ETV Bharat / crime

ಎಚ್ಚರ.. ಎಚ್ಚರ.. ಕಿವಿಯಲ್ಲಿದ್ದ ಬ್ಲ್ಯೂಟೂತ್‌ ಇಯರ್‌ಫೋನ್‌ ಸ್ಫೋಟಗೊಂಡು ಯುವಕ ಸಾವು - ಬ್ಲೂಟೂತ್ ಇಯರ್‌ಫೋನ್ ಕಿವಿಯಲ್ಲಿ ಸ್ಫೋಟಗೊಂಡು ಯುವಕ ಸಾವು

ಸ್ಫೋಟದ ನಂತರ ರಾಕೇಶ್ ಕುಸಿದು ಬಿದ್ದು ಪ್ರಜ್ಞಾಹೀನನಾಗಿದ್ದ. ಹೃದಯಾಘಾತವೂ ಈತನ ಸಾವಿಗೆ ಮುಖ್ಯ ಕಾರಣವಾಗಿರಬಹುದು. ಇಂತಹ ಪ್ರಕರಣ ಬಹುಶಃ ದೇಶದಲ್ಲಿ ಇದೇ ಮೊದಲು..

Youth dies in Jaipur after Bluetooth earphone explodes in his ear
ಎಚ್ಚರ...ಎಚ್ಚರ... ಕಿವಿಯಲ್ಲಿದ್ದ ಬ್ಲೂಟೂತ್‌ ಇಯರ್‌ಫೋನ್‌ ಸ್ಫೋಟಗೊಂಡು ಯುವಕ ಸಾವು...!
author img

By

Published : Aug 6, 2021, 9:42 PM IST

ಜೈಪುರ್(ರಾಜಸ್ಥಾನ): ಬ್ಲ್ಯೂಟೂತ್ ಇಯರ್‌ಫೋನ್ ಕಿವಿಯಲ್ಲಿ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜೈಪುರದ ಚೌಮು ಪಟ್ಟಣದಲ್ಲಿಂದು ನಡೆದಿದೆ. ಚೌಮು ಪಟ್ಟಣದ ಉದೈಪುರಿಯಾ ಗ್ರಾಮದ ನಿವಾಸಿ ರಾಕೇಶ್‌ ಮೃತ ದುರ್ದೈವಿ.

ಇಯರ್‌ ಫೋನ್‌ ಸ್ಫೋಟದಿಂದ ಗಾಯಗೊಂಡಿದ್ದ ರಾಕೇಶ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಿದ್ಧಿವಿನಾಯಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾಕೇಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಕೇಶ್ ಬ್ಲ್ಯೂಟೂತ್ ಇಯರ್‌ಫೋನ್‌ನೊಂದಿಗೆ ಮಾತನಾಡುತ್ತಿದ್ದಾಗ ಸ್ಫೋಟಗೊಂಡಿದೆ ಎಂದು ಸಿದ್ಧಿ ವಿನಾಯಕ ಆಸ್ಪತ್ರೆಯ ಡಾ.ಎಲ್ ಎನ್ ರುಂಡಾಲ್‌ ಮಾಹಿತಿ ನೀಡಿದ್ದಾರೆ. ಸ್ಫೋಟದ ನಂತರ ರಾಕೇಶ್ ಕುಸಿದು ಬಿದ್ದು ಪ್ರಜ್ಞಾಹೀನನಾಗಿದ್ದ. ಹೃದಯಾಘಾತವೂ ಈತನ ಸಾವಿಗೆ ಮುಖ್ಯ ಕಾರಣವಾಗಿರಬಹುದು. ಇಂತಹ ಪ್ರಕರಣ ಬಹುಶಃ ದೇಶದಲ್ಲಿ ಇದೇ ಮೊದಲು ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.