ಮಂಡ್ಯ: ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಕಿಂಗ್ ಸ್ಟಾರ್ ಯಶ್, ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಟಾಂಗ್ ನೀಡಿದ್ದಾರೆ. ಉಮ್ಮಡಹಳ್ಳಿಯ ಗ್ರಾಮಸ್ಥರು ನಿಖಿಲ್ ಗೆ ಟಾಂಗ್ ಕೊಡಿ ಎಂದು ಒತ್ತಾಯಿಸಿದರು. ಆರಂಭದಲ್ಲಿ ಟಾಂಗ್ ಬೇಡ ಎಂದ ಯಶ್, ಗ್ರಾಮಸ್ಥರ ಒತ್ತಾಯಕ್ಕೆ ಮಣಿಯಲೇಬೇಕಾಯಿತು.
ನಿಖಿಲ್ ಪ್ರಶ್ನೆಗೆ ಉತ್ತರಿಸಿದ ಯಶ್. ಹೌದಪ್ಪ ನನಗೆ ಬಾಡಿಗೆ ಕಟ್ಟೋದಕ್ಕೆ ಯೋಗ್ಯತೆ ಇಲ್ಲ ಅಂತನೇ ಅನ್ಕೊಳಿ. ಆದ್ರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕದಲ್ಲೂ ಇದ್ದಾರೆ. ನಾನು ಏನು ಮಾಡಿದ್ದೇನೆ ಅಂತ ಕೊಪ್ಪಳ ಅಂತ ಊರಿದೆಯಲ್ಲ ಅಲ್ಲಿ ಹೋಗಿ ಕೇಳು ಎಂದು ಪ್ರತ್ಯುತ್ತರ ನೀಡಿದರು.
ಸುಮಲತಾ ಹೊರಗಿನವರು ಎಂಬ ಜೆಡಿಎಸ್ ಮುಖಂಡ ಆರೋಪಕ್ಕೂ ತಿರುಗೇಟು ನೀಡಿದ ಯಶ್, ಒಂದು ಹೆಣ್ಣು ಮದುವೆಯಾದ್ರೆ ಯಾರ ಮನೆ ಸ್ವಂತ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದರು. ಯಶ್ ಮಾತಿಗೆ ಓಗೊಟ್ಟ ಜನ, ಸುಮಲತಾ ನಮ್ಮವರೇ ಎಂದು ಬೆಂಬಲ ಸೂಚಿಸಿದರು.
ನಂತರ ಸುಮಲತಾ ಕ್ರಮ ಸಂಖ್ಯೆ ಹಾಗೂ ಚಿಹ್ನೆಯ ಬಗ್ಗೆ ಯಶ್ ಜಾಗೃತಿ ಮೂಡಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯಲ್ಲಿ ಯಶ್ ಪ್ರಚಾರ ಮಾಡುತ್ತಿದ್ದು, ಭರ್ಜರಿ ಸ್ವಾಗತ ಸಿಕ್ಕಿದೆ. ತಾಲೂಕಿನ ಉಮ್ಮಹಳ್ಳಿಯಲ್ಲಿ 350 ಕೆಜಿ ತೂಕದ ಸೇಬಿನ ಹಾರ ಹಾಕಿ, ಕ್ರೇನ್ ಮೂಲಕ ಪುಷ್ಪ ವೃಷ್ಟಿ ಸುರಿಸಿ ರಾಕಿ ಭಾಯ್ ಗೆ ಸ್ವಾಗತ ಕೋರಿದರು.
ಇಂದು ಸುಮಾರು 26 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿದ್ದಾರೆ.