ಮೈಸೂರು: ಬಡತನ, ಅನಾರೋಗ್ಯದಿಂದ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತಾ ನಗರದಲ್ಲಿ ನಡೆದಿದೆ.
ರಕ್ಷಿತಾ( 20) ಮೃತ ದುರ್ದೈವಿ.
ಆಟೋ ಓಡಿಸಿ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಮಹದೇವ್ ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದರು. ಮೃತಳ ತಾಯಿ ಮನೆ ಕೆಲಸ ಮಾಡಿಕೊಂಡಿ ಸಂಸಾರದೂಡುತ್ತಿದ್ದರು. ಕುಟುಂಬ ಆರ್ಥಿಕ ಮುಗ್ಗಟ್ಟನ್ನ ಎದುರಿಸುತ್ತಿದ್ದ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.