ವಾಷಿಂಗ್ಟನ್: ಹಾಲಿವುಡ್‌ನ ಜೂಲಿಯಾ ಫಾಕ್ಸ್ ನಟನೆ ಹಾಗು ತಮ್ಮ ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಹೃದಯ ಗದ್ದ ನಟಿ. ಇವರು ತೆರೆಯ ಮೇಲೆ ಮಾತ್ರವಲ್ಲದೇ ದೈನಂದಿನ ಜೀವನದಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಕ್ಯಾಮರಾ ಕಣ್ಣುಗಳನ್ನೂ ತನ್ನೆಡೆ ಸೆಳೆಯುತ್ತಿರುತ್ತಾರೆ. ಇವರ ಪ್ರಯೋಗಾತ್ಮಕ ಮನಸ್ಸು ಯಾವುದಕ್ಕೂ ಹೆದರುವುದಿಲ್ಲ ಎನ್ನಲೇಬೇಕು. ಇದಕ್ಕೊಂದು ಹೊಸ ಉದಾಹರಣೆ ಇಲ್ಲಿದೆ ನೋಡಿ. ಇತ್ತೀಚೆಗೆ ನಟಿ ತಾನು ಧರಿಸಿದ ಒಳ ಉಡುಪುಗಳಲ್ಲೇ ದಿನಸಿ ತರಲು ಸೂಪರ್ ಮಾರ್ಕೆಟ್ಗೆ ಹೋಗಿದ್ದು ಅಚ್ಚರಿ ಮತ್ತು ಕುತೂಹಲಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: ಫೋಟೋ ನೋಡಿ ದಂಗಾದ ಅನುಷ್ಕಾ ಶರ್ಮಾ ಫ್ಯಾನ್ಸ್...... ಆದ್ರೆ ಹಿಂದಿನ ಅಸಲಿಯತ್ತೇ ಬೇರೆ!!!
ತಾನು ಸೂಪರ್ ಮಾರ್ಕೆಟ್ಗೆ ಹೋಗಿರುವುದರ ಬಗ್ಗೆ ಜೂಲಿಯಾ ಫಾಕ್ಸ್ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಕಾನ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ!
ಸ್ಟನ್ನಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೂಲಿಯಾ ಫಾಕ್ಸ್ ಹಂಚಿಕೊಂಡಿದ್ದು, 'ನನ್ನ ವೈಬ್ ಅಪೋಕ್ಯಾಲಿಪ್ಸ್ ಆರ್ಎನ್ಗಾಗಿ ತಯಾರಿ ನಡೆಸುತ್ತಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೂಲಿಯಾ ಹೊಸ ಲುಕ್ಗೆ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ.