ETV Bharat / elections

ಡಿ.ಕೆ ಸುರೇಶ್ ಹ್ಯಾಟ್ರಿಕ್ ಜಯ:ಗೆಲುವಿನ ಹಿಂದಿನ ಕಹಾನಿ ಗೊತ್ತೇ? - kannada news

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಮಕಾಡೆ ಮಲಗಿದೆ. ರಾಜ್ಯ ಕಾಂಗ್ರೆಸ್‌ ಇತಿಹಾಸದಲ್ಲೇ ಈ ಮಟ್ಟದ ಹೀನಾಯ ಸೋಲು ಆ ಪಕ್ಷಕ್ಕೆ ಆಗಿರಲಿಲ್ಲ.ಆದ್ರೆ, ಸಂಪೂರ್ಣವಾಗಿ ನೆಲಕ್ಕಚ್ಚಿರುವ ಕೈ ಪಕ್ಷದ ಗೌರವ ಉಳಿಸಿರುವವರು ಡಿ.ಕೆ ಸುರೇಶ್‌. ಇವರ ಗೆಲುವಿಗೆ ಕಾರಣವಾಗಿರುವ ಅಂಶಗಳೇನು? ನೋಡೋಣ

ಡಿ.ಕೆ. ಸುರೇಶ್ ಮತ್ತು ಡಿ.ಕೆ ಶಿವಕುಮಾರ್
author img

By

Published : May 24, 2019, 5:06 PM IST

ರಾಮನಗರ: ಮೋದಿ ಅಲೆಯ ಪರಿಣಾಮ ರಾಜ್ಯದಲ್ಲಿಯೂ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕ್ಕಚ್ಚಿದೆ.ಆದ್ರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ‌ ಅಭ್ಯರ್ಥಿ‌ಯಾಗಿ ಸ್ಪರ್ಧಿಸಿ ಗೆದ್ದ ಡಿ.ಕೆ. ಸುರೇಶ್ ಕೈ ಪಕ್ಷದ ಗೌರವ ಕಾಪಾಡಿದ್ದಾರೆ.

ಮೈತ್ರಿ ಸರ್ಕಾರದ ಪವರ್‌ಫುಲ್ ಮಿನಿಸ್ಟರ್‌ ಡಿ.ಕೆ ಶಿವಕುಮಾರ್ ಸಹೋದರ ಈ ಭಾರಿಯೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೂರನೇ ಭಾರಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ವಿರುದ್ದ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಮೂರನೇ ಬಾರಿಗೆ ಗೆದ್ದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್ ಭದ್ರಕೋಟೆ. ಮೂರು ಭಾರಿ ಜೆಡಿಎಸ್ ಗೆದ್ದಿರೋದು ಬಿಟ್ಟರೆ ಇಲ್ಲಿ ಬಿಜೆಪಿ ಗೆಲ್ಲಲು ಅವಕಾಶವೇ ಸಿಕ್ಕಿಲ್ಲ.ಈ ಭಾರಿ ಜೆಡಿಎಸ್ ಕೂಡ‌ ಡಿ.ಕೆ.ಸುರೇಶ್ ಜೊತೆಗೂಡಿದ್ದು ಗೆಲುವು ಸಲೀಸಾಗಿದೆ. ವಿಶೇಷವಾಗಿ ಸಿಎಂ ಕೂಡ ಇವರ ಬೆಂಬಲಕ್ಕೆ ನಿಂತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲಿಸಲು ಡಿ.ಕೆ ಬ್ರದರ್ಸ್ ಪಣ ತೊಟ್ಟಿದ್ದಲ್ಲದೇ ಡಿ.ಕೆ. ಸುರೇಶ್ ಸಂಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದರು.

