ETV Bharat / crime

ಆರ್ಥಿಕ ಸಂಕಷ್ಟ.. ತಂಗಿ ಮದುವೆ ದಿನವೇ ಭದ್ರಾವತಿಯಲ್ಲಿ ಕಾರ್ಮಿಕ ಆತ್ಮಹತ್ಯೆ

ತಂಗಿಯ ಮದುವೆ ದಿನದಂದು ಯುವಕ ಆತ್ಮಹತ್ಯೆಗೆ ಶರಣು- ಆರ್ಥಿಕ ಸಂಕಷ್ಟದಿಂದ ಬೇಸತ್ತು ದುಡುಕು ನಿರ್ಧಾರ - ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

shivamogga
ಆತ್ಮಹತ್ಯೆಗೆ ಶರಣಾದ ಯುವಕ
author img

By

Published : Feb 6, 2023, 12:30 PM IST

Updated : Feb 6, 2023, 12:54 PM IST

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಗುತ್ತಿಗೆ ಕಾರ್ಮಿಕನೊಬ್ಬ ತನ್ನ ತಂಗಿಯ ಮದುವೆ ದಿನವೇ ಆತ್ಮಹತ್ಯೆಗೆ ಮಾಡಿಕೊಂಡಿರುವ ದಾರುಣ ಘಟನೆ ನಿನ್ನೆ ಭದ್ರಾವತಿಯಲ್ಲಿ ನಡೆದಿದೆ. ಚೇತನ್ ಕುಮಾರ್ (32) ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಮಿಕ.

ಚೇತನ್ ಕುಮಾರ್​ ಅವರು ಕಳೆದ 8 ವರ್ಷಗಳಿಂದ ವಿಐಎಸ್ಎಲ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಸಹೋದರಿಯ ಮದುವೆಯು ನಿನ್ನೆ ಭದ್ರಾವತಿ ಪಟ್ಟಣದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಏರ್ಪಾಡಾಗಿತ್ತು. ಅತ್ತ ಮದುವೆ ಸಾಗುತ್ತಿದ್ದರೆ ಇತ್ತ ಚೇತನ್ ಕಲ್ಯಾಣ ಮಂದಿರದ ಹಿಂಭಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸಾವಿನ ವಿಚಾರ ತಿಳಿದ ಪೋಷಕರು ಮದುವೆ ನಿಂತರೆ ಪುನಃ ಮದುವೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಿನ್ನೆಯೇ ಮದುವೆ ಮಾಡಿ ಮುಗಿಸಿದ್ದಾರೆ.

ವಿಐಎಸ್ಎಲ್ ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ 10 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಇದರಿಂದ ಚೇತನ್​ ಅವರಿಗೆ ಮನೆ ನಡೆಸಿಕೊಂಡು ಹೋಗಲು ಕಷ್ಟವಾಗುತ್ತಿತ್ತು. ಆದರೆ ಇತ್ತೀಚೆಗೆ ಚೇತನ್​ರ ಸಹೋದರಿಗೆ ಮೆಸ್ಕಾಂನಲ್ಲಿ ಕೆಲಸ ಸಿಕ್ಕಿತ್ತು. ಇದರಿಂದ ಸಂಸಾರ ನಡೆದು‌ಕೊಂಡು ಹೋಗುತ್ತಿತ್ತು. ಆದರೆ ತಂಗಿ ಮದುವೆಯಾದರೆ ಮನೆ ನಡೆಸುವುದು, ವಯಸ್ಸಾದ ತಂದೆ ತಾಯಿ ನೋಡಿಕೊಳ್ಳುವುದು ಹೇಗೆ ಎಂದು ನೊಂದ ಚೇತನ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ.. ಕಲಬುರಗಿಯಲ್ಲಿ ಹುಚ್ಚಾಟ ಮೆರೆದ ವ್ಯಕ್ತಿ‌ ಮೇಲೆ ಪೊಲೀಸ್​ ಫೈರಿಂಗ್‌

ವಿಜಯಪುರದಲ್ಲಿ ಆತ್ಮಹತ್ಯೆಗೆ ಶರಣಾದ ರೈತ: ದ್ರಾಕ್ಷಿ ಬೆಳೆಗೆ ತಪ್ಪಾದ ಜೌಷಧಿ ಸಿಂಪಡಿಸಿದ್ದರಿಂದ ಇಡೀ ತೋಟವೇ ಒಣಗಿ ಹೋಗಿತ್ತು. ಇದರಿಂದ ನೊಂದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ಮನೋಹರ್​ ಆಯತವಾಡ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದರು. 5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 4 ಎಕರೆಯಲ್ಲಿ ರೈತ​ ದ್ರಾಕ್ಷಿ ಬೆಳೆ ಬೆಳೆಸಿದ್ದರು. ಉತ್ತಮ ಫಸಲು ಕೂಡ ಬಂದಿತ್ತು. ರಕ್ಷಣೆಗಾಗಿ ರೈತ ರಸಗೊಬ್ಬರ ಅಂಗಡಿಯಿಂದ ಔಷಧ ಖರೀದಿಸಿ ಸಿಂಪಡಿಸಿದ್ದರು. ಹೀಗೆ ಸಿಂಪಡಿಸಿದ ಕೆಲವೇ ದಿನಗಳಲ್ಲಿ ಇಡೀ ಬೆಳೆ ಒಣಗಿ ಹೋಗಿ ದ್ರಾಕ್ಷಿ ಬಳ್ಳಿ ಪೂರ್ಣ ನೆಲಕ್ಕುರುಳಿತ್ತು. ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಮನಗರದಲ್ಲಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಯತ್ನ: ಸಾಲಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ಫೆಬ್ರವರಿ 2 ಗುರುವಾರದಂದು ವರದಿಯಾಗಿತ್ತು. 7 ಜನರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, 6 ಜನರ ಸ್ಥಿತಿ ಚಿಂತಾಜನಕವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಕಾಂಪೌಂಡ್ ಹಾರಿ ಟೆರೇಸ್​​ ತಲುಪಿದ ಪ್ರಿಯಕರ: ಏಕಾಂತದಲ್ಲಿದ್ದಾಗ ದಿಢೀರ್​ ಬಂದ ಪ್ರೇಯಸಿಯ ತಾಯಿ.. ನಡೀತು ದುರಂತ

Last Updated : Feb 6, 2023, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.