- ರಫೇಲ್ ಡೀಲ್ನಲ್ಲಿ ಕಳ್ಳತನ ಮಾಡಿ 30 ಸಾವಿರ ಕೋಟಿ ಕೊಳ್ಳೆ ಹೊಡೆದವರಾರು
- ಬೆಂಗಳೂರಿನ ಹೆಚ್ಎಎಲ್ ಗೆ ಬರಬೇಕಾದ ಟೆಂಡರ್ ಮಿತ್ರ ಅನಿಲ್ ಅಂಬಾನಿಗೆ ಕೊಟ್ಟಿದ್ದಾರೆ
- ಹಳೆ ನೋಟುಗಳ ನಿಷೇಧದಿಂದ ಸಣ್ಣ ರೈತರ ಬೆನ್ನೆಲಬನ್ನೇ ಮುರಿದರು
- ಭದ್ರತೆ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ ಮೋದಿ
- ಜಿಎಸ್ಟಿ ಮೂಲಕ ಬಡವರ ಹಣ ಕೊಳ್ಳೆ ಹೊಡೆಯಲಾಗಿದೆ
- ಜಿಎಸ್ಟಿಯಿಂದ ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದ ಜನ ಕಷ್ಟ ಅನುಭವಿಸುತ್ತಿದ್ದಾರೆ
- ಕರ್ನಾಟಕದ ಹಾಗೂ ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ಮಾಡಿ ಕಟ್ಟದೇ ಇದ್ದರೆ ಜೈಲಿಗೆ ಹಾಕ್ತಿದ್ದಾರೆ
- ನಮ್ಮ ಸರ್ಕಾರ ಬಂದರೆ ರೈತರ ವಿರುದ್ಧದ ಎಲ್ಲ ಕೇಸ್ಗಳನ್ನ ವಾಪಸ್ ಪಡೆಯುತ್ತೇನೆ
- ರೈತರನ್ನು ಬಂಧಿಸದಂತೆ ವಿಶೇಷ ಕಾನೂನು ರೂಪಿಸುತ್ತೇವೆ
- 10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಜಾರಿಗೆ ತರುತ್ತೇವೆ
- ಕೋಟಿ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ
- ರೈತರ ಸಾಲ ಮನ್ನಾ ಮಾಡುತ್ತೇವೆ. ಇದು ನಾವು ನಿಮಗೆ ನೀಡುವ ಭರವಸೆ
- ಸಿಎಂ ಕುಮಾರಸ್ವಾಮಿ ಈಗಾಗಲೇ 11 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ
- ಈ ಬಾರಿ ನರೇಂದ್ರ ಮೋದಿ ಅವರನ್ನ ಅಧಿಕಾರದಿಂದ ಕೆಳಗಿಳಿಸಿ ಎಂದು ಜನರಿಗೆ ಕರೆ ನೀಡಿದರು.
- ರಾಯಚೂರಿನಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ ಮೈತ್ರಿ ನಾಯಕರು
- 15 ಲಕ್ಷ ನೀಡ್ತೇನಿ ಎಂದು ಸುಳ್ಳು ಹೇಳಿದರು.. ಹೌದು ನಿಮಗೆ 15 ಪೈಸೆ ಆದರೂ ಬಂದಿದೆಯಾ?
- ನಾವು ಸುಳ್ಳು ಹೇಳಲ್ಲ, ಮೋದಿ ಹಾಗೆ ನಾವು ಅನ್ಯಾಯ ಮಾಡಲ್ಲ
- ಅದಕ್ಕಾಗಿ ನಾವು ನ್ಯಾಯ್ ಯೋಜನೆ ಜಾರಿಗೆ ತರುತ್ತೇವೆ
- ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ವರ್ಷಕ್ಕೆ 72 ಸಾವಿರ ರೂ ಕೊಡುತ್ತೇವೆ
- ನಾವು 15 ಲಕ್ಷದ ಸುಳ್ಳು ಭರವಸೆ ನೀಡಲ್ಲ, ನಾವು ನೇರವಾಗಿ ತಿಂಗಳಿಗೆ ಆರು ಸಾವಿರ ಬ್ಯಾಂಕ್ ಖಾತೆಗೆ ಹಾಕುತ್ತೇವೆ
- ನಾವು ಕರ್ನಾಟಕ, ಪಂಜಾಬ್, ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ಸಾಲ ಮನ್ನಾ ಮಾಡಿದ್ದೇವೆ
- ಕರ್ನಾಟಕದಲ್ಲಿ 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇವೆ
- ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ 10 ದಿನದೊಳಗೆ ಸಾಲ ಮನ್ನಾ ಮಾಡಿದ್ದೇವೆ
- ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