ETV Bharat / entertainment

'ಏಕಕಾಲದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡ್ಬೇಡ': ಪುತ್ರಿಗೆ ಶಾರೂಖ್​ ಪತ್ನಿ ಸಲಹೆ - ಕಾಫಿ ವಿತ್ ಕರಣ್ ಪ್ರೋಮೋ

ಏಕಕಾಲದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡಬೇಡ ಅಂತ ನನ್ನ ಮಗಳಿಗೆ ಹೇಳುತ್ತೇನೆ ಎಂದು ಬಾಲಿವುಡ್​ ನಟ​ ಶಾರೂಖ್​ ಖಾನ್​ ಪತ್ನಿ ಗೌರಿ ಖಾನ್​ ಹೇಳಿದ್ದಾರೆ. 'ಕಾಫಿ ವಿತ್​ ಕರಣ್'​ ಕಾರ್ಯಕ್ರಮದ 12 ಸಂಚಿಕೆಯಲ್ಲಿ ಅವರು ಹೀಗಂದರು.

Gauri Khan advises daughter Suhana  Koffee With Karan show  Koffee With Karan show streaming now  Koffee With Karan show in Disney Hotstar  ಏಕಕಾಲದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡಬೇಡ  ಸುಹಾನ್​ಳಿಗೆ ಶಾರೂಖ್​ ಪತ್ನಿ ಗೌರಿ ಖಾನ್ ಸಲಹೆ  ಬಾಲಿವುಡ್​ ಸ್ಟಾರ್​ ಶಾರೂಖ್​ ಖಾನ್  ಕಾಫಿ ವಿತ್ ಕರಣ್ ಪ್ರೋಮೋ  ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ’
ಸುಹಾನ್​ಳಿಗೆ ಶಾರೂಖ್​ ಪತ್ನಿ ಗೌರಿ ಖಾನ್ ಸಲಹೆ
author img

By

Published : Sep 22, 2022, 7:25 AM IST

ಮುಂಬೈ(ಮಹಾರಾಷ್ಟ್ರ): ಇತ್ತೀಚಿನ 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಪ್ರೋಮೋ ಹಾಟ್​ ಟಾಪಿಕ್​ ಆಗಿದೆ. ಕರಣ್​ ಜೋಹರ್​ ನಡೆಸಿಕೊಡುವ ಈ ಶೋದಲ್ಲಿ ಬಾಲಿವುಡ್ ನಟ ಶಾರೂಕ್ ಖಾನ್​ ಪತ್ನಿ ಗೌರಿ ಖಾನ್​ ಸೇರಿದಂತೆ ಮಹಿಪ್​ ಕಪೂರ್ ಮತ್ತು​ ಭಾವನಾ ಪಾಂಡೆ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕರಣ್ ಜೋಹರ್‌​ ಕೇಳುವ ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರಿಸಿದ್ದಾರೆ.

ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರಿಗೆ, ಡೇಟಿಂಗ್ ಬಗ್ಗೆ ಮಗಳು ಸುಹಾನಾ ಖಾನ್​ಗೆ ನಿಮ್ಮ ಸಲಹೆ ಏನು? ಎಂದು ಕೇಳಿದಾಗ, ಏಕಕಾಲದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡಬೇಡ ಎಂದು ಹೇಳುತ್ತೇನೆ ಎಂದರು. ನಂತರದ ಕರಣ್​ ಪ್ರಶ್ನೆಗಳಿಗೆ ಉತ್ತರಿಸಿದ ಗೌರಿ​, ಶಾರುಖ್ ಜೊತೆಗಿನ ಪ್ರೇಮಕಥೆಗೆ ‘ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ’ ಎಂದು ಹೆಸರಿಡುವೆ. ನಮ್ಮ ಪ್ರೇಮಕಥೆಯಲ್ಲಿ ಸಂಘರ್ಷಗಳಿವೆ ಎಂದರು.

"ನಿಮಗೆ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕರೆ, ನಿಮ್ಮೆದುರು ಯಾರು ನಟಿಸಿದರೆ ಒಳ್ಳೆಯದು ಎಂದು ಭಾವಿಸುತ್ತೀರಿ?" ಎಂದು ಕರಣ್ ಅವರು ಮಹಿಪ್ ಕಪೂರ್ ಅವರ​ನ್ನು ಪ್ರಶ್ನಿಸಿದ್ದಾರೆ. ನಾನು ಹೃತಿಕ್ ರೋಷನ್ ಜೊತೆ ನಟಿಸಲು ಬಯಸುತ್ತೇನೆ. ನಮ್ಮ ಜೋಡಿ ಮುದ್ದಾಗಿ ಕಾಣುತ್ತದೆ ಎಂಬ ನಂಬಿಕೆ ನನಗಿದೆ ಎಂದು ಸ್ವಲ್ಪ ನಾಚಿಕೆಯಿಂದಲೇ ಹೇಳುತ್ತಾರೆ. ಇವಿಷ್ಟು ಕಾರ್ಯಕ್ರಮದ ಪ್ರೋಮೋದಲ್ಲಿ ಕಂಡುಬರುವ ವಿಚಾರಗಳು.

ಕಾಫಿ ವಿತ್​ ಕರಣ್​ ಸೀಸನ್​ 7ರ 12ನೇ ಸಂಚಿಕೆ ಇಂದಿನಿಂದ Disney+ Hotstar ನಲ್ಲಿ ಪ್ರಸಾರಗೊಳ್ಳಲಿದೆ.

ಇದನ್ನೂ ಓದಿ: ಅರ್ಜುನ್ ಎಷ್ಟು ಸ್ನೇಹಿತರ ಜೊತೆ ಮಲಗಿದ್ದಾರೆ: ಕರಣ್ ಪ್ರಶ್ನೆಗೆ ಸೋನಂ ಕಪೂರ್ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.