ಹೀಗಾಗಿ ನಾನು ಅವನಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದರು.

2. ಮಲೈಕಾ ಅವರೊಂದಿಗಿನ ಸಂಬಂಧವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಏಕೆ ಇಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಅರ್ಜುನ್​ಗೆ ಕರಣ್ ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರಿಸಿದ ನಟ, ನಾನು ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದೇನೆ. ಇದರ ಪರಿಣಾಮ ಏನಾಗುತ್ತಿದೆ ಎಂಬುದನ್ನು ನೋಡುವುದು ಅಷ್ಟು ಸುಲಭವಲ್ಲದ ಮಾತು. ಎಲ್ಲವೂ ನಾನು ಮಲೈಕಾ ಮೇಲೆ ಹೊಣೆ ಹೊರಿಸಲು ಸಾಧ್ಯವಿಲ್ಲ. ನಿಮ್ಮ ಮಾತಿನ ಅರ್ಥವೇನು.. ಜನರು ಇದನ್ನೆಲ್ಲ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರಾ ಎಂದು ಹೇಳಿದರು.

ನಾನು ಯಾವಾಗಲೂ ಎಲ್ಲರ ಬಗ್ಗೆ ಮೊದಲು ಯೋಚಿಸುತ್ತೇನೆ. ಅವರೊಂದಿಗೆ ಇರುವುದು ನನ್ನ ಆಯ್ಕೆ. ಆದರೆ, ಇದು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಎಲ್ಲರೂ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಅವಳಿಗೂ ಒಂದು ಸ್ಥಾನ ಕೊಡಬೇಕಾಗುತ್ತದೆ. ನಾವು ಮದುವೆ ಬಗ್ಗೆ ಮಾತನಾಡಿಲ್ಲ, ಆದರೆ ಮಗುವಿನ ಬಗ್ಗೆ ಹೆಜ್ಜೆಗಳಿವೆ. ಅವಳಿಗೆ ಒಂದು ಜೀವನವಿದೆ.ಅವಳಿಗೆ ಒಬ್ಬ ಮಗನಿದ್ದಾ. ನಾನು ಎಂಬ ಮೂಲಭೂತ ತಿಳುವಳಿಕೆ ಇದೆ. ದೇಶದ ನೈತಿಕ ದಿಕ್ಸೂಚಿಯನ್ನು ನೀವು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅರ್ಜುನ್ ವಿವರಿಸಿದರು.

3. ಭವಿಷ್ಯದ ವಿವಾಹದ ಬಗ್ಗೆ ನಿಮ್ಮ ಆಲೋಚನೆಗಳೇನು ಎಂದು ಅರ್ಜುನ್​ ಕಪೂರ್​​ಗೆ ಕರಣ್​ ಪ್ರಶ್ನಿಸಿದರು.

ಇದಕ್ಕೆ ಅರ್ಜುನ್ ಕಪೂರ್ ಪ್ರತಿಕ್ರಿಯಿಸಿ, ಇದರ ಬಗ್ಗೆ ಇನ್ನೂ ಯೋಚಿಸಿಲ್ಲ.. ಕೋವಿಡ್​ನಿಂದ ಎರಡು ವರ್ಷಗಳು ಕಳೆದಿವೆ. ನಾನು ನನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ. ನಾನು ಏನನ್ನೂ ಮುಚ್ಚಿಡುವುದಿಲ್ಲ ಮತ್ತು ನಾನೇನೂ ಧೈರ್ಯಶಾಲಿಯಲ್ಲ. ನಾನು ಆರ್ಥಿಕವಾಗಿ ಮಾತ್ರವಲ್ಲದೇ ಹೆಚ್ಚು ಸ್ಥಿರವಾಗಿರಲು ಬಯಸುತ್ತೇನೆ. ನಾನು ಸಂತೋಷವಾಗಿದ್ದರೆ ಮಾತ್ರ ನಾನು ನನ್ನ ಸಂಗಾತಿಯನ್ನು ಸಂತೋಷಪಡಿಸಬಹುದು ಮತ್ತು ನನ್ನ ಕೆಲಸದಿಂದ ಬಹಳಷ್ಟು ಸಂತೋಷ ಬರುತ್ತದೆ ಎಂದು ಉತ್ತರಿಸಿದರು.

ಸೋನಂ ಮತ್ತು ಅರ್ಜುನ್‌ರ ಉಲ್ಲಾಸದ ಪ್ರತಿಕ್ರಿಯೆಗಳು ಪ್ರೇಕ್ಷಕರನ್ನು ಸೆಳೆದವು. ನಂತರ ಕಾಫಿ ಹ್ಯಾಂಪರ್ ಅನ್ನು ಅರ್ಜುನ್ ಗೆದ್ದುಕೊಂಡರು. ಅರ್ಜುನ್ ಕಪೂರ್​ ಅಭಿನಯದ 'ಏಕ್ ವಿಲನ್ ರಿಟರ್ನ್ಸ್' ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದ್ದು, ಚಿತ್ರಮಂದಿರಗಳಲ್ಲಿ ಕಲೆಕ್ಷನ್​ ಜೋರಾಗಿ ಸಾಗುತ್ತಿದೆ.

ಓದಿ: ನಟಿ ನಯನತಾರಾ ಆಸ್ಪತ್ರೆ ಸೇರಲು ಕಾರಣವಾಗಿದ್ದು ಗಂಡನ ವೀಕೆಂಡ್‌ ಸ್ಪೆಷಲ್‌ ಅಡುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.