ETV Bharat / elections

ಮಂಡ್ಯದ ಗೆಲುವು ಪತಿಗೆ ಅರ್ಪಣೆ,ಸಮಾಧಿ ಬಳಿ ಸುಮಲತಾ ವಿಶೇಷ ಪೂಜೆ - kannada news

ಲೋಕಸಭೆ ಚುನಾವಣೆಯ ಗೆಲುವಿನ ಪ್ರಮಾಣ ಪತ್ರವನ್ನು ಅಂಬಿ ಸಮಾಧಿ ಬಳಿ ಇಟ್ಟು ಸುಮಲತಾ ಅಂಬರೀಶ್ ಪೂಜೆ ಸಲ್ಲಿಸಿದರು.

ಅಂಬಿ ಸಮಾದಿ ಬಳಿ ಗೆಲುವಿನ ಪ್ರಮಾಣ ಪತ್ರ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್.
author img

By

Published : May 24, 2019, 5:58 PM IST

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಭೇಟಿ ಕೊಟ್ಟರು. ಈ ವೇಳೆ ಅವರು ಚುನವಣಾ ಆಯೋಗ ನೀಡಿದ ಗೆಲುವಿನ ಪ್ರಮಾಣ ಪತ್ರವನ್ನು ಸಮಾಧಿ ಬಳಿ ಇಟ್ಟು ವಿಶೇಷ ಪೂಜೆ ನೆರವೇರಿಸಿದರು.

ಅಂಬಿ ಸಮಾದಿ ಬಳಿ ಗೆಲುವಿನ ಪ್ರಮಾಣ ಪತ್ರ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್

ಮಂಡ್ಯದಲ್ಲಿ ಅಮೋಘ ವಿಜಯ ಸಾಧಿಸಿದ ಸುಮಲತಾ ಅಂಬರೀಶ್,ಇಂದು ಬೆಳಿಗ್ಗೆ ಅಂಬಿ ಸಮಾಧಿಗೆ ಭೇಟಿ ಕೊಟ್ಟರು. ಈ ವೇಳೆ ಅವರು, ಗೆಲುವಿನ ಪ್ರಮಾಣ ಪತ್ರ ಹಾಗು ತನ್ನ ಪತಿಯ ನೆಚ್ಚಿನ ಮಾಂಸಹಾರಿ ಖಾದ್ಯವನ್ನಿಟ್ಟು ಪೂಜೆ ಸಲ್ಲಿಸಿದರು. ಈ ವೇಳೆ ಬಾವುಕರಾದ ಸುಮಲತಾ, ಸಮಾಧಿಯ ಬಳಿ ಸ್ವಲ್ಪ ಸಮಯ ಧ್ಯಾನದ ಮೊರೆ ಹೋದರು. ನಂತರ ಅಭಿಮಾನಿಗಳತ್ತ ಗೆಲುವಿನ ಪ್ರಮಾಣಪತ್ರವನ್ನು ಪ್ರದರ್ಶಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪುತ್ರ ಅಭಿಷೇಕ್ ಅಂಬರೀಶ್,ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್,ದೊಡ್ಡಣ್ಣ,ನಟ ಆದಿತ್ಯ, ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್‌ ಬಾಬು ಮತ್ತಿತರು ಹಾಜರಿದ್ದು ಅಂಬಿ ಸಮಾಧಿಗೆ ಗೌರವ ಸಲ್ಲಿಸಿದರು.

ಮಂಡ್ಯದಿಂದ ಆಗಮಿಸಿದ ಸಾವಿರಾರು ಅಭಿಮಾನಿಗಳು ಈ ಸಂದರ್ಭಕ್ಕೆ ಸಾಕ್ಷಿಯಾದರು.ಅಭಿಮಾನಿಗಳಿಗಾಗಿ ಸುಮಲತಾ ಊಟ ಹಾಗೂ ಕಬ್ಬಿನ ಹಾಲಿನ ವ್ಯವಸ್ಥೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.