ಪ್ರಸಿದ್ಧ ನಟಿ ಕಾನ್ಸ್ಟನ್ಸ್ ವೂ ತಮಗಾದ ಕೆಟ್ಟ ಅನುಭವದ ಬಗ್ಗೆ ಬಹಿರಂಗಪಡಿಸಿದ್ದಾರೆ. ಎಬಿಸಿ ಕಾಮಿಡಿ 'ಫ್ರೆಶ್ ಆಫ್ ದಿ ಬೋಟ್'ನಲ್ಲಿ ಕೆಲಸ ಮಾಡುತ್ತಿದ್ದಾಗ, ನಿರ್ಮಾಪಕನ ಹೆಸರನ್ನು ಬಹಿರಂಗಪಡಿಸದೇ ತಮಗೆ ಲೈಂಗಿಕ ಕಿರುಕುಳವಾಯಿತು ಎಂದು ನಟಿ ಆರೋಪಿಸಿದ್ದಾರೆ. ಆ ಸಮಯದಲ್ಲಿ ನಾನು ತುಂಬಾ ಹೆದರುತ್ತಿದ್ದೆ ಎಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಅಟ್ಲಾಂಟಿಕ್ ಉತ್ಸವದ ವೇದಿಕೆಯಲ್ಲಿ ವೂ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ಕಾರ್ಯಕ್ರಮದ ಮೊದಲ ಎರಡು ಸೀಸನ್‌ಗಳಲ್ಲಿ ಕಾರ್ಯ ನಿರ್ವಹಿಸಸುತ್ತಿದ್ದಾಗ ನಾನು ತುಂಬಾ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಕೆಟ್ಟ ಅನುಭವ ಎದುರಿಸಬೇಕಾಯಿತು. ಈ ಬಗ್ಗೆ ನಾನು ಬಾಯಿ ಮುಚ್ಚಿಕೊಂಡಿದ್ದೆ. ಏಕೆಂದ್ರೆ ನನಗೆ ಕೆಲಸ ಕಳೆದುಕೊಳ್ಳವ ಭಯ ಕಾಡುತ್ತಿತ್ತು. ನನ್ನ ಕಾರ್ಯಕ್ರಮ ಒಮ್ಮೆ ಯಶಸ್ವಿಯಾದರೆ ಕೆಲಸ ಕಳೆದುಕೊಳ್ಳುವ ಭಯ ಇರುವುದಿಲ್ಲ. ಮತ್ತು ಯಾವುದೇ ರೀತಿಯ ಕಿರುಕುಳವನ್ನು ವಿರೋಧಿಸಿ ಅಲ್ಲಿಂದ ಹೊರಬರಲು ಸಾಧ್ಯವಾಗುತ್ತದೆ ಎಂದರು.
ಈ ಬಗ್ಗೆ ಮಾತನಾಡುವುದು ಮುಖ್ಯ ಎಂದು ನಾನು ಅಂತಿಮವಾಗಿ ಅರಿತುಕೊಂಡೆ. ಆ ಕಾರ್ಯಕ್ರಮವು ಏಷ್ಯನ್ ಅಮೆರಿಕನ್ನರಿಗೆ ಐತಿಹಾಸಿಕವಾಗಿತ್ತು. ಇದು 20 ವರ್ಷಗಳಲ್ಲಿ ನೆಟ್‌ವರ್ಕ್ ಟೆಲಿವಿಷನ್‌ನಲ್ಲಿ ಏಷ್ಯಾದ ಅಮೆರಿಕನ್ನರನ್ನು ಸ್ಟಾರ್ ಮಾಡಲು ಏಕೈಕ ಕಾರ್ಯಕ್ರಮವಾಗಿದೆ. ಆ ಕಾರ್ಯಕ್ರಮದ ಖ್ಯಾತಿಗೆ ಭಂಗವನ್ನುಂಟು ಮಾಡಲು ನಾನು ಬಯಸಲಿಲ್ಲ ಎಂದು ವೂ ಹೇಳಿದ್ದಾರೆ.
ಓದಿ: ದಿನಸಿ ತರಲು ಒಳ ಉಡುಪುಗಳಲ್ಲೇ ರಸ್ತೆಗಿಳಿದ ಹಾಲಿವುಡ್ ನಟಿ ಜೂಲಿಯಾ ಫಾಕ್ಸ್!