ಇದಿಷ್ಟೇ ಅಲ್ಲದೆ ತಳ ಮಟ್ಟದಿಂದಲೂ ಪಕ್ಷದ ಕಾರ್ಯಕರ್ತರ ವಿಶ್ವಾಸ ಪಡೆಯುವ ಜಾಣ್ಮೆ,ಜೊತೆಗೆ ಕೇಂದ್ರದ ಅನುದಾನ‌ ಹಾಗೂ ನರೇಗಾ ಯೋಜನೆಯಲ್ಲಿ ಅತೀ ಹೆಚ್ಚು ಸಿಂಹಪಾಲು ಪಡೆದು ಗ್ರಾಮೀಣ ಭಾಗದ ರೈತರ ಮನಸ್ಸಿನಲ್ಲಿ ಸ್ಥಾನ ಪಡೆದಿರೋದು ಗೆಲುವಿಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ರಾಮನಗರ : ಮೋದಿ ಎಂಬ ಸುನಾಮಿಯ ಪ್ರಚಂಡ ಅಲೆಯಲ್ಲಿ ಕರ್ನಾಟಕವೂ ಸಂಪುರ್ಣವಾಗಿ ಸ್ವೀಪ್ ಆಗಿದೆ‌, ಆದರೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ‌ಅಭ್ಯರ್ಥಿ‌ ಡಿ.ಕೆ. ಸುರೇಶ್ ಕಾಂಗ್ರೇಸ್ ನ ಏಕೈಕ ವಾರಸುದಾರರಾಗಿರೋದು‌ ನಿಜಕ್ಕೂ ದಾಖಲೆಯೇ‌ ಸರಿ. ಬಹುಮುಖ್ಯವಾಗಿ ರಾಜ್ಯದಲ್ಲಿ‌ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದು ಮೈತ್ರಿ ಸರ್ಕಾರದ ಪವರ್ ಫುಲ್ ಮಿನಿಷ್ಟರ್ ಡಿ.ಕೆ ಶಿವಕುಮಾರ್ ಸಹೋದರ ಈ ಭಾರಿಯೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೂರನೇ ಭಾರಿ ಆಯ್ಕೆ‌ ಬಯಸಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ವಿರುದ್ದ 2 ಲಕ್ಷಕ್ಕು ಅಧಿಕ ಅಂತರದಲ್ಲಿ ಹ್ಯಾಟಿಕ್ ಜಯ ಭಾರಿಸಿದ್ದಾರೆ. ಇವರ ಗೆಲುವಿಗೆ ಪೂರಕವಾಗಿ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸಹಕಾರಿಯಾಗಿದೆ ಅಲ್ಲದೆ ಕಳೆದ ಎರಡು ಬಾರಿ ಸಂಸದರಾಗಿದ್ದು ಅನುಭವ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇವರ ಕೈ ಹಿಡಿದಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್ ಭದ್ರಕೋಟೆ ಮೂರು ಭಾರಿ ಜೆಡಿಎಸ್ ಗೆದ್ದಿರೋದು ಬಿಟ್ಟರೆ ಇಲ್ಲಿ ಬಿಜೆಪಿ ಗೆಲ್ಲಲ್ಲು ಅವಕಾಶವೇ ಆಗಿಲ್ಲ. ಈ ಭಾರಿ ಜೆಡಿಎಸ್ ಕೂಡ‌ ಡಿ.ಕೆ.ಸುರೇಶ್ ಜೊತೆಗೂಡಿದ್ದು ಗೆಲ್ಲಲು ಕಷ್ಟಪಡಬೇಕೆಂದಿಲ್ಲ , ವಿಶೇಷವಾಗಿ ಸಿಎಂ ಕೂಡ ಇವರ ಬೆಂಬಲಕ್ಕಿರೋದು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿ ಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನ ಗೆಲ್ಲಿಸಲು ಡಿ.ಕೆ ಬ್ರದರ್ಸ್ ಪಣ ತೊಟ್ಟಿದ್ದಲ್ಲದೆ ಡಿ.ಕೆ. ಸುರೇಶ್ ಸಂಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದರು ಅದು ಈ ಭಾರಿ‌ಲೋಕಾ‌ ಚುನಾವಣೆಯಲ್ಲಿ ಕೆಲಸ ಮಾಡಿದೆ. ಜೆಡಿ ಎಸ್ ಕಾಂಗ್ರೆಸ್ ಕಾರ್ಯಕರ್ತರು ಜೊತೆಜೊತೆಗೆ ಕೊಂಡೋಯ್ದಿದ್ದು ಕೂಡ ಗೆಲುವು ಪಡೆಯಲು ಪ್ರಮುಖ ಕಾರಣ ಎನ್ನಬಹುದು.. ಇದಷ್ಟೇ ಅಲ್ಲದೆ ತಳ ಮಟ್ಟದಿಂದಲೂ ಪಕ್ಷದ ಕಾರ್ಯಕರ್ತರ ಜೊತೆಗೂಡಿ ವಿಶ್ವಾಸಕ್ಕೆ ಪಡೆಯುವ ಜಾಣ್ಮೆ ಜೊತೆಗೆ ಕೇಂದ್ರದ ಅನುದಾನ‌ ಹಾಗೂ ನರೇಗಾ ಯೋಜನೆಯಲ್ಲಿ ಅತಿ ಹೆಚ್ಚು ಸಿಂಹಪಾಲು ಪಡೆದು ಗ್ರಾಮೀಣ ಭಾಗದ ರೈತರ ಮನಸ್ಸಲ್ಲಿ ಜಾಗ ಮಾಡಿಕೊಂಡಿರೋದು ಹಾಗೂ ಅಣ್ಣ ತಮ್ಮ ಇಬ್ಬರೂ ಕ್ಷೇತ್ರದ ಅಭಿವೃದ್ಧಿ ಗೆ ಸಾಕಷ್ಟು ಸರ್ಕಾರದ ಹಣ ಮಂಜೂರು ಮಾಡಿಸಿ ಕೆಲಸ ಮಾಡಿರೋದು ವರವಾಗಿ ಪರಿಣಮಿಸಿಯೇ ಗೆಲುವಿನ‌ ನಗೆ ಬೀರಿದ್ದಾರೆ. ಒಟ್ಟಾರೆ ರಾಜ್ಯದಲ್ಲಿಯ‌ ಘಟಾನುಘಟಿ‌ ಕಾಂಗ್ರೇಸ್ ನಾಯಕರೇ ಲೆಕ್ಕಕ್ಕಿಲ್ಲದಂತೆ ಸೋತು ಸುಣ್ಣವಾಗಿದ್ದಾರೆ ಆದರೆ ಕಾಂಗ್ರೇಸ್ ಹೆಸರೇಳಲೆಂದೇ ಡಿ.ಕೆ.ಸುರೇಶ್ ಗೆದ್ದಿದ್ದಾರೆ ಅಲ್ಲದೆ ಆ‌ಮೂಲಕ ಎರಡು‌ ದಾಖಲೆ‌ಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.