ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಒಂದಿಲ್ಲೊಂದು ವಿಷಯಕ್ಕೆ ಸದಾ ಚರ್ಚೆಯಲ್ಲಿದೆ. ವಿದೇಶದಲ್ಲೂ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಅದರಲ್ಲಿ ನಟಿಸಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
ಇಬ್ಬರು ಪಂಡಿತರು ಮಂತ್ರಗಳನ್ನು ಪಠಿಸುತ್ತಿರುವುದನ್ನು ಮತ್ತು ಅನುಪಮ್ ಖೇರ್‌ಗೆ ಹೂವಿನ ಹಾರವನ್ನು ಹಾಕುತ್ತಿರುವುದನ್ನು ಆ ವಿಡಿಯೋದಲ್ಲಿ ಕಾಣಬಹುದು. ಅನುಪಮ್ ಖೇರ್ ಅವರನ್ನು ಭಗವಂತನಂತೆ ಪೂಜಿಸಲಾಗುತ್ತಿದೆ. ಚಿತ್ರದಲ್ಲಿ ಅನುಪಮ್ ಖೇರ್ ಅವರು ಕಾಶ್ಮೀರಿ ಪಂಡಿತ್ ಪುಷ್ಕರನಾಥ್ ಪಂಡಿತ್ ಪಾತ್ರವನ್ನು ನಿರ್ವಹಿಸಿದ್ದಾರೆ.
- " class="align-text-top noRightClick twitterSection" data="
">
ಕಳೆದ ಕೆಲವು ದಿನಗಳಿಂದ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದ ನಂತರ, ಪ್ರತಿ ಮೂರು-ನಾಲ್ಕನೇ ದಿನಕ್ಕೆ ಒಬ್ಬ ಪಂಡಿತ ಅಥವಾ ಪುರೋಹಿತರು ನನ್ನ ಮನೆಯ ಕೆಳಗೆ ಬಂದು ಪೂಜೆ ಮಾಡುತ್ತಾರೆ. ಏನನ್ನೂ ಕೇಳದೆ ಹೊರಟು ಹೋಗುತ್ತಾರೆ. ಅವರ ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ಇದರೊಂದಿಗೆ ‘ಕುಚ್ ಭಿ ಹೋತಾ ಹೈ’ ಎಂಬ ಪದವನ್ನು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: 'ಆರ್ಆರ್ಆರ್' ಸಿನಿಮಾ ನೋಡಿದ ಬಾಲಿವುಡ್ನ ಬಿಗ್-ಬಿ..
'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು, 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ.