ಸಂಬಲ್ (ಉತ್ತರ ಪ್ರದೇಶ): ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಕೆಲವೇ ದಿನಗಳ ಬಳಿಕ ಸಂತ್ರಸ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜನವರಿ 27 ರಂದು ಸಂಬಲ್ ಜಿಲ್ಲೆಯ ಗ್ರಾಂಪುರಾ ಗ್ರಾಮದ ಯುವತಿ, ಯುವಕನೊಬ್ಬನ ವಿರುದ್ಧ ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದಳು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದೂ ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಮಹಿಳೆ ಮೇಲೆ 60 ಕಾಮುಕರಿಂದ ಅತ್ಯಾಚಾರ ಆರೋಪ : ತನಿಖೆ ಕೈಗೊಂಡ ಪೊಲೀಸರು
ಆದರೆ ಈಗ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.