ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದ್ದು ಭಾರತೀಯ ಜನತಾ ಪಾರ್ಟಿ ಈ ಬಾರಿಯ ಸ್ಲೋಗನ್ ಹಾಗೂ ಥೀಮ್ ಸಾಂಗ್ ರಿಲೀಸ್ ಮಾಡಿದೆ.
ಎಲ್ಲ ಪಕ್ಷಗಳು ಅತ್ಯಂತ ಗಂಭೀರವಾಗಿ ಈ ಬಾರಿಯ ಚುನಾವಣೆಯನ್ನು ಪರಿಗಣಿಸಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಆಡಳಿತದಲ್ಲಿರುವ ಬಿಜೆಪಿಗೆ ಪಟ್ಟ ಉಳಿಸಿಕೊಳ್ಳುವ ಒತ್ತಡದ ನಡುವೆ ತಮ್ಮ ಐದು ವರ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿವೆ.
-
Delhi: BJP releases party's tag line and theme song for the #LokSabhaElections2019 pic.twitter.com/wbRKzp92wX
— ANI (@ANI) April 7, 2019 " class="align-text-top noRightClick twitterSection" data="
">Delhi: BJP releases party's tag line and theme song for the #LokSabhaElections2019 pic.twitter.com/wbRKzp92wX
— ANI (@ANI) April 7, 2019Delhi: BJP releases party's tag line and theme song for the #LokSabhaElections2019 pic.twitter.com/wbRKzp92wX
— ANI (@ANI) April 7, 2019
'ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎನ್ನುವ ಟ್ಯಾಗ್ಲೈನ್ ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಬಳಸಲಿದೆ. ಕಳೆದ ಬಾರಿಯ ಲೋಕಸಮರದಲ್ಲಿ 'ಅಬ್ ಕಿ ಬಾರ್ ಮೋದಿ ಸರ್ಕಾರ್' ಎನ್ನುವ ಘೋಷವಾಕ್ಯವನ್ನು ಬಳಸಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಿತ್ತು.
ಏಪ್ರಿಲ್ 11ರಿಂದ ಆರಂಭವಾಗುವ ಲೋಕಸಭಾ ಚುನಾವಣೆಯಲ್ಲಿ ಸುಮಾರು 90 ಕೋಟಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ.